ವಿವಿಧ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ವ್ಯಕ್ತಿ ಗಡಿಪಾರು
Man involved in various illegal activities deported
ಬೆಳಗಾವಿ 11: ವಿವಿಧ ಅಕ್ರಮ ಚಟುವಟಿಕೆಗಳಾದ ಮಟಕಾ ಜೂಜಾಟ ಹಾಗೂ ಸಮಾಜಘಾತುಕ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರಿಂದ, ಅಲ್ಲದೇ ಸದರಿಯವನ ಮೇಲೆ ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದ ವ್ಯಕ್ತಿಯನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ನಗರದ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂಗಾಂಧಿನಗರ ನೂರಾನಿಗಲ್ಲಿ ಮನೆ ನಂ-212ರ ನಿವಾಸಿ ಜಾವೇದ ಮೊಹಮ್ಮದ ಶೇಖ(50) ಎಂಬುವವನು ಗಡಿಪಾರಿಗೆ ಒಳಗಾಗಿದ್ದಾನೆ.
ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 5 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಮಾಳಮಾರುತಿ ಪೊಲೀಸ್ ಠಾಣೆಯ ಪಿಐ ಜೆ. ಎಂ. ಕಾಲಿಮಿರ್ಚಿ, ಪಿಎಸ್‌ಐ ಹೊನ್ನಪ್ಪಾ ತಳವಾರ ಮತ್ತು ಸಿಎಚ್‌ಸಿ-1157ಕೆ. ಬಿ. ಗೌರಾಣಿ, ಅವರುಗಳ ತಂಡವು ಗಡಿಪಾರು ಪ್ರಸ್ತಾವಣೆಯನ್ನು ತಯಾರಿಸಿ, ಎಸ್.ಡಿ. ಸತ್ಯನಾಯ್ಕ, ಎಸಿಪಿ ಮಾರ್ಕೇಟ ರವರ ಅನುಮೋದನೆಯೊಂದಿಗೆ ಪೊಲೀಸ್ ಆಯುಕ್ತರ ಕಛೇರಿಗೆ ಪ್ರಸ್ತಾವಣೆ ಸಲ್ಲಿಸಿತ್ತು.
ನಗರ ಪೊಲೀಸ್ ಆಯುಕ್ತ ಬೊರಸೆ ಭೂಷಣ್ ಗುಲಾಬರಾವ್ ಅವರ ಮಾರ್ಗದರ್ಶನದಲ್ಲಿ, ಗಡಿಪಾರು ಪ್ರಸ್ತಾವಣೆಯನ್ನು ಐ.ಪಿ.ಎಸ್ ರೋಹನ್ ಜಗದೀಶ್, ಉಪ ಪೊಲೀಸ್ ಆಯಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಬೆಳಗಾವಿ ನಗರ ಅವರು ಗಡಿಪಾರು ನ್ಯಾಯಾಂಗ ವಿಚಾರಣೆಯನ್ನು ಕೈಕೊಂಡು, ದಿ.10ರಂದು ಆರೋಪಿತನನ್ನು ಉಡುಪಿ ಜಿಲ್ಲೆಯ ಕುಂದಾಪೂರ ಠಾಣೆ ವ್ಯಾಪ್ತಿಗೆ 6 ತಿಂಗಳ ಅವಧಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿರುತ್ತಾರೆ.
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ 