ಲೋಕದರ್ಶನ ವರದಿ
ಬೆಳಗಾವಿ 24: ತಾಲೂಕಿನ ಸುಕ್ಷೇತ್ರ ಮುಕ್ತಿ ಮಠವು ನಿಸರ್ಗ ರಮಣೀಯ ಪುಣ್ಯ ಮಯ ಧಾಮರ್ಿಕ ಜಾಗ್ರತೆಯ ಸ್ಥಳವಾಗಿದೆ, ಇಲ್ಲಿಯ ಪೀಠಾಧಿಪತಿ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು ಭಕ್ತರ ಉದ್ಧಾರಕ್ಕಾಗಿ ನಿರಂತರ ಜಪ, ತಪ, ಹೋಮಗಳಿಂದ ಶ್ರಮಿಸುತ್ತಿರುವರು, ಅವರ ಪ್ರಯತ್ನ, ಸಾಧನೆಯಿಂದ ಕಾಡು ನಾಡಾಗಿ ಭಕ್ತಿಯ ಪುಣ್ಯ ಕ್ಷೇತ್ರವಾಗಿದೇ ಎಂದು ಬ್ರಹ್ಮಾಂಡ ಗುರೂಜಿ ಎಂದೇ ಖ್ಯಾತಿ ಹೊಂದಿರುವ ಬೆಂಗಳೂರಿನ ಸಂಪೂರ್ಣ ವರಮಹಾಲಕ್ಷ್ಮಿ ಸಂಸ್ಥಾನದ ಧರ್ಮದಶರ್ಿ ನರೇಂದ್ರ ಬಾಬು ಶಮರ್ಾ ಹೇಳಿದರು.
ಮುಕ್ತಿಮಠದ ಜಾತ್ರಾಮಹೋತ್ಸವದ ಧರ್ಮ ಸಭೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಮನುಷ್ಯನ ಬದುಕಿಗೆ ಧರ್ಮದ ಸಂಸ್ಕಾರ ಅವಶ್ಯಕತೆ ಇದೆ ಪ್ರತಿಯೊಬ್ಬರು ಧರ್ಮದ ಆಧಾರಿತ ಬದುಕು ಸಾಗಿಸಬೇಕು ಅಂಥ ಸಂಸ್ಕೃತಿ, ಸಂಸ್ಕಾರ ಮುಕ್ತಿ ಮಠ ನೀಡಿದ್ದು ಭಕ್ತರ ಪಾಲಿಗೆ ಕಾಮಧೇನು ವಾಗಿದ್ದು, ಇಲ್ಲಿಯ ಶ್ರೀಗಳು ತಪೋಶಕ್ತಿ ಹೊಂದಿರುವವರು, ಅವರ ಧಾಮರ್ಿಕ ಕಾರ್ಯ ಜನಮಾನಸದಲ್ಲಿ ಉಳಿದಿದೆ, ಕನರ್ಾಟಕ, ಮಹಾರಾಷ್ಟ್ರ, ಗೋವಾ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಯ ಭಕ್ತರು ಆಗಮಿಸುವದನ್ನು ಕಂಡರೆ ಸಂತೋಷ ವಾಗುತ್ತದೆ ಎಂದರು.
ವ್ಯಸನ ಮುಕ್ತ ಸುಂದರವಾದ ಸಮಾಜದ ನಿಮರ್ಾಣಕ್ಕೆ ಶ್ರಮಿಸಿ ಪುಣ್ಯಕ್ಷೇತ್ರ ವನ್ನಾಗಿಸಿದ್ದಾರೇ ಮುಕ್ತಾಂಭಿಕಾ ದೇವಿ ಇಲ್ಲಿದ್ದು ಸರ್ವರೀತಿಯ ಕಷ್ಟ ಗಳನ್ನು ನಿವಾರಣೆ ಮಾಡಿದ ಮಹಾ ತಾಯಿ ಎಂದರು. 2021ರಲ್ಲಿ ಶ್ರೀಗಳು ಸಂಕಲ್ಪ ಮಾಡಿರುವ ಕೋಟಿ ದೀಪೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲೆಂದು ಆಶಯ ವ್ಯಕ್ತ ಪಡಿಸಿದರು.
ಮುಕ್ತಿಮಠದ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯಮಹಾಸ್ವಾಮಿಗಳವರು ಹಾಗೂ ಬ್ರಹ್ಮಾಂಡ ಗುರೂಜಿ ಚಂದಗಡದ ಪಂಡಿತ್ ಡಾ, ಬಿ ಎ, ಹಿರೇಮಠ ರವರ ಜೀವನ ಸಾಧನೆ ಕುರಿತು "ರಸಲಿಂಗ ದರ್ಶಕ"ಎಂಬ ಗ್ರಂಥವನ್ನು ಬಿಡುಗಡೆ ಮಾಡಿದರು.
ಈ ಧರ್ಮಸಭೆಯಲ್ಲಿ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು, ಹಿರೇಮುನವಳ್ಳಿಯ ಶಾಂಡಿಲೇಶ್ವರ ಮಠದ ಶಂಭು ಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರು, ಇಟಗಾದ ಚನ್ನಮಲ್ಲೇಶ್ವರ ಮಹಾ ಸ್ವಾಮೀಜಿ, ಸೇರಿದಂತೆ ಹಲವು ಮುಖಂಡರು, ಮಠಾಧೀಶರು ಉಪಸ್ಥಿತರಿದ್ದರು ಸಂಕೇಶ್ವರದ ನಾಗಪ್ಪಣ್ಣಾ ಕಾರಜಗಿ, ಯರಗುಪ್ಪಿಯ ಜಗದೀಶ್ ಬೂದಿಹಾಳ, ಪಂಚ ಕಮೀಟಿ ಸದಸ್ಯ ರು ಉಪಸ್ಥಿತರಿದ್ದರು ಶಂಕರಯ್ಯ ಚರಲಿಂಗಮಠ, ಸ್ವಾಗತಿಸಿದರು, ರವಿಕುಮಾರ್ ಹಿರೇಮಠ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.