ಬಂಗಾಳದ ಅಭಿವೃದ್ಧಿಗೆ ಮಮತಾ ಬ್ಯಾನರ್ಜಿ ಅಡ್ಡಿ: ಪ್ರಧಾನಿ ಮೋದಿ ಆರೋಪ

ಸಿಲಿಗುರಿ, ಏ 3 ತೃಣಮೂಲ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ   ಅಡ್ಡಿಯಾಗಿದ್ದಾರೆ ಎಂದು ಬುಧವಾರ ಗಂಭೀರ ಆರೋಪ ಮಾಡಿದ್ದಾರೆ.

ಉತ್ತರ ಬಂಗಾಳದ ಮಮ್ಮೂತ್ ನಲ್ಲಿ ಏರ್ಪಡಿಸಿದ್ದ ಸಾರ್ಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಭಿವೃದ್ಧಿ ವಿಷಯದಲ್ಲಿ ಪಶ್ಚಿಮ ಬಂಗಾಳ ಇತರ ರಾಜ್ಯಗಳಿಗಿಂತ ಬಹಳ ಹಿಂದೆ ಉಳಿದಿದೆ. ಈ ರಾಜ್ಯದಲ್ಲಿ ಅಭಿವೃದ್ಧಿ ಕೈಗೊಳ್ಳಲು ಅಡ್ಡಿಯಾಗಿರುವ ಈ "ತಡೆ"ಯನ್ನು ತೆಗೆದು ಹಾಕಲು ನಾನು ಕಾಯುತ್ತಿದ್ದೇನೆ ಎಂದು ಮೋದಿ ಹೇಳಿದರು.

ಚಿಟ್ ಫಂಡ್ ಮೂಲಕ ತೃಣಮೂಲ ಕಾಂಗ್ರೆಸ್ ಬಡವರ ಹಣವನ್ನು ಲೂಟಿ ಮಾಡಿತು ಎಂದು ಆರೋಪಿಸಿದ ಅವರು, ಮಮತಾ ಬ್ಯಾನಜರ್ಿ ಅವರ ದೋಣಿ ಮುಳುಗುತ್ತಿದೆ ಎಂದು ವ್ಯಂಗ್ಯವಾಡಿದರು.

ರಾಜ್ಯದ 70 ಲಕ್ಷ ರೈತರ ಅಭಿವೃದ್ಧಿಗೆ ತೃಣಮೂಲ ಕಾಂಗ್ರೆಸ್ ಸರ್ಕಾರ ಅಡ್ಡಿಯಾಗಿದೆ. ಕಮ್ಯುನಿಸ್ಟರು ಮತ್ತು ತೃಣಮೂಲ ಕಾಂಗ್ರೆಸ್ನವರು ಒಂದೇ ದೋಣಿಯಲ್ಲಿದ್ದಾರೆ. ಇಂದು ಇಲ್ಲಿ ಸೇರಿರುವ ಜನಸ್ತೋಮವನ್ನು ಕಂಡು ಮುಖ್ಯಮಂತ್ರಿಯವರ ನಿದ್ರಾಭಂಗವಾಗಲಿದೆ ಎಂದು ಮೋದಿ ಹೇಳಿದರು.