ತಮ್ಮ ಭೇಟಿಯ ವೇಳೆ ಮಮತಾ ಅವರ ಕಳವಳ ಬಗೆಹರಿಯಲಿದೆ: ರಾಜ್ಯಪಾಲ ಜಗದೀಪ್ ಧನಕರ

ಕೋಲ್ಕತಾ, ಡಿ. 17:      ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗಿನ ಭೇಟಿಯಲ್ಲಿ ಅವರ ಎಲ್ಲ ಕಳವಳಗಳು ಬಗೆಹರಿಯಲಿವೆ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಇಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯಪಾಲರು, ತಮ್ಮ ಭೇಟಿಯ ವೇಳೆ ಮುಖ್ಯಮಂತ್ರಿ ಪ್ರಬುದ್ಧ ರೀತಿಯಲ್ಲಿ ಪ್ರತಿಕ್ರಿಯಿಸಲಿದ್ದಾರೆ. ಅವರ ಎಲ್ಲಾ ಕಳವಳ ಇತ್ಯರ್ಥವಾಗಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.ಭಯವನ್ನು ನಿವಾರಿಸಲು ಪ್ರಯತ್ನ ನಡೆಸಿದ ರಾಜ್ಯಪಾಲರು, "ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಭಾರತದ ಯಾವುದೇ ನಾಗರಿಕರಿಗೆ ತೊಂದರೆಯಿಲ್ಲ. ಈ  ಬಗ್ಗೆ ಯಾರಿಗೂ ಆತಂಕ ಬೇಡ. ಭಾರತದ ಹೊರಗಡೆ ಹಲವಾರು ವರ್ಷಗಳ ಕಾಲ ಕಿರುಕುಳ ಎದುರಿಸುತ್ತಿರುವವರಿಗೆ ಇದು ಪರಿಹಾರ ಒದಗಿಸಲಿದೆ ಎಂದು ರಾಜ್ಯಪಾಲರು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಶಾಂತಿ ಮತ್ತು ಏಕತೆ, ಭ್ರಾತೃತ್ವವನ್ನು ಕಾಪಾಡುವಂತೆ ಅವರು ಮನವಿ ಮಾಡಿದ್ದಾರೆ.