ತಾಯಿಯ ಮೇಲೆ ಮಲ್ಲಿಕಾರ್ಜುನ ಸ್ವಾಮೀಜಿ ಹಲ್ಲೆ: ಠಾಣೆಯಲ್ಲಿ ದೂರು ದಾಖಲು
Mallikarjuna Swamiji assaults mother: Complaint filed at police station
ಗದಗ 26: ಜಿಲ್ಲೆಯ ಹೆಸರಾಂತ ಕಪ್ಪತಗುಡ್ಡದ ತಪ್ಪಲಿನಲ್ಲಿ ಕಪ್ಪತಗಿರಿ ಮಲ್ಲಯ್ಯನ ದೇವಸ್ಥಾನವಿದ್ದು, ಅದು ಸುಂದರ ರಮಣೀಯ ಸ್ಥಳ 70 ಗಿರಿ ನೋಡುವುದಕ್ಕಿಂತ ಒಂದು ಕಪ್ಪತಗಿರಿ ನೋಡಿದರೆ ಜೀವನ ಪಾವನ ಆಗುತ್ತದೆ ಎಂಬ ವಾಡಿಕೆಯ ಮಾತಿದೆ. ಇದೇ ಕಪ್ಪತಗಿರಿ ಮಲ್ಲಯ್ಯನ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ ಕಪ್ಪತಗಿರಿ ಮಲ್ಲಯ್ಯನ ಸ್ಥಳದಲ್ಲಿ ವಂಶ ಪರಂಪರಾಗತವಾಗಿ ವಿಶ್ವನಾಥ ಹಾಗೂ ಲಲಿತಾ ದಂಪತಿಗಳು ಪೂಜೆ ಮಾಡುತ್ತ ಬಂದಿದ್ದರು, ಇವರಿಗೆ ಇಬ್ಬರು ಮಕ್ಕಳು ಅವರೇ ಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಶ್ರೀಕಾಂತ ಸ್ವಾಮೀಜಿ ಅಂತಾ ಇದ್ದು, ಆದರೆ ಇವರಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ ತಾಯಿ ಲಲಿತಾ ಮೇಲೆ ಹಲ್ಲೆ ಮಾಡಿರುತ್ತಾರೆ. ಈಗಾಗಲೇ ಇವರ ವಿರುದ್ಧ 21-07-2025 ರಂದು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿರುತ್ತದೆ ಎಂದು ಶಿವರಾಮಕೃಷ್ಣ ಸೇವಾ ಟ್ರಸ್ಟ್ ಗದಗ ಜಿಲ್ಲಾಧ್ಯಕ್ಷ ರಾಜು ಖಾನಪ್ಪನವರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಶಿವರಾಮಕೃಷ್ಣ ಸೇನೆ ವತಿಯಿಂದ ಸಭೆ ನಡೆಸಿ ಸಮಿತಿ ರಚನೆ ಮಾಡೋಣ ಎಂದರು. ಈಗಾಗಲೇ ದೇವಸ್ಥಾನದ ಅಭಿವೃದ್ದಿಗೆ ಭಕ್ತರು ದೇಣಿಗೆ ನೀಡುತ್ತಾರೆ.ಆದರೆ ಪ್ರಸ್ತುತ ದೇವಸ್ಥಾನದ ಮಲ್ಲಿಕಾರ್ಜುನ ಸ್ವಾಮೀಜಿ ತಮ್ಮ ಸ್ವಂತಕ್ಕೆ ಆಸ್ತಿ ಮಾಡಿಕೊಂಡಿರುವುದಾಗಿ ಆರೋಪಿಸಿದರು. ಸಹೋದರರಾದ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಶ್ರೀಕಾಂತ ಸ್ವಾಮೀಜಿ ಇವರ ಮಧ್ಯೆ ಬಹಳ ದಿನಗಳಿಂದ ತಿಕ್ಕಾಟ ನಡೆದಿದೆ. ನಾನು ಕೂಡ ಅನೇಕ ಬಾರಿ ಈ ಗೊಂದಲ ಸರಿಪಡಿಸಬೇಕೆಂದು ಪ್ರಯತ್ನ ನಡೆಸಿದರು ಸಾಧ್ಯವಾಗಿಲ್ಲ. ಕಪ್ಪತಗಿರಿ ದೇವಸ್ಥಾನದ ಹೆಸರಿನಲ್ಲಿ ಒಂದು ಟ್ರಸ್ಟ್ ಕಮಿಟಿ ರಚಿಸಿ ಅವರಿಗೆ ಪ್ರತಿ ತಿಂಗಳು ವೇತನ ನೀಡಿ ಮಠದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ ಎಂದು ರಾಜು ಖಾನಪ್ಪನವರ ಹೇಳಿದರು.
ಕಪ್ಪತಗಿರಿ ಮಲ್ಲಯ್ಯನ ದೇವಸ್ಥಾನ ಎತ್ತರದಲ್ಲಿ ಇರುವುದರಿಂದ ಹಿರಿಯ ನಾಗರಿಕರಿಗೆ ಮತ್ತು ಚಿಕ್ಕ ಮಕ್ಕಳಿಗೆ ತೊಂದರೆ ಆಗುತ್ತದೆ ಅದಕ್ಕಾಗಿ "ಜಿಪ್ ಲೈನ್" ವ್ಯವಸ್ಥೆ ಮಾಡಬೇಕಿದೆ. ಈಗಾಗಲೇ ನಮ್ಮ ಸಂಸ್ಥೆಗೆ ಮಲ್ಲಿಕಾರ್ಜುನ ಸ್ವಾಮೀಜಿ ತಾಯಿ ಪತ್ರ ಬರೆದಿದ್ದು, ಇನ್ನೊಬ್ಬ ಮಗನಾದ ಶ್ರೀಕಾಂತ ಸ್ವಾಮೀಜಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ. ಹೆತ್ತ ತಾಯಿಯ ಮೇಲೆಯೇ ಹಲ್ಲೆ ನಡೆಸಿರುವ ಕೇಳಿಬಂದಿದ್ದು, ಮುಂಬರುವ ಜಾತ್ರೆಯ ಒಳಗಾಗಿ ಅವರ ಮದ್ಯೆ ಇರುವ ಸಮಸ್ಯೆ ಬಗೆ ಹರಿಯಬೇಕು. ಎಲ್ಲ ಭಕ್ತರ ಸಭೆ ಕರೆದು ಸಹೋದರ ಸ್ವಾಮೀಜಿಗಳು ಇಬ್ಬರೂ ಮಠದ ಸೇವೆಯಲ್ಲಿ ಪಾಲ್ಗೊಳ್ಳಬೇಕಿದೆ. ಕಪ್ಪತಗಿರಿ ಮಲ್ಲಯ್ಯನ ಒಪ್ಪಕೊಳ್ಳುವ ಪ್ರತಿಯೊಬ್ಬರು ಮಠದ ಭಕ್ತರೇ, ಎಲ್ಲರು ಸಂಬಂಧವಿದ್ದಂತೆ ಭಕ್ತರಲ್ಲಿ ಯಾರು ಬೇಧ ಭಾವ ಹುಟ್ಟಿಸಬಾರದು ವೃದ್ಧ ತಾಯಿಗೆ ಹಾಗೂ ಸಹೋದರ ಶ್ರೀಕಾಂತ ಸ್ವಾಮೀಜಿಗೆ ನ್ಯಾಯ ಒದಗಿಸಿ ಕೊಡಬೇಕಿದೆ ಎಂದು ರಾಜು ಖಾನಪ್ಪನವರ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಶಿವರಾಮಕೃಷ್ಣ ಸೇವಾ ಟ್ರಸ್ಟ್ ಕಾರ್ಯದರ್ಶಿ ಮಹೇಶ ರೋಖಡೆ, ಕಿರಣ ಹಿರೇಮಠ, ವೆಂಕಟೇಶ ದೊಡ್ಡಮನಿ, ವಿಶಾಲ ಗೋಕಾವಿ ಸೇರಿದಂತೆ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 