ಕೊಳೆತ ಸ್ಥಿತಿಯಲ್ಲಿ ಪುರುಷ ಶವ ಪತ್ತೆ: ಕೊಲೆ ಶಂಕೆ
ರಾಯಬಾಗ 19: ತಾಲೂಕಿನ ನಸಲಾಪುರ ಗ್ರಾಮದ ವ್ಯಾಪ್ತಿಯ ಶಿವಶಕ್ತಿ ಫ್ಯಾಕ್ಟರಿಯ ಹತ್ತಿರ ಯಡ್ರಾಂವದಿಂದ-ಬಾವನ ಸೌಂದತ್ತಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿರುವ ಪುರುಷ ಓರ್ವನ ಶವ ದೊರೆತಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿಯನ್ನು ರಾಯಬಾಗ ಪಟ್ಟಣದ ದಸ್ತಗಿರ ಇಬ್ರಾಹಿಂ ಮೊಮಿನ (38) ಎಂದು ತಿಳಿದು ಬಂದಿದೆ. ಮೃತನ ತಾಯಿ ಮಾಬೂಬಿ ಮೊಮಿನ ಇವಳು ರಾಯಬಾಗ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನ ಮಗ ಗೌಂಡಿ ಮತ್ತು ಕ್ಲೀನರ್ ಕೆಲಸ ಮಾಡುತ್ತಿದ್ದು, ಅತಿಯಾದ ಕುಡಿತದ ಚಟ ಹೊಂದಿದ್ದನು. ಮಾ.15 ರಂದು ಸಾಯಂಕಾಲ ಮನೆಯಿಂದ ಊರಲ್ಲಿ ಹೋಗಿ ಬರುವುದಾಗಿ ಹೇಳಿ ಹೋಗಿದ್ದ. ತನ್ನ ಮಗನ ಸಾವಿನ ಬಗ್ಗೆ ಸಂಶಯ ಇರುವುದಾಗಿ ದೂರು ದಾಖಲಿಸಿದ್ದಾರೆ.