ಮಲೇಷ್ಯಾ ಮಾಸ್ಟರ್ಸ್: ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋತ ಪಿ.ವಿ ಸಿಂಧು
ಕೌಲಾಲಂಪುರ, ಜ 10 ಭಾರತ ಅನುಭವಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರು ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಸೋತು ಹೊರ ನಡೆದಿದ್ದಾರೆ.ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದ ಸಿಂಧು, 12-21, 16-21 ಅಂತರದಲ್ಲಿ ತೈವಾನ್ ನ ವಿಶ್ವದ ಎರಡನೇ ಶ್ರೇಯಾಂಕಿತೆ ಟಿಜು ಯಿಂಗ್ ಥೈ ವಿರುದ್ಧ ಸೋಲು ಅನುಭವಿಸಿದರು. ಆ ಮೂಲಕ 2020ರ ವರ್ಷದ ಮೊದಲನೇ ಟೂರ್ನಿಯ ಸೋಲು ಇದಾಯಿತು.
ಪಂದ್ಯದ ಮೊದಲನೇ ಗೇಮ್ ನಲ್ಲಿ ತೈವಾನ್ ಆಟಗಾರ್ತಿ ಬಹುಬೇಗ ಮುನ್ನಡೆ ಪಡೆದಿದ್ದರು. ನಂತರ, ಪುಟಿದೆದ್ದ ಭಾರತದ ಆಟಗಾರ್ತಿ ಆಕ್ರಮಣಕಾರಿ ಪ್ರದರ್ಶನ ತೋರಿ 7-7 ಸಮಬಲ ಕಾಯ್ದುಕೊಂಡರು. ನಂತರ, ಪಂದ್ಯದ ಹಿಡಿತ ಸಾಧಿಸಿ ಅತ್ಯುತ್ತಮ ರ್ಯಾಲಿಗಳನ್ನು ಮಾಡಿದ ಟಿಜು 21-12 ಅಂತರದಲ್ಲಿ ಮೊದಲನೇ ಗೇಮ್ ಗೆದ್ದರು.ಮೊದಲ ಗೇಮ್ ಸೋಲಿನೊಂದಿಗೆ ತೀವ್ರ ಒತ್ತಡದಲ್ಲಿ ಕಣಕ್ಕೆ ಇಳಿದ ಪಿ.ವಿ ಸಿಂಧು ಅವರ ಆರಂಭದಲ್ಲಿ ಮುನ್ನಡೆ ಪಡೆದರು. ಆದರೂ, ಮಧ್ಯಂತರ ಅವಧಿಯಲ್ಲಿ ಟಿಜು 7 ಅಂಕಗಳನ್ನು ಮುನ್ನಡೆ ಪಡೆದಿದ್ದರು. ಅಂತಿಮವಾಗಿ ವಿಶ್ವ ಚಾಂಪಿಯನ್ ಶಿಪ್ ಕೇವಲ ಐದು ಮ್ಯಾಚ್ ಪಾಯಿಂಟ್ ಉಳಿಸಿಕೊಳ್ಳುವಲ್ಲಿ ಸಫಲರಾದರು. ಕೊನೆಗೂ ಸಿಂಧು ಪಂದ್ಯ ಉಳಿಸಿಕೊಳ್ಳಲು ಸಾಧ್ಯವಾಗದೇ ತೈವಾನ್ ಆಟಗಾರ್ತಿಗೆ ಮಣಿದರು.ಕಳೆದ ಆಗಸ್ಟ್ ತಿಂಗಳ ಬಳಿಕ ಸಿಂಧು ಅವರು ಟಿಜು ವಿರುದ್ಧ 12ನೇ ಸೋಲು ಇದಾಯಿತು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 