ಬಡ ವಿದ್ಯಾರ್ಥಿನಿಗೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದ ಮಲಗೌಡ ಪಾಟೀಲ

Malagowda Patil showed humanity by giving financial assistance to a poor student

ಬೆಳಗಾವಿ 14: ತಂದೆಯನ್ನು ಕಳೆದುಕೊಂಡು ವಿದ್ಯಾಭ್ಯಾಸಕ್ಕೂ  ಪರಿತಪಿಸುತ್ತಿದ್ದ  ಪ್ರತಿಭಾನ್ವಿತ ವಿದ್ಯಾರ್ಥಿನಿ ಸಿಮ್ರನ್ ಆನಂದ ಕೋಲಕಾರಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತ ಸಹಾಯಕ ಮಲಗೌಡ ಪಾಟೀಲ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.   

ಆ ಬಾಲಕಿಯ ಶೈಕ್ಷಣಿಕವಾಗಿ ದತ್ತು ತೆಗೆದುಕೊಂಡು ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ತಾಲೂಕಿನ ಅಗಸಿಗೆ ಗ್ರಾಮದ ಅಂಬೇಡ್ಕರ ಗಲ್ಲಿ ನಿವಾಸಿ ಆನಂದ ನರಸು ಕೋಲಕಾರ ವರ್ಷದ ಹಿಂದೆ ಅಕಾಲಿಕ ನಿಧನ ಹೊಂದಿದ್ದರು.   ಆನಂದ ಅವರ ಮೂವರು ಮಕ್ಕಳಲ್ಲಿ ಸಿಮ್ರನ್ ಪ್ರತಿಭಾನ್ವಿತ ವಿದ್ಯಾರ್ಥಿನಿ, ಕಡು ಬಡತನದಲ್ಲಿರುವ ಸಿಮ್ರನ್ ಓದಿಗೆ ಸಮಸ್ಯೆ ಎದುರಾಗಿದ್ದು, ಇದನ್ನು ಮನಗಂಡ ಮಲಗೌಡ ಪಾಟೀಲ  ಅವರು ಆ ವಿದ್ಯಾರ್ಥಿನಿಯ ಶಿಕ್ಷಣ ನಿಲ್ಲಬಾರದು ಎಂಬ ಉದ್ದೇಶದಿಂದ  ಖುದ್ದಾಗಿ  ಮನೆಗೆ ಭೇಟಿ ನೀಡಿದ ಮಲಗೌಡ ಪಾಟೀಲ ಆರ್ಥಿಕ ಸಹಾಯ ಮಾಡಿದ್ದಾರೆ.  ಜತೆಗೆ ಮೂವರು ಮಕ್ಕಳ ಓದು ಮುಗಿಯುವವರೆಗೂ ಆರ್ಥಿಕ ನೆರವಿನ ಭರವಸೆ ನೀಡಿದ್ದಾರೆ. ಸಿಮ್ರನ್‌ಳನ್ನು ಮಲಗೌಡ ಪಾಟೀಲ ಅವರು ಶೈಕ್ಷಣಿಕವಾಗಿ ದತ್ತು ತೆಗೆದುಕೊಂಡಿದ್ದಾರೆ. ಆನಂದ ಕೋಲಕಾರ ಅವರು  ಮಲಗೌಡ ಪಾಟೀಲ ಅವರ ಆಪ್ತ ಗೆಳೆಯರಾಗಿದ್ದರು. ದೀರ್ಘಕಾಲ ಗೆಳೆಯ ಇಹಲೋಕ ತ್ಯಜಿಸಿದ್ದಾರೆ.  ತಾಯಿಯೊಂದಿಗೆ ಮೂವರು ಮಕ್ಕಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು,  ಆಪ್ತ ಗೆಳೆಯನ ಮಕ್ಕಳಿಗೆ ಆಸರೆಯಾಗಿ ನಿಲ್ಲುವ ಮೂಲಕ  ಮಲಗೌಡ ಪಾಟೀಲ   ಮಾನವೀಯತೆ ಮೆರೆದಿದ್ದಾರೆ.   

ಗ್ರಾಪಂ ಅಧ್ಯಕ್ಷ ಅಮೃತ ಮುದ್ದೆನ್ನವರ, ಸದಸ್ಯ ಅಪ್ಪಯ್ಯಗೌಡ ಪಾಟೀಲ, ಪಿಕೆಪಿ ಎಸ್ ಸದಸ್ಯ ಪರಶುರಾಮ ರೇಡೇಕರ,  ನಿಂಗಪ್ಪ ಕೋಲಕಾರ, ಅಪ್ಪಯ್ಯ ಕೋಲಕಾರ, ಸೇಫ್ ವಾರ್ಡ್‌ ಸಂಸ್ಥೆ ಅಧ್ಯಕ್ಷ ಸಂತೋಷ ಮೇತ್ರಿ, ರಂಜನಾ ಕೋಲಕಾರ, ಮಸನವ್ವ ಕೋಲಕಾರ ಸೇರಿದಂತೆ ಇತರರು ಇದ್ದರು.