ಮೇಕ್ಇನ್ ಇಂಡಿಯಾ; ಮಾಲಿನ್ಯರಹಿತ ವಿನೂತನ ಸ್ಲೋ ಸ್ಪೀಡ್ ಇ-ಸ್ಕೂಟರ್ 'ಲೈಟ್' ಬಿಡುಗಡೆ

 ಬೆಂಗಳೂರು, ನ.8:   ಯುವ ಪೀಳಿಗೆಗಾಗಿ ಒಕಿನವಾ ಸಂಸ್ಥೆಯು ಮಾಲಿನ್ಯರಹಿತ ವಿನೂತನ ಸ್ಲೋ ಸ್ಪೀಡ್ ಇ-ಸ್ಕೂಟರ್ 'ಲೈಟ್' (ಐಖಿಇ) ಬಿಡುಗಡೆ ಮಾಡಿದೆ. ಇದರ ಎಕ್ಸ್ ಶೋರೂಮ್ ಬೆಲೆ 59,990 ರೂ. ಯಾಗಿದ್ದು, ಯುವ ಸಮೂಹವನ್ನು ಗುರಿಯಾಗಿಸಿ ಮಾರುಕಟ್ಟೆಗೆ ಪರಿಚಯಿಸಿರುವ 'ಲೈಟ್' ಇ-ಸ್ಕೂಟರ್ ಇಟಲಿಯನ್ ವಿನ್ಯಾಸ ಹೊಂದಿದೆ. ಪ್ರಕಾಶಮಾನ ಬಿಳಿ (ಖಠಿಚಿಡಿಞಟಜ ಘಣಜ) ಮತ್ತು ಪ್ರಕಾಶಮಾನ ನೀಲಿ (ಖಠಿಚಿಡಿಞಟಜ ಃಟಣಜ) ವರ್ಣಗಳಲ್ಲಿ ಲಭ್ಯವಿದೆ. ಒನ್ ಫಾರ್ ಆಲ್ ಸಂದೇಶವನ್ನು ಸಾರುವ 'ಲೈಟ್' ಇ-ಸ್ಕೂಟರ್ ಯುವ ಸಮೂಹ ಸೇರಿದಂತೆ ಚಾಲನೆ ಮಾಡಲು ಎಲ್ಲಾರಿಗೂ ಸುಲಭ. ಕಳಚಬಹುದಾದ ಐಯಾನ್ ಬ್ಯಾಟರಿ ಅಳವಡಿಸಲಾಗಿದೆ. ಗ್ರಾಹಕರಿಗೆ ಹಣದ ಉಳಿತಾಯ ಮಾಡುವುದರ ಜತೆಗೆ 'ಲೈಟ್' ಪರಿಸರ ಸ್ನೇಹಿ ಕೂಡ ಆಗಿದೆ. 3 ವರ್ಷಗಳ ಮೋಟರ್ ಮತ್ತು ಬ್ಯಾಟರಿ ವಾರಂಟಿಯನ್ನು ಸಂಸ್ಥೆಯು ಗ್ರಾಹಕರಿಗೆ ಒದಗಿಸುತ್ತದೆ. ಬ್ಯಾಟರಿಯನ್ನು ಕಳ್ಳರಿಂದ ರಕ್ಷಿಸಲು ಆ್ಯಂಟಿ-ಥೆಫ್ಟ್ ವೈಶಿಷ್ಟ್ಯ ಅಳವಡಿಸಲಾಗಿದ್ದು ಬ್ಯಾಟರಿಯ ಕಳ್ಳತನ ಅಸಾಧ್ಯ. ಎಲ್ಇಡಿ ಸ್ಪೀಡೊಮೀಟರ್, ಎಲ್ಇಡಿ ಹೆಡ್ಲೈಟ್, ಎಲ್ಇಡಿ ವಿಂಕರ್ಸ, ಎಲ್ಇಡಿ ಹಿಂಬದಿ ಲೈಟ್, ಅಟೋಮ್ಯಾಟಿಕ್ ಎಲೆಕ್ಟ್ರಿಕ್ ಹ್ಯಾಂಡಲ್, ಸೆಲ್ಫ್ ಸ್ಟಾರ್ಟ್ ಪುಶ್ ಬಟನ್, ಫ್ರಂಟ್ ಸಸ್ಪೆಂಷನ್ ವೈಶಿಷ್ಟ್ಯಗಳನ್ನು 'ಲೈಟ್'ನಲ್ಲಿ ಅಳವಡಿಸಲಾಗಿದ್ದು ಗಟ್ಟಿಮುಟ್ಟಾದ ಸ್ಟೀಲ್ ಮೇಲ್ಮೈಯನ್ನು ಹೊಂದಿದೆ. ಹೊಸ 'ಲೈಟ್' ಇ-ಸ್ಕೂಟರ್ ಬಿಡುಗಡೆ ಮಾಡುವುದರ ಮೂಲಕ ಪೆಟ್ರೋಲ್ ವಾಹನಗಿಂದ ಎಲೆಕ್ಟ್ರಿಕ್ ವಾಹನ ಕಡಿಮೆ ದಕ್ಷ ಎನ್ನುವ ನಂಬಿಕೆಯನ್ನು ಹೊಗಲಾಡಿಸಿದ್ದೇವೆ. ಯುವ ಸಮೂಹವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇದರ ವಿನ್ಯಾಸವನ್ನು ಮಾಡಲಾಗಿದೆ. ಮಹಿಳೆ ಮತ್ತು ವಯಸ್ಕರರಿಗೂ ಸಹ 'ಲೈಟ್' ಹೊಂದುವಂತೆ ತಯಾರಿಸಲಾಗಿದೆ ಎಂದು ಒಕಿನವಾ ಆಟೋಟೆಕ್ ಪ್ರೈ ಲಿ ಸಂಸ್ಥೆಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಜೀತೆಂದ್ರ ಶರ್ಮ ತಿಳಿಸಿದ್ದಾರೆ.