ನಿಮ್ಮ ಕನಸುಗಳನ್ನು ಸಾಕಾರ ಮಾಡಿಕೊಳ್ಳಿ

ನಿಮ್ಮ ಕನಸುಗಳನ್ನು ಸಾಕಾರ ಮಾಡಿಕೊಳ್ಳಿ Make your dreams come true


ನೀವು ಯಾವುದೇ ಒಬ್ಬ ದೊಡ್ಡ ಅಧಿಕಾರಿ ಆಗುವ ಕನಸು ನನಸು ಮಾಡಲು ನೀವೇ ಪ್ರಯತ್ನಿಸಬೇಕು. ನಿಮ್ಮ ಕನಸುಗಳಿಗೆ ನೀವೇ ಶಿಲ್ಪಿಗಳಾಗಿರುತ್ತೀರಿ. ಇಂದು ಐಎಎಸ್ ಅಧಿಕಾರಿಯಾಗುವುದು ತುಂಬಾ ಸರಳ. ಎಲ್ಲ ರೀತಿಯ ಅಧ್ಯಯನ ಸಾಮಗ್ರಿಗಳು ಆನ್ಲೈನ್ ನಲ್ಲಿ ದೊರೆಯುತ್ತವೆ. 15 ರಿಂದ 25 ವರ್ಷದೊಳಗೆ ನೀವು ಏನು ಆಗಬೇಕು ಎಂಬುದನ್ನು ನಿರ್ಧರಿಸಬೇಕು. ನಿಮಗೆ ಬೇಕಾದ ಭಾಷೆಯಲ್ಲಿ ಐಎಎಸ್ ಸಂದರ್ಶನವನ್ನು ಸಹ ನೀಡಬಹುದಾಗಿದೆ. ಸುಮಾರು 18 ಭಾಷೆಗಳಿಗೆ ಅವಕಾಶವಿದೆ. ಮುಂದಿನ ಐದು ಆರು ವರ್ಷದಲ್ಲಿ ನೀವು ಸಹ ನನ್ನ ಹಾಗೆ ಐಎಎಸ್ ಅಧಿಕಾರಿ ಆಗಬಹುದು. ನಾವು ಯಾವ ದಾರಿಯಲ್ಲಿ ಸಾಗಬೇಕು ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಯುವಕರು ಮೊಬೈಲ್ ಗೀಳು ಹೊಂದಿರಬಾರದು. ಅಲ್ಲದೆ ನಮ್ಮ ಅಕ್ಕಪಕ್ಕದ ವ್ಯಕ್ತಿಗಳು ನಮ್ಮನ್ನು ಕುಗ್ಗಿಸುವ ಕೆಲಸ ಮಾಡುತ್ತಾರೆ. ಯಾವುದಕ್ಕೂ ಅಂಜದೆ ಮುನ್ನಡೆಯಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.  

ಸಿಇಟಿ, ನೀಟ್ ಪರೀಕ್ಷೆಗೆ ಉಚಿತ ತರಬೇತಿಸಿಇಟಿ ಹಾಗೂ ನೀಟ್ ಪರೀಕ್ಷೆಗೆ ಉಚಿತ ತರಬೇತಿ ನೀಡಲು ಕ್ರಮವಹಿಸಲಾಗುವುದು. ನಾನು ಐಎಎಸ್ ಹಾಗೂ ಐಎ?ಸ್ ಪರೀಕ್ಷೆ ಬರೆಯಲು ಯಾವುದೇ ರೀತಿಯ ಕೋಚಿಂಗ್ ಪಡೆದಿರುವುದಿಲ್ಲ. ಕೋಚಿಂಗ್ ನಿಮಗೆ ಗೈಡ್ ಮಾಡುತ್ತದೆ. ನೀವು ಪ್ರೇರಣೆಯನ್ನು ಹೊಂದಿದರೆ ಮಾತ್ರ ಯಾವ ಪರೀಕ್ಷೆಯನ್ನು ಎದುರಿಸಬಹುದು. ನಾನು ಕೂಡ ವಿದ್ಯಾರ್ಥಿ ವೇತನ ಮೂಲಕ ಕಲಿತಿದ್ದೇನೆ. ಅಲ್ಲದೆ ಸರ್ಕಾರಿ ಶಾಲೆಗಳಲ್ಲಿ ಓದಿದ್ದೇನೆ. ಪಿಯುಸಿ ಪರೀಕ್ಷೆಗಾಗಿ ಯಾವುದೇ ಕೋಚಿಂಗ್ ಸಹ ಮಾಡಿರುವುದಿಲ್ಲ. ಮನೆಯಲ್ಲಿ ಟಿವಿಯನ್ನು ಸಹ ನೋಡುತ್ತಿರಲಿಲ್ಲ. ಗ್ರಂಥಾಲಯಕ್ಕೆ ಹೋಗಿ ಅಧ್ಯಯನ ಮಾಡುತ್ತಿದ್ದೆ. ಎಲ್ಲಾ ಅಡೆತಡೆಗಳನ್ನು ದಾಟಿ ಸಾಧನೆಯೆಡೆಗೆ ಸಾಗಬೇಕು. ಎಲ್ಲ ದಾರಿಗಳು ಮುಚ್ಚಿವೆ ಎಂದು ಸುಮ್ಮನೆ ಕುಳಿತುಕೊಳ್ಳಬಾರದು. ಪ್ರತಿಯೊಬ್ಬರಿಗೂ ತಮ್ಮದೇ ಆದ ಸಾಮರ್ಥ್ಯವಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಮಾತೃಭಾಷೆ ಮತ್ತು ವ್ಯವಹಾರಿಕ ಭಾಷೆ ಕಲಿಯುವುದು ಮುಖ್ಯ. ನಮ್ಮ ದೇಶದಲ್ಲಿ ಸಾಕಷ್ಟು ಭಾಷೆಗಳಿವೆ. ಭಾಷೆಗಳನ್ನು ಕಲಿಯುವುದು ನಮಗೆ ಅವಶ್ಯಕವಿದೆ. ಇಂಗ್ಲಿಷ್ ಭಾಷೆ ಮೇಲೆ ಇಂದು ಎಲ್ಲರೂ ಅವಲಂಬಿತರಾಗಿದ್ದಾರೆ. ಒಂದೇ ಭಾಷೆಯಿಂದ ಎಲ್ಲವನ್ನು ಪಡೆದುಕೊಳ್ಳುವುದು ಅಸಾಧ್ಯ. ನಾನು ಮರಾಠಿಯಲ್ಲಿ ಕಲಿತು ನಂತರ ಐಎಎಸ್ ಪರೀಕ್ಷೆ ಪಾಸು ಮಾಡಿದೆ. ಇಂಗ್ಲಿಷ್ ಭಾಷೆ ಕಲಿಯುವುದು ತುಂಬಾ ಅಗತ್ಯವಿದೆ. ವಿಜ್ಞಾನದ ಜೊತೆ ಜೊತೆಗೆ ಇಂಗ್ಲೀಷ್ ಭಾಷೆಯನ್ನು ಕಲಿತುಕೊಂಡೆ. ಪಿಯುಸಿ ತರಗತಿಯಲ್ಲಿದ್ದಾಗ ಇಂಗ್ಲಿಷ್ ಭಾಷೆ ಕಲಿತೆ. ಮಾರ್ವಾಡಿಗಳು ಸಹ ತಮ್ಮ ಭಾಷೆಯೊಂದಿಗೆ ಬೇರೆ ಬೇರೆಯನ್ನು ಮಾತನಾಡುತ್ತಾರೆ. ನಾವು ವಾಸಿಸುವ ಸ್ಥಳದಲ್ಲಿನ ಭಾಷೆ ಕಲಿಯುವುದು ತುಂಬಾ ಮುಖ್ಯ ಎಂದರು.  

ಮಾಜಿ ಸಚಿವರಾದ ಎ.ಎಂ.ಹಿಂಡಸಗೇರಿ ಮಾತನಾಡಿ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ದಿನಪತ್ರಿಕೆಗಳನ್ನು ಮಾರಾಟ ಮಾಡಿ, ಈ ದೇಶದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ್ದರು. ಬಡತನದಲ್ಲಿರುವ ಸಾಕಷ್ಟು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.  

ಡಿಡಿಪಿಐ ಎಸ್‌.ಎಸ್‌.ಕೆಳದಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ ದೊರೆತಿರುವುದಿಲ್ಲ. ಧಾರವಾಡ ಜಿಲ್ಲೆಯನ್ನು ರಾಜ್ಯದಲ್ಲಿ 10 ಸ್ಥಾನದೊಳಗೆ ತರಲು ಸಾಕಷ್ಟು ಪ್ರಯತ್ನಿಸಲಾಯಿತು. ಆ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಯಿತು. ಮಕ್ಕಳಿಗೆ ಪ್ರೋತ್ಸಾಹ ಮತ್ತು ಪ್ರೇರಣಾದಾಯಕ ಸಂವಾದ ಕಾರ್ಯಕ್ರಮಗಳನ್ನು ಏರಿ​‍್ಡಸಲಾಯಿತು. ಶಾಲೆಗೆ ಹಾಜರಾಗುವ ಮಕ್ಕಳ ಸಮಸ್ಯೆಗಳನ್ನು ಆಲಿಸಬೇಕಾಗಿದೆ. ಮಕ್ಕಳು ಶಾಲೆ ಬಿಡದಂತೆ ಕ್ರಮ ವಹಿಸಬೇಕು. ವಿದ್ಯಾರ್ಥಿಗಳು ಉತ್ತೀರ್ಣರಾಗಲು ಎಲ್ಲ ವಿಷಯಗಳಲ್ಲಿ 28 ಅಂಕ ಪಡೆಯಬೇಕು. ಹೆಚ್ಚಿನ ಅಂಕ ಪಡೆಯುವಂತೆ ಮಕ್ಕಳನ್ನು ಪ್ರೇರೇಪಿಸಬೇಕು. ಶಿಕ್ಷಕರ ಮತ್ತು ಮಕ್ಕಳ ನಡುವೆ ಅವಿನಾಭಾವ ಸಂಬಂಧ ಇರಬೇಕಾಗುತ್ತದೆ ಎಂದು ತಿಳಿಸಿದರು.  

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.67.08 ಫಲಿತಾಂಶ2024-25 ನೇ ಸಾಲಿನ ಎಎ?ಲ್‌ಸಿ ಪರೀಕ್ಷೆಯಲ್ಲಿ 13,334 ಪುರುಷ ವಿದ್ಯಾರ್ಥಿಗಳು ಹಾಗೂ 13,714 ಮಹಿಳಾ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 27,048 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ 7,685 ಪುರುಷ ವಿದ್ಯಾರ್ಥಿಗಳು ಹಾಗೂ 10,460 ಮಹಿಳಾ ವಿದ್ಯಾರ್ಥಿಗಳು ಸೇರಿದಂತೆ ಒಟ್ಟಾರೆಯಾಗಿ 18,145 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಶೇ.67.08 ರಷ್ಟು ಫಲಿತಾಂಶ ದೊರೆತಿದೆ.  

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಶಹರ ತಹಶೀಲ್ದಾರ ಮಹೇಶ ಗಸ್ತೆ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಮಚಂದ್ರ ಹೊಸಮನಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಪೂರ್ಣಿಮಾ, ಹುಬ್ಬಳ್ಳಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಎಂ.ಫಡ್ನೇಶಿ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಉಮೇಶ ಬೊಮ್ಮಕ್ಕನವರ, ಮುಖಂಡರಾದ ಅಲ್ತಾಫ ಹಳ್ಳೂರ, ಬಸೀರ ಹಳ್ಳೂರ, ಇಸಾರ್ ಅಹ್ಮದ್ ಬಳ್ಳಾರಿ ಸೇರಿದಂತೆ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.