ನವದೆಹಲಿ, ಜೂನ್ 08,ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎ), 2005 ಅನ್ನು ಆಮೂಲಾಗ್ರ ಮತ್ತು ತರ್ಕಬದ್ಧ ವ್ಯವಸ್ಥಿತ ಬದಲಾವಣೆಯ ಉದಾಹರಣೆಯೆಂದು ವಿಶ್ಲೇಷಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಭಾರತದ ಜನರಿಗೆ ಸಹಾಯ ಮಾಡಲು ಇದನ್ನು ಬಳಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. "ಇದು ರಾಷ್ಟ್ರೀಯ ಬಿಕ್ಕಟ್ಟಿನ ಸಮಯವೇ ಹೊರತು, ರಾಜಕೀಯ ಮಾಡು ಸಮಯವಲ್ಲ. ಇದು ಬಿಜೆಪಿ ವರ್ಸಸ್ ಕಾಂಗ್ರೆಸ್ ವಿಷಯವಲ್ಲ. ನಿಮ್ಮ ಕೈಯಲ್ಲಿ ಶಕ್ತಿಯುತವಾದ ಕಾರ್ಯವಿಧಾನವಿದೆ, ದಯವಿಟ್ಟು ಭಾರತದ ಜನರಿಗೆ ಅಗತ್ಯವಿರುವ ಸಮಯದಲ್ಲಿ ಸಹಾಯ ಮಾಡಲು ಇದನ್ನು ಬಳಸಿ ”ಎಂದು ಸೋನಿಯಾ ಗಾಂಧಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಅಂಕಣದಲ್ಲಿ ಹೇಳಿದ್ದಾರೆ. ಮನ್ರೆಗಾ ಕಾರ್ಯಕ್ರಮವು ಆಮೂಲಾಗ್ರವಾಗಿದೆ ಏಕೆಂದರೆ ಅದು ಬಡವರಿಗೆ ಅಧಿಕಾರವನ್ನು ವರ್ಗಾಯಿಸಿ ಹಸಿವು ಮತ್ತು ಅಭಾವದಿಂದ ಪಾರಾಗಲು ಸಹಕರಿಸುತ್ತದೆ ಎಂದಿದ್ದಾರೆ."ಅಧಿಕಾರ ವಹಿಸಿಕೊಂಡ ನಂತರ, ಪ್ರಧಾನಿ ಮೋದಿ ಅವರು ಯೋಜನೆಯನ್ನು ಸ್ಥಗಿತಗೊಳಿಸುವುದು ಪ್ರಾಯೋಗಿಕವಲ್ಲ ಎಂದು ಅರಿತುಕೊಂಡರಾದರೂ, ಅದನ್ನು ಅಪಹಾಸ್ಯ ಮಾಡಲು ಪ್ರಯತ್ನಿಸಿದರು, ಯೋಜನೆಯನ್ನು ಸರ್ಕಾರ ದುರ್ಬಲಗೊಳಿಸಿತು ”ಎಂದು ಅವರು ಆರೋಪಿಸಿದ್ದಾರೆ.
ಸಂಸತ್ತಿನಲ್ಲಿ ಕಾರ್ಯಕರ್ತರು, ನ್ಯಾಯಾಲಯಗಳು ಮತ್ತು ತೀವ್ರ ವಿರೋಧದ ಒತ್ತಡದಿಂದಾಗಿ ಈ ಯೋಜನೆಯನ್ನು ತಡೆಯುವ ಸರ್ಕಾರದ ಪ್ರಯತ್ನ ಯಶಸ್ವಿಯಾಗದೆ ಹಿಂದೆ ಸರಿಯಬೇಕಾಯಿತು" ಸ್ವಚ್ಛಭಾರತ್ ಮತ್ತು ಪ್ರಧಾನ್ ಮಂತ್ರಿ ಆವಾಸ್ ಯೋಜನೆಗಳೊಂದಿಗೆ ಸಂಯೋಜಿಸುವ ಮೂಲಕ ಅದಕ್ಕೆ ಹೊಸ ನೋಟವನ್ನು ನೀಡಲು ಪ್ರಯತ್ನಿಸಿದೆ. ಆದರೆ ವಾಸ್ತವದಲ್ಲಿ, ಅವು ಕಾಂಗ್ರೆಸ್ ಪಕ್ಷದ ಉಪಕ್ರಮಗಳು ಎಂಬುದನ್ನುಮರೆಮಾಚುವಂತಿಲ್ಲ” ಎಂದು ಹೇಳಿದ್ದಾರೆ. ಮನ್ರೆಗಾ ಕಾರ್ಮಿಕರಿಗೆ ವೇತನ ಪಾವತಿಗಳನ್ನು ನಿರಂತರವಾಗಿ ವಿಳಂಬಗೊಳಿಸಲಾಯಿತು ಮತ್ತು ಕೆಲಸವನ್ನು ಆಗಾಗ್ಗೆ ನಿರಾಕರಿಸಲಾಗಿದೆ ಎಂಬುದು ಮತ್ತೊಂದು ವಿಷಯ ಎಂದ ಅವರು, ಕೋವಿಡ್ -19 ಸಾಂಕ್ರಾಮಿಕ ಮತ್ತು ನಂತರದ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಉಂಟಾದ ತೊಂದರೆಯನ್ನು ಉಲ್ಲೇಖಿಸಿ, ಯುಪಿಎ ಸರ್ಕಾರದ ಪ್ರಮುಖ ಗ್ರಾಮೀಣ ಪರಿಹಾರ ಕಾರ್ಯಕ್ರಮಕ್ಕೆ ಮರಳಲು ಸರ್ಕಾರ ನಿರ್ಬಂಧಿತವಾಗಿದೆ ಎಂದು ಹೇಳಿದ್ದಾರೆ.