ಗದಗ 19: ಪ್ರತಿ ಗ್ರಾಮದ ಸ್ವಚ್ಛತೆ ಹಾಗೂ ಸರಕಾರದ ಯೋಜನೆ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಬೇಕು ಎಂದು ಗ್ರಾಮದ ಹಿರಿಯ ಮುಖಂಡರಾದ ಸಕ್ರಪ್ಪ ದೊಡ್ಡಮನಿ ಹೇಳಿದರು.
ಗದಗ ತಾಲೂಕಿನ ಬೆನಕೊಪ್ಪ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡಿದ್ದ ಕ್ಷೇತ್ರ ಪ್ರಚಾರ ಕಾರ್ಯಕ್ರಮಕ್ಕೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಜಾನಪದ ಸಂಗೀತ ಮತ್ತು ಬೀದಿ ನಾಟಕದ ಮೂಲಕ ಸಕರ್ಾರದ ಯೋಜನೆಯ ಕುರಿತು ಜನ ಜಾಗೃತಿ ಮೂಡಿಸಲು ಕ್ಷೇತ್ರ ಪ್ರಚಾರ ಕಾರ್ಯಕ್ರಮ ಜರುಗಿತು.
ಮಲಪ್ರಭಾ ಸಾಂಸ್ಕೃತಿಕ ಕಲಾ ತಂಡ ಕೊಣ್ಣುರು ಬೀದಿ ನಾಟಕ ಮತ್ತು ಗಾನತರಂಗ ಸಾಂಸ್ಕೃತಿಕ ಸಂಸ್ಥೆ ಅಸುಂಡಿ ಜಾನಪದ ಸಂಗೀತ ತಂಡದವರು ರಾಜ್ಯ ಸರ್ಕಾರ ನೇಕಾರ ಮತ್ತು ಮೀನುಗಾರರ ಸಾಲಮನ್ನಾ, ರೈತ ಸಮ್ಮಾನ ಯೋಜನೆಯ ಫಲಾನುಭವಿಗಳಿಗೆ ವಾಷರ್ಿಕ ಹೆಚ್ಚುವರಿ 4 ಸಾವಿರ ರೂ. ನೀಡುತ್ತಿರುವ ಸೌಲಭ್ಯದ ಯೋಜನೆ ಸೇರಿದಂತೆ ಪ್ರತಿಗ್ರಾಮದ ಸ್ವಚ್ಛತೆ ಹಾಗೂ ಸರಕಾರದ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಪ್ರಸ್ತುತಿಸಿದರು.
ಗ್ರಾಮದ ಮುಖಂಡರಾದ ಮಹೇಶ ಬಿಂಗಿ, ಮುದಿಯಪ್ಪ ಹರಿಜನ, ಸೋಮಪ್ಪ ಮೇಟಿ, ಶಂಕ್ರಪ್ಪ ಭೀಮನಗೌಡ, ಅಡಿವೆಪ್ಪ ಹರಿಜನ, ಹನುಮಂತಪ್ಪ ಅಮರಗೋಳ ಹಾಗೂ ವಾತರ್ಾ ಇಲಾಖೆ ಸಿಬ್ಬಂದಿ, ಸಾರ್ವಜನಿಕರು ಇದ್ದರು.