ಕಡ್ಡಾಯವಾಗಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ: ಎಸಿ, ಶ್ವೇತಾಬೀಡೀಕರ
Make it mandatory to install a clay Ganesh idol: AC, Shweta Bedikar
ಜಮಖಂಡಿ 21: ಗಣೇಶ ಹಬ್ಬದ ದಿನದಂದು ಕಡ್ಡಾಯವಾಗಿ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾನ ಮಾಡಿ ಆಚರಿಣೆಯನ್ನು ಮಾಡಬೇಕೆಂದು ಎಸಿ, ಶ್ವೇತಾ ಬೀಡೀಕರ ಹೇಳಿದರು.
ನಗರದ ಎಸ್.ಆರ್,ಎ ಕ್ಲಬ್‌ನಲ್ಲಿ ಆಯೋಜಿಸಿದ ನಗರ ಪೋಲಿಸರು ಗೌರಿ ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದರು, ಪ್ರತಿವುರ್ಷದಂತೆ ಗಣೇಶ ಹಬ್ಬವು ಬರುತ್ತದೆ. ಆದರೆ ಪಿಒಪಿ ಗಣೇಶನ ಮೂರ್ತಿಗಳನ್ನು ಮಾರಾಟ ಮಾಡುವ ಬಗ್ಗೆ ಗಣೇಶ ಮಂಡಳಿಯವರು ಪೂರ್ವಭಾವಿ ಸಭೆಯನ್ನು ಅಧಿಕಾರಿಗಳ ಜೊತೆ ಮಾಡಬೇಕು. ಇವಾಗ ಪಿಒಪಿ ಗಣೇಶನ ಮೂರ್ತಿಗಳನ್ನು ಸಂಪೂರ್ಣವಾಗಿ ಪ್ರತಿಷ್ಠಾನ ಮಾಡದೆ. ಕಡ್ಡಾಯವಾಗಿ ಮಣ್ಣಿನ ಗಣೇಶಗಳನ್ನು ಪ್ರತಿಷ್ಠಾನ ಮಾಡಬೇಕಾಗುತ್ತದೆ. ಕಾನೂನು ಸುವ್ಯವಸ್ಥಿತೆಯನ್ನು ತಾವುಗಳು ಕಾಪಾಡಿಕೊಂಡು ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಶಾಂತಿಯುತವಾಗಿ ಹಬ್ಬವನ್ನು ಆಚರಣೆ ಮಾಡಬೇಕು. ಗಣೇಶನ ವಿಸರ್ಜನೆ ಸಮಯದಲ್ಲಿ ಪೂಜಾ ಸಾಮಗ್ರಿಗಳನ್ನು ಎಲ್ಲೆಂದರೆಲ್ಲಿ ಬಿಸಾಕದೆ ಎಲ್ಲರೂ ಸ್ವಚ್ಛತೆ, ಶಿಸ್ತು ಕಾಪಾಡುವದು ಬಹಳ ಮುಖ್ಯವಾಗಿದೆ ಎಂದರು.
ಡಿಎಸ್‌ಪಿ, ರೋಷನ್ ಸೈಯದ ಜಮೀರ ಮಾತನಾಡಿ, ನಮ್ಮ ದೇಶ ಭಾವೈಕ್ಯತೆಯಿಂದ ಕೂಡಿದೆ. ಧರ್ಮ, ಜಾತಿ, ಪಂತ, ಹಲವಾರು ಭಾಷೆಗಳನ್ನು ಹೊಂದಿದ ದೇಶ ನಮ್ಮದಾಗಿದೆ. ಬೇರೆ ಧರ್ಮದವರು ವಿವಿಧ ಬಗ್ಗೆ ಹಬ್ಬಗಳನ್ನು ಆಚರಣೆ ಮಾಡುತ್ತಾ ಬಂದಿರುತ್ತಾರೆ. ಮುಸ್ಲಿಂ, ಹಿಂದುಗಳು ಯಾವುದೇ ಭೇಧಭಾವಗಳನ್ನು ಮರೆತು ಹಬ್ಬಗಳನ್ನು ಆಚರಣೆ ಮಾಡುತ್ತಾ ಬಂದಿರುತ್ತಾರೆ. ಈದ್ ಮಿಲಾದ ಹಾಗೂ ಗಣೇಶ ಹಬ್ಬ ಎರಡು ಹಬ್ಬಗಳು ಏಕಕಾಲಕ್ಕೆ ಬಂದಿರುತ್ತವೆ. ಗಣೇಶನ ಪ್ರತಿಷ್ಠಾನ ಸಮಯದಲ್ಲಿ ನಮ್ಮ ಪೋಲಿಸ್ ಠಾಣೆಗೆ ಬಂದು ತಮ್ಮ ಗಣೇಶ ಮಂಡಳಿಯ ಹೆಸರು ನೋಂದಣಿಯನ್ನು ಮಾಡಬೇಕು. ಮೊಬೈಲ್ ಸಂಖ್ಯೆಯನ್ನು ನೀಡುವ ಜೊತೆಗೆ ಉಚಿತವಾಗಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು ಎಂದರು.
ಗಣೇಶನ ಪ್ರತಿಷ್ಠಾನ ಮಾಡುವ ಸ್ಥಳಗಳಲ್ಲಿ ಪಾದಚಾರಿಗಳಿಗೆ ತೊಂದರೆ ಆಗದೆ ಹಾಗೆ ಪ್ರತಿಷ್ಠಾನ ಮಾಡಬೇಕು. ಗಣೇಶ ಪ್ರತಿಷ್ಠಾನದಲ್ಲಿ ಯಾವುದೇ ಅವಘಡಗಳು ಸಂಭವಿಸಿದರೆ ನೇರ ಹೊಣೆಯನ್ನು ಗಣೇಶ ಮಂಡಳಿಯರು ಆಗುತ್ತಾರೆ. ಪ್ರತಿಷ್ಠಾನ ಸ್ಥಳಗಳಲ್ಲಿ ನೀರಿನ ವ್ಯವಸ್ಥೆ ಮಾಡಬೇಕು. ಗಣೇಶನ ದರ್ಶನ ಪಡೆಯುವ ಸಮಯದಲ್ಲಿ ಹೆಣ್ಣುಮಕ್ಕಳಿಗೆ ಹಾಗೂ ಮಕ್ಕಳು, ಪುರುಷರಿಗೆ ಅನುಕೂಲವಾಗುವ ಹಾಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಯಾರಾದರೂ ಮಹಿಳೆಯರಿಗೆ ತೊಂದರೆ ನೀಡಿದ್ದಾರೆ ಯಾವುದೇ ಮುಲಾಜು ಇಲ್ಲದೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಗಣೇಶನ ಮೂರ್ತಿಯ ಮುಂದೆ ಡಿಸ್ಕೊ ಡಾನ್ಸ್ ಹಾಡುಗಳನ್ನು ಹಚ್ಚದೆ. ಭಕ್ತಿಭಾವದ ಗೀತೆಗಳನ್ನು ಹಾಕಬೇಕು. ಮೆರವಣಿಗೆ ಸಮಯದಲ್ಲಿ ಯಾವುದೇ ತೊಂದರೆ ಆಗದೆ ಹಾಗೆ ನಮ್ಮ ಸರಕಾರ ಮಟ್ಟದ ಸಂಬಂಧಪಟ್ಟ ಅಧಿಕಾರಿಗಳು ಸಹಕಾರವನ್ನು ನೀಡುತ್ತಾರೆ. ಅಗತ್ಯವಿದ ಸ್ಥಳಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಲಾಗುತ್ತದೆ. ಯಾರು ದೊಂಬಿ ಗಲಾಟೆ ಮಾಡುತ್ತಾರೆ ಅವರ ಮೇಲೆ ರೌಡೀಶೀಟರ್ ಪ್ರಕರಣವನ್ನು ಯಾವುದೇ ಮುಲಾಜು ಇಲ್ಲದೆ ಮಾಡಬೇಕಾಗುತ್ತದೆ. ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡದೇ ಗಣೇಶ ಹಬ್ಬವನ್ನು ಆಚರಣೆ ಮಾಡಬೇಕು. ಸರಕಾರದ ಆದೇಶದ ಮೇರೆಗೆ ಡಿಜೆ ಹಚ್ಚುವುದಕ್ಕೆ ಅವಕಾಶ ಇರುದಿಲ್ಲ ಎಂದರು.
ತಹಶೀಲ್ದಾರ ಅನೀಲ ಬಡಿಗೇರ, ಪೌರಾಯುಕ್ತ ಜೋತಿ ಗೀರೀಶ, ಸಿಪಿಐ ಮಲ್ಲಪ್ಪ ಮಡ್ಡಿ, ಹೆಸ್ಕಾಂ ವಿಶಾಲ ಧರೆಪ್ಪಗೋಳ, ಮಹಾ ಮಂಡಳ ಅಧ್ಯಕ್ಷ ಸಚೀನ ಪಟ್ಟಣಶೆಟ್ಟಿ, ಪ್ರದೀಪ ಮೆಟ್ಟಗುಡ್ಡ, ರಾಕೇಶ ಲಾಡ, ಗಣೇಶ ಶಿರಗನ್ನವರ, ಪ್ರಕಾಶ ಅರಕೇರಿ, ಕುಶಾಲ ವಾಗಮೋರೆ, ವಿಜಯ ಕಟ್ಟಗಿ ಮಾತನಾಡಿದರು.
ಗೌರಿ ಗಣೇಶ ಹಬ್ಬದ ಶಾಂತಿ ಪಾಲನಾ ಸಭೆಯಲ್ಲಿ ಶಹರ ಪೋಲಿಸ್ ಠಾಣೆಯ ಪಿಎಸ್‌ಐ ಅನೀಲ ಕುಂಬಾರ, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಸುಹಾನಾ ಬಾನು. ಅಗ್ನಿಶಾಮಕ ದಳದ ಅಧಿಕಾರಿ ಹಾಗೂ ವಿವಿಧ ಗಲ್ಲಿಯ ಗಣೇಶ ಮಂಡಳಿಯ ಯುವಕರು ಅಧ್ಯಕ್ಷರು,ಪದಾಧಿಕಾರಿಗಳು, ವಿವಿಧ ಸಂಘಟನೆಯವರು ಭಾಗಿಯಾಗಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 