ಪಿಂಚಣಿ ಅದಾಲತ್ ಸದುಪಯೋಗ ಪಡೆಸಿಕೊಳ್ಳಿ: ಅಮರಗಟ್ಟಿ
ಯಲಬುರ್ಗಾ 30: ಪಿಂಚಣಿದಾರರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಸರ್ಕಾರದಿಂದ ಪಿಂಚಣಿ ಅದಾಲತ್ ಹಮ್ಮಿಕೊಳ್ಳುವುದರ ಜೊತೆಗೆ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಸಹಕಾರಿ ಆಗದೆ. ಇದರ ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಗ್ರಾ.ಪಂ ಅಧ್ಯಕ್ಷ ಶರಣಕುಮಾರ್ ಅಮರಗಟ್ಟಿ ಹೇಳಿದರು.
ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕಂದಾಯ ಇಲಾಖೆ, ಜಿಲ್ಲಾ ಆಡಳಿತ, ತಾಲೂಕು ಆಡಳಿತ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು. ಪಿಂಚಣಿ ಯೋಜನೆ ಅದಾಲತ್ ಎಂದರೆ ಪಿಂಚಣಿದಾರರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಆಯೋಜಿಸುವ ಒಂದು ಕಾರ್ಯಕ್ರಮ. ಇದನ್ನು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಆಯೋಜಿಸಲಾಗುತ್ತದೆ. ಪಿಂಚಣಿದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವುದು, ಪಿಂಚಣಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು, ಪಿಂಚಣಿದಾರರಿಗೆ ಸುಲಭವಾಗಿ ಸೌಲಭ್ಯಗಳನ್ನು ಒದಗಿಸುವುದೇ ಪಿಂಚಣಿ ಅದಾಲತ್‌ನ ಉದ್ದೇಶವಾಗಿದೆ. ಕಂದಾಯ ನೀರೀಕ್ಷಕ ಹಸನಸಾಬ ತಳಕಲ್ ಮಾತನಾಡಿ, ಪಿಂಚಣಿ ಅದಾಲತ್‌ನಲ್ಲಿ ಪಿಂಚಣಿ ಅರ್ಜಿದಾರರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು, ಪಿಂಚಣಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಬಹುದು, ಕುಂದುಕೊರತೆಗಳನ್ನು ಸಲ್ಲಿಸಬಹುದು ಮತ್ತು ಅವುಗಳ ಪರಿಹಾರವನ್ನು ಪಡೆಯುವ ಮೂಲಕ ಯೋಜನೆಯ ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ವಡ್ಡರ,ಸದಸ್ಯರಾದ ಶರಣಪ್ಪ ಕರಡದ, ಶಾಂತಮ್ಮ ಮುರಾರಿ, ಪಿಂಚಣಿ ವಿಷಯ ನಿರ್ವಾಹಕ ಹನುಮಗೌಡ ಪಾಟೀಲ್, ಗ್ರಾಮ ಆಡಳಿತ ಅಧಿಕಾರಿ ರತ್ನಾ, ಪಿಡಿಒ ವೆಂಕಟೇಶ ನಾಯಕ, ಮುಖಂಡರಾದ ಚಂದ್ರಕಾಂತ ಬಿನ್ನಾಳ, ನಿಂಗಪ್ಪ ಮದ್ಗುಣ್ಕಿ, ಸಂಗಪ್ಪ ದೇಸಾಯಿ, ಹನಮಪ್ಪ ಸೂಡಿ, ಯಮನವ್ವ ಕರಿಗಾರ, ಶರಣವ್ವ ಕಡೇಮನಿ, ಭೀಮಜ್ಜ ದಮ್ಮೂರು, ಶರಣವ್ವ ಬಿಳೆಕಲ್ಲ, ಗ್ರಾಮ ಸಹಾಯಕರಾದ ಶರಣಪ್ಪ ತಳವಾರ, ಶರಣಪ್ಪ ಹಾಲಕೇರಿ, ಪಂಚಾಯತಿ ಸಿಬ್ಬಂದಿ ಶಾಮೀದ ಅಲಿ ನಧಾಪ್ ಇದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 