ಶಾಲೆಗಳು ಆರಂಭಕ್ಕೂ ಮುನ್ನ ಸರ್ವ ಸಿದ್ಧತೆ ಮಾಡಿಕೊಳ್ಳಿ: ದಂಡಿನ
Make all preparations before schools start: Dandina
ಯರಗಟ್ಟಿ 27: ಪ್ರಸಕ್ತ ಸಾಲಿನಲ್ಲಿ ಶಾಲೆಗಳು ಆರಂಭಕ್ಕೂ ಮುನ್ನ ಆಯಾ ಶಾಲೆಗಳ ಮುಖ್ಯ ಗುರುಗಳು ಸರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಸೂಚಿಸಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕಿನ ಎಲ್ಲಾ ಶಾಲಾ ಪ್ರಧಾನ ಗುರುಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲೆ ಆರಂಭಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳುವುದರ ಜತೆ ಬಿಸಿಯೂಟ, ಆರೋಗ್ಯ, ಸ್ವಚ್ಛತೆ ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು.
ಈ ಸಂದರ್ಭದಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು. ಮುಂದಿನ ಜೂ.14 ರಿಂದ 24 ವರೆಗೆ ಕೇಂದ್ರದಿಂದ ಬರುವ ಜೆ ಆರ್ ಎಂ ತಂಡ ಭೇಟಿ ನೀಡುತ್ತಿದ್ದು, ಅದರ ಪೂರ್ವಭಾವಿಯಾಗಿ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಅನುಷ್ಠಾನಗೊಳಿಸುವ 75 ಅಂಶಗಳ ಕುರಿತು ಸುದೀರ್ಘವಾಗಿ ಚರ್ಚಿಸಿ ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ವೈ. ಬಿ. ಕಡಕೋಳ ಸಮನ್ವಯ ಶಿಕ್ಷಣ ಕುರಿತು ಮಾಹಿತಿಯನ್ನು ನೀಡಿದರು. ನಂತರ ಮನೋಹರ ಚೀಲದ ನಲಿಕಲಿ ತರಗತಿ ಪ್ರಕ್ರಿಯೆಯಲ್ಲಿ ಹಮ್ಮಿಕೊಳ್ಳಲಾಗುವ ಚಟುವಟಿಕೆಗಳನ್ನು ಕುರಿತು ಮಾತನಾಡಿದರು. ಹಾಗೂ ಬಿಆರ್‌ಪಿ ಎಂ. ಬಿ. ಕರಡಿಗುಡ್ಡ ತಂತ್ರಜ್ಞಾನ ಆಧಾರಿತ ಎಸ್‌ಎಟಿಎಸ್ ಮಾಹಿತಿಯನ್ನು ನೀಡಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ, ಅಕ್ಷರದಾಸೋಹ ಅಧಿಕಾರಿ ಮೈತ್ರಾದೇವಿ ವಸ್ತ್ರದ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ವಸಂತ ಬಡಿಗೇರ, ಮಲ್ಲಿಕಾರ್ಜುನ ಮಲಕನ್ನವರ, ಎನ್, ಬಿ. ಪೆಂಟೇದ, ರಫೀಕ ಮುರಗೋಡ, ಬಾಳೇಶ ಸಿದ್ದಬಸನ್ನವರ, ಎ. ಎ. ಮಕ್ತುಮನವರ, ಶಿಕ್ಷಣ ಸಂಯೋಜಕರಾದ ಎಂ. ಬಿ. ಕಡಕೋಳ, ವ್ಹಿ. ಎಸ್. ಹಿರೇಮಠ ನಾನಾ ಶಾಲೆಗಳ ಪ್ರಧಾನ ಗುರುಗಳು ಹಾಗೂ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.
ಪಠ್ಯ ಪುಸ್ತಕ 75 ರಷ್ಟು ಪೋರೈಸಾಲಗಿಸಲಾಗಿದ್ದು ಶಾಲಾ ಪ್ರಾರಂಭದಿನವೇ ಪಠ್ಯ ಪುಸ್ತಕ ವಿತರಿಸಲಾಗುವುದು. ಮತ್ತು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತಿದ್ದು ಶೀತ, ಜ್ವರ, ಕೆಮ್ಮು ಕಂಡುಬಂದ ಮಕ್ಕಳನ್ನ ಶಾಲೆಗೆ ಕಳಿಸದಂತೆ ಪೊಷಕರು ಎಚ್ಚರಿಕೆ ವಹಿಸಬೇಕು. ಹಾಗೂ ಅಲ್ಲದೇ ಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಕೂಡಾ, ಜ್ವರ ಬಂದ ಮಕ್ಕಳಿಗೆ ರಜೆ ನೀಡಬೇಕು ಸೂಚಿಸಿದರು
ಮೋಹನ ದಂಡಿನ,
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಯರಗಟ್ಟಿ-ಸವದತ್ತಿ
ಶಾಲೆಗಳನ್ನು ಹಾಲು, ಮೊಟ್ಟೆ, ಬಿಸಿ ಊಟದ ಜೊತೆ ಶಾಲಾ ಪ್ರಾರಂಭಿಸಲಾಗುವುದು. ಹಾಗೂ ಅಡಿಗೆ ಕೊಣೆಯನ್ನು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಮತ್ತು ಕಡ್ಡಾಯವಾಗಿ ಅಡಿಗೆಯವರ ಸಮಸ್ತ್ರ ಧರಿಸಲು ಪ್ರಧಾನ ಗುರುಗಳು ತಿಳಿಸಬೇಕು ಎಂದು ಹೇಳಿದರು ಹಾಗೂ ವಾರದಲ್ಲಿ ಮೂರು ದಿನಗಳು ರಾಗಿ ಗಂಜಿ ನೀಡಲಾಗುವುದು.
ಮೈತ್ರಾದೇವಿ ವಸ್ತ್ರದ,
ಅಕ್ಷರದಾಸೋಹ ಅಧಿಕಾರಿ, ಯರಗಟ್ಟಿ-ಸವದತ್ತಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 