ಮಕರ ಸಂಕ್ರಾಂತಿ ಸುಗ್ಗಿ ಹಬ್ಬ ಆಚರಣೆ
Makar Sankranti harvest festival celebration
ಜಮಖಂಡಿ 18: ಅಂಗನವಾಡಿ ಕೇಂದ್ರದಲ್ಲಿ ಮಕರ ಸಂಕ್ರಾಂತಿ ಸುಗ್ಗಿ ಹಬ್ಬವನ್ನು ಚಿಕ್ಕಮಕ್ಕಳು ವಿವಿಧ ವೇಷಭೂಷಣದೊಂದಿಗೆ ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆರು, ಮುಖ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಸೇರಿ ಅಂಗನವಾಡಿ ಕೇಂದ್ರದಲ್ಲಿ ಮಕರ ಸಂಕ್ರಾಂತಿ ಸುಗ್ಗಿ ಹಬ್ಬವನ್ನು ಆಚರಿಸಿದರು.
ನಗರದ ರುದ್ರಸ್ವಾಮಿ ಪೇಠ ಗಲ್ಲಿಯ ಸಮಗಾರ ಗಲ್ಲಿಯ ಅಂಗನವಾಡಿ ಕೇಂದ್ರದಲ್ಲಿ ರುದ್ರಸ್ವಾಮಿ ಪೇಠ (ಎ) ರುದ್ರಸ್ವಾಮಿ ಪೇಠ (ಬಿ) ಬಾರ್ೇಟ್ ಗಲ್ಲಿ ನಂ,2, ಅಂಗನವಾಡಿ ಕೇಂದ್ರಗಳು ಸೇರಿಕೊಂಡು ಬಾಲವಿಕಾಸ ಸಲಹಾ ಸಮಿತಿ ಸಹಯೋಗದಲ್ಲಿ ಮಕರ ಸಂಕ್ರಾಂತಿ ಸುಗ್ಗಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.
ಮಕರ ಸಂಕ್ರಾಂತಿ ಸುಗ್ಗಿ ಹಬ್ಬದಲ್ಲಿ ಕಬ್ಬುಗಳು, ಮಡಿಕೆಗಳು, ವಿವಿಧ ಬಗೆಯ ಧವಸ, ಧಾನ್ಯಗಳು, ಗೊಂಬೆಗಳು ಹೀಗೆ ಹಲವು ಬಗೆಯ ಸಾಮಗ್ರಿಗಳ ಜೊತೆಗೆ ರಂಗೋಲಿಯ ಚಿತ್ತಾರಗಳಲ್ಲಿ ಸಂಕ್ರಾತಿ ಸುಗ್ಗಿಯ ಹಬ್ಬವನ್ನು ಆಚರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಮೇಲ್ವಿಚಾರಕಿ ದಾನಮ್ಮ ಅಥಣಿ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಎಸ್.ಎ.ಪೂಜಾರಿ, ಶ್ರೀಮತಿ ಎಮ್.ಎಸ್.ಬಳೋಲಗಿಡದ, ಶ್ರೀಮತಿ ಸಿ.ಎಮ್.ಲಗಳಿ, ಶ್ರೀಮತಿ ರೇಖಾ ತರತರಿ, ಆಶಾ ಕಾರ್ಯಕರ್ತೆಯರಾದ ಸುನೀತಾ ಜಂಬಗಿ, ಸವಿತಾ ಹೊಳೆಪ್ಪಗೋಳ, ನಾಗಮ್ಮ ಐನಾಪೂರ, ಬಾಲವಿಕಾಸ ಸಲಹಾ ಸಮಿತಿ ಅಧ್ಯಕ್ಷತೆ ಗಾಯಿತ್ರಿ ಬಿದರಿ, ಅಕ್ಷತಾ ಬಳೋಲಗಿಡದ, ಕಾವೇರಿ ಲಗಳಿ, ಲಕ್ಷ್ಮಿ ಗೌಳಿ, ಕೆ.ಬಿ.ಕಾಲತಿಪ್ಪಿ, ಶಾರದಾ ಮೀಶಿ, ಗೀತಾ ಜೋರಾಪೂರ, ಎಮ್.ಬಿ.ಕರಾಬಿ, ಛಲವಾದಿ ಮಹಾಸಭಾ ಅಧ್ಯಕ್ಷ ಶಶಿಕಾಂತ ತೇರದಾಳ, ರವಿ ದೊಡಮನಿ, ಸಿದ್ದು ಕಾಂಬಳೆ ಸೇರಿದಂತೆ ಅನೇಕರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 