ಮಜಗಾವಿ: ಮಹಾವೀರರ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ
Majgavi: Grand procession of Mahavira festival statue
ಬೆಳಗಾವಿ 30: ಸಮೀಪದ ಮಜಗಾವಿ ಗ್ರಾಮದಲ್ಲಿ ಭಗವಾನ್ ಮಹಾವೀರರ ಜನ್ಮಕಲ್ಯಾಣ ಮಹೋತ್ಸವದ ಪ್ರಯುಕ್ತ ಇಲ್ಲಿನ ಆದಿನಾಥ ದಿಗಂಬರ ಜೈನ ಮಂದಿರದಲ್ಲಿ ಮಹಾವೀರರ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆಯು ಮುನಿಗಳ ಸಾನ್ನಿಧ್ಯದಲ್ಲಿ ಅತ್ಯಂತ ವೈಭವದಿಂದ ಜರುಗಿತು.
ಮಹಾನಸಾಗರ ಮುನಿಮಹಾರಾಜರ ದಿವ್ಯ ಮಾರ್ಗದರ್ಶನದಲ್ಲಿ ಭಗವಾನ್ ಮಹಾವೀರರ ನೂತನ ಉತ್ಸವ ಮೂರ್ತಿಯ ಮೆರವಣಿಗೆಯು ಮಜಗಾಂವದ ಪ್ರಮುಖ ಬೀದಿಗಳಲ್ಲಿ ಸಡಗರದಿಂದ ನಡೆಯಿತು. ಜನ್ಮಕಲ್ಯಾಣದ ಈ ಪವಿತ್ರ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಪ್ರಮುಖರು, ವರ್ಷಕ್ಕೊಮ್ಮೆ ಬರುವ ಈ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಧರ್ಮ ಬಂಧುಗಳು ತಮ್ಮ ಪಾಪ ಕರ್ಮಗಳನ್ನು ಕಳೆಯಲು ಸದುಪಯೋಗ ಪಡಿಸಿಕೊಳ್ಳಬೇಕು. ಪ್ರತಿನಿತ್ಯ ಮಡಿ ಬಟ್ಟೆ ಧರಿಸಿ ಜಿನೇಂದ್ರರ ಅಭಿಷೇಕ ಹಾಗೂ ಪೂಜೆ ಮಾಡುವುದರೊಂದಿಗೆ ಜೈನ ಧರ್ಮದ ಪ್ರಭಾವನೆ ಮಾಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮೆರವಣಿಗೆಯ ಉದ್ದಕ್ಕೂ ಜೈನ ಶ್ರಾವಕ-ಶ್ರಾವಕಿಯರು ವಾದ್ಯಗೋಷ್ಠಿಗಳ ಲಯಕ್ಕೆ ತಕ್ಕಂತೆ ರೂಪಕ ವಾಹನದ ಸುತ್ತ ನೃತ್ಯ ಮಾಡಿ ಜಿನ ಭಗವಂತರಿಗೆ ಭಕ್ತಿ ಸಮರ್ಿಸಿದರು. ಕಾರ್ಯಕ್ರಮದಲ್ಲಿ ಮಜಗಾಂವ ಗ್ರಾಮದ ಪಂಚ್ ಕಮಿಟಿ, ಚತುರ್ಮಾಸ ಸಮಿತಿ, ಯುವಕ ಹಾಗೂ ಮಹಿಳಾ ಮಂಡಳಿಗಳು ಮತ್ತು ಪಾಠಶಾಲೆಯ ಪುಟಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಜೈ ಜಿನೇಂದ್ರ ಘೋಷಣೆ ಮುಗಿಲು ಮುಟ್ಟಿತ್ತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 