ಮಹಿಳೆಯರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು: ಧನಂಜಯಕುಮಾರ

ಮುಧೋಳ: ಮನೆ, ಮನಸ್ಸು, ಆರೋಗ್ಯ ಚನ್ನಾಗಿ ಇರಬೇಕಾದರೆ. ಆಹಾರ ಪದ್ಧತಿಯನ್ನು ಅಳವಡಿಕೊಳ್ಳಬೇಕು. ಮಹಿಳೆ ಕುಟುಂಬ ನಾಯಕಿ, ಮಹಿಳೆ ಸಧೃಡವಿದ್ದರೆ ಕುಟುಂಬ ಸರಿ ಇರುವುತ್ತದೆ. ಎಂದು ತಾಲೂಕಾ ಯೋಜನಾ ಅಧಿಕಾರಿ ಧನಂಜಯಕುಮಾರ ಹೇಳಿದರು.                 ತಾಲೂಕಿನ ನಾಗರಾಳ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾ ಅಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಮುಧೋಳ, ಸಿರಿ ಗ್ರಾಮೋಧ್ಯೋಗ ಸಂಸ್ಥೆಯ ಆಶ್ರಯದಲ್ಲಿ ಜರುಗಿದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಗಭರ್ಿಣಿ ಸ್ತ್ರೀಯರಿಗೆ, ಬೆಳೆಯುವ ಮಕ್ಕಳಿಗೆ, ಮಹಿಳೆಯರಿಗೆ ಪುಷ್ಟಿ ವಿತರಣೆ ಮಾಡಿ ಪೌಷ್ಠಿಕ ಆಹಾರದ ಮಹತ್ವವನ್ನು ತಿಳಿಸಿದರು. ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಎಮ್. ಮಹಾದೇವಿ ಮಾತನಾಡಿ ಸಂಘದ ಮಹಿಳಾ ಸದಸ್ಯರು ಮಾಡಿಕೊಂಡು ಬಂದ ಅಡುಗೆ ಬಗ್ಗೆ ವಿವರಿಸಿ ಶಿಸ್ತಿಗೆ ಇನ್ನೊಂದು ಹೆಸರೇ ಮಹಿಳೆ ಆಗಬೇಕೆಂದರು. 

    ಮಳಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ|| ಕ್ರಾಂತಿ ಲೋಕರೆ, ಉದ್ಘಾಟಿಸಿದರು. ಆರೋಗ್ಯ ಕೇಂದ್ರ ಮೇಲ್ವಿಚಾಲಕರು, ಕಿರಿಯ ಆರೋಗ್ಯ ಸಹಾಯಕರು, ಗ್ರಾ.ಪಂ. ಸದಸ್ಯರು ಒಕ್ಕೂಟದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಗೀತಾ ಕತ್ತಿ, ಸ್ವಾಗತಿಸಿದರು. ಸುಶಿಲಾ ಭಜಂತ್ರಿ, ಪ್ರಾಥರ್ಿಸಿದರು, ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಶಾಂತಾ ಭಜಂತ್ರಿ ವಂದಿಸಿದರು.