ಸರಕಾರಿ ಶಾಸಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾವೀರ ಜಯಂತಿ
Mahavir Jayanti at Government MLA Higher Primary School
ಲೋಕದರ್ಶನ ವರದಿ
ಗುರ್ಲಾಪೂರ 30: ಗುರ್ಲಾಪೂರ ಪಿ ಎಂ ಶ್ರೀ ಸರಕಾರಿ ಶಾಸಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾವೀರ ಜಯಂತಿ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಬಸವರಾಜ ಸಸಾಲಟ್ಟಿ ಅಧ್ಯಕ್ಷ ಸ್ಥಾನ ವಹಿಸಿ ವರ್ಧಮಾನ ಮಹಾವೀರ 24 ನೇ ತೀರ್ಥಂಕರು. ಮೋಕ್ಷಸಾಧನೆಗಾಗಿ ಪಂಚಶೀಲ ತತ್ವಗಳನ್ನು ಮತ್ತು ತ್ರೀರತ್ನಗಳನ್ನು ಬೋಧಿಸಿದರು. ಸಮಾಜಕ್ಕೆ ಅವರು ಬೋಧಿಸಿದ ಬೋಧನೆಗಳು ಇಂದಿಗೂ ಸ್ಥಿರಸ್ಥಾಯಿ ಆಗಿ ಉಳಿದಿವೆ. ತಮ್ಮ 72ನೇ ವಯಸ್ಸಿನಲ್ಲಿ ಈಹಲೋಕ ತ್ಯಜಿಸಿದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಮೂಡಲಗಿಯ ಪ್ರಾಂಶುಪಾಲರಾದ ಡಾಽಽ ಎಂ ಎನ್ ಕಂಕಣವಾಡಿ ಅತಿಥಿ ಸ್ಥಾನ ಅಲಂಕರಿಸಿದರು. ಉಪನ್ಯಾಸಕರಾದ ಶಿವಾನಂದ ಹಳ್ಳೂರ ಸ್ವಾಗತಿಸಿದರು. ಶಾಲೆಯದೈಹಿಕ ಶಿಕ್ಷಕರಾದ ಎಲ್ ಆರ್ ಸಾಲಿ ಮಠ ಕಾರ್ಯಕ್ರಮ ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 