ಮಹಾತ್ಮರ ಚರಿತ್ರೆ ಅಂತಃಕರಣ ಶುದ್ದಿಗೊಳಿಸುತ್ತದೆ: ಶಂಕರಾನಂದ ಶ್ರೀ

ಮುಧೋಳ 13: ಮಹಾತ್ಮ ಪವಿತ್ರ ಚರಿತ್ರೆಯನ್ನು ಶ್ರದ್ಧೆಯಿಂದ ಕೇಳುವ ಜನರ ಅಂತಃಕರಣ ಶುದ್ದಿಗೋಳಿಸಿ ಸಕಲ ಸೌಭಾಗ್ಯಗಳನ್ನು ನೀಡುತ್ತವೆ ಎಂದು ಶ್ರೀ ಗುರುನಾಥಾರೂಢರ ಮಠದ ಸಂಸ್ಥಾಪಕರಾದ ಶಂಕರಾನಂದ ಶ್ರೀಗಳು ಹೇಳಿದರು. 

ಅವರು ತಾಲೂಕಿನ ಕುಳಲಿ ಗ್ರಾಮದ ಗುರುನಾಥಾರೂಢರ ಮಠದಲ್ಲಿ ಜನೇವರಿ 16,17,18ರಂದು ನಡೆಯುವ 14ನೇ ವೇದಾಂತ ಪರಿಷತ್ತಿನ ಅಂಗವಾಗಿ 7 ದಿನ ನಡೆಯುವ ಜಗದ್ಗುರು ಸಿದ್ಧಾರೂಢರ ಪುರಾಣ ಪ್ರಾರಂಭೋತ್ಸವನ್ನು ನೇರವೆರಿಸಿ ಮಾತನಾಡುತ್ತಾ ಮಹಾತ್ಮರ ದರ್ಶನ, ಸ್ಪರ್ಶನ, ಸಂಭಾಷನೆ, ಮಹಾತ್ಮರ ಪವಿತ್ರ ಚರಿತ್ರೆಗಳು ಬದುಕನ್ನು ಪಾವನಗೊಳಿಸುತ್ತದೆ ಎಂದರು. ಮುಗಳಖೋಡ ಶಿವಾನಂದ ಭಾರತಿ ಆಶ್ರಮದ ಶಿವಾನಂದ ಶ್ರೀಗಳು, ಮಲ್ಲೇಶ್ವರ ಶರಣರು, ಶ್ರೀಮನ್ ನಿಜಗುಣ ಶಿವಯೋಗಿಯ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಉಪಸ್ಥಿತರಿದ್ದರು. ದಿ: 9 ರಿಂದ 15ರ ವರೆಗೆ ಪ್ರತಿ ದಿನ 7-30 ರಿಂದ 8-30ರ ವರೆಗೆ ಹಡಗಿನಾಳದ ಮಲ್ಲೇಶ್ವರ ಶರಣರು ಸಿದ್ಧ ಚರಿತ್ರೆಯನ್ನು ನಡೆಸಿಕೊಡುತ್ತಿದ್ದಾರೆ. ಕುಳಲಿಯ ಹಾಗೂ ಸುತ್ತಮುತ್ತಲಿನ ಕಲಾವಿದರಿಂದ ಭಜನಾ ಸೇವೆ ನಡೆಯುತ್ತಿದೆ.