ಮುದ್ದೇಬಿಹಾಳ 29: ಏಪ್ರಿಲ್ 5 ರಂದು ಹಸಿರುಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ 118 ನೇ ಹಾಗೂ ಏಪ್ರಿಲ್ 14 ರಂದು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆ ಆಚರಿಸಲಾಗುತ್ತಿರುವ ಜಯಂತಿಯ ಅರ್ಥಪೂರ್ಣ ಹಾಗೂ ವ್ಯವಸ್ಥಿತವಾಗಿ ಆಚರಿಸಲಾಗುವುದು ಕಾರಣ ಎಲ್ಲ ಸರಕಾರಿ ಅರೇ ಸರಕಾರಿ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವ ಯಶಸ್ವಿಗೊಳಿಸಬೇಕು ಎಂದು ತಹಶಿಲ್ದಾರ ಬಲರಾಮ ಕಟ್ಟಿಮನಿ ಹೇಳಿದರು.
ಪಟ್ಟಣದ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕಾ ಮಟ್ಟದ ಸರಕಾರಿ ಅಧಿಕಾರಿಗಳ, ವಿವಿಧ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಏಪ್ರಿಲ್ 5 ರಂದು ಹಸಿರುಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ ಜಯಂತಿಯನ್ನು ಎಲ್ಲರ ಸಮ್ಮುಖದಲ್ಲಿ ಸಾಂಕೇತಿಕ ಮಿನಿವಿಧಾನ ಸೌಧದಲ್ಲಿ ಆಚರಿಸಲಾಗುತ್ತದೆ. ಏಪ್ರಿಲ್ 14 ರಂದು ನಗರದ ಅಂಬೇಡ್ಕರ್‌ವೃತ್ತದಲ್ಲಿ ಅಂಬೇಡ್ಕರವರ ಜಯಂತಿಯನ್ನು ಬಹಿರಂಗ ವೇದಿಕೆ ನಡೆಸಲಾಗುತ್ತಿದೆ ಈ ವೇಳೆ ಗಣ್ಯರು, ರಾಜಕೀಯ ಮುಖಂಡರು, ಸಾಹಿತಿಗಳು ವಿವಿದ ದಲಿತಪರ ಹಾಗೂ ಕನ್ನಡಪರ ಪ್ರಗತಿಪರ ಸಂಘಟನೆಗಳ ಮುಖಂಡರು ಗಳು ಬಾಗವಹಿಸಲಿದ್ದಾರೆ.
ಪಟ್ಟಣದ ಎಲ್ಲ ವೃತ್ತಗಳಲ್ಲಿ ಅತ್ಯಂತ ಸುಂದರ ಬೀದೀದೀಪಗಳನ್ನು ಅಳವಡಿಸುವುದು, ತಳಿರು ತೊರಣ ಸಿಂಗರಿಸುವುದು ಸೇರಿದಂತೆ ಕಾರ್ಯಕ್ರಮ ಅತ್ಯಂತ ಸಂಭ್ರಮ ಸಡಗರದಿಂದ ಗೌರವಪೂರ್ಣವಾಗಿ ಆಚರಿಸಲಾಗುವುದು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಮಕ್ಕಳಿಗೆ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲು ಕ್ರಮ ವಹಿಸಬೇಕು. ಕಾರ್ಯಕ್ರಮಕ್ಕೂ ಮುನ್ನ ಕಲಾ ತಂಡಗಳಿಗೆ ವ್ಯವಸ್ಥಿತ ಮೆರವಣಿಗೆ ನಡೆಯಬೇಕು. ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರ ಆಯ್ಕೆ, ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ, ವೇದಿಕೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಕಾರ್ಯಕ್ರಮ ವಹಿಸಬೇಕೆಂದರು.
ದಲಿತ ಮುಖಂಡ ಹರೀಷ ನಾಟಿಕಾರ ಹಾಗೂ ಡಿ ಬಿ ಮೂದೂರ, ಪುಂಡಲೀಕ ಮೂರಾಳ ಅವರು ಮಾತನಾಡಿ ಇದೋಂದು ಎಲ್ಲರೂ ಮೆಚ್ಚುವಂತೆ ಗೌರವಪೂರ್ಣವಾಗಿ ಆಚರಿಸುವಂತಾಗಬೇಕು ಜತೆಗೆ ಎಲ್ಲ ಸರಕಾರಿ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತಾಗಬೇಕು ಎಂದರು ಜತೆಗೆ ಡಾ, ಬಿ ಆರ್ ಅಂಬೇಡ್ಕರವರ ಜೀವನಾಧಾರಿತ ನಾಟಕ ಪ್ರದರ್ಶನ ಏರಿ್ಡಸುವ ಮೂಲಕ ಜನರಿಗೆ ಇಂದಿನ ಮಕ್ಕಳಿಗೆ ಡಾ, ಬಿ ಆರ್ ಅಂಬೇಡ್ಕರವರ ಆದರ್ಶ ಜೀವನದ ಮಹತ್ವ ತಿಳಿಯುವಂತೆ ಮಾಡಬೇಕು ಎಂದು ಸಲಹೆ ನೀಡಿದರು. ಇದಕ್ಕೆ ತಹಶಿಲ್ದಾರ ಬಲರಾಮ ಕಟ್ಟಿಮನಿಯವರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸುವ ಮೂಲಕ ನಾಟಕ ಆಯೋಜನೆಗೆ ಸಮೀತಿ ನಿರ್ಮಿಸಲಾಯಿತು. ದಲಿತ ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಪರಶುರಾಮ ಕೊಣ್ಣೂರ ಅವರನ್ನು ಕಾರ್ಯಕ್ರಮ ನಿರೂಪಣೆ ಜವಾಬ್ದಾರಿ ವಹಿಸಲಾಯಿತು.ವಿವಿಧ ಮುಖಂಡರು ಬೋರ್ಡ ಅಳವಡಿಕೆ, ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಮಹಿಳಾ ಸಂಘಟನೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು ಹಾಗೂ ಸಮುದಾಯಗಳಿಗೆ ಭಾಗವಹಿಸುವಿಕೆ, ಮಕ್ಕಳಿಗೆ ವಿವಿಧ ವೇಷ ಭೂಷಣ ಕಾರ್ಯಕ್ರಮ ಆಯೋಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಹಾಗೂ ನಗರದ ವಿವಿಧ ವೃತ್ತಗಳಿಗೆ ದೀಪಾಲಂಕಾರ ವ್ಯವಸ್ಥೆ, ಎನ್.ಜಿ.ಓ. ?? ಎನ್.ಎಸ್.ಎಸ್., ಎನ್.ಸಿ.ಸಿ ಸಂಘಟನೆಗಳ ಭಾಗವಹಿಸುವಿಕೆ, ರೈತರು ಸೇರಿದಂತೆ ಗ್ರಾಮೀಣ ಪ್ರದೇಶದ ಜನರ ಕಾರ್ಯಕ್ರಮಕ್ಕೆ ಹಾಜರಾಗುವ ಕುರಿತು ಹಾಗೂ ಪ್ರಾಥಮಿಕ ಮತ್ತು ಚಿಕಿತ್ಸಾಶಾಲಾ ಮಕ್ಕಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳ ಆಯೋಜನೆ, ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ಮಾಜಿ ಸೈನಿಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವುದು ಈ ಕುರಿತು ವಿವಿಧ ಸಂಘಟನೆಗಳ ಸಮುದಾಯಗಳ ಪ್ರಮುಖರು ತಮ್ಮ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಾಯಿತು.
ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಮಸಳಿ, ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ಧೇಶಕಿ ಬಸಂತಿ ಮಠ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಆರೋಗ್ಯಾಧಿಕಾರಿ ಡಾ, ಸತೀಶ ತಿವಾರಿ, ಪಿಎಸೈ ಸಂಜಯ ತಿಪ್ಪಾರೆಡ್ಡಿ, ಕೃಷಿ ಇಲಾಖೆ ಬಿ ಎಸ್ ಕಡಕಭಾವಿ, ಗ್ರಾಮೀಣ ಕುಡಿಯುವ ನೀರು ಸರಬರಾಜ ಇಲಾಖೆ ಎಇಇ ಆರ್ ಎಚ್ ಹಿರೇಗೌಡರ, ದಲಿತ ಮುಖಂಡರಾದ ದೇವರಾಜ ಹಂಗರಗಿ, ಪ್ರಶಾಂತ ಕಾಳೆ, ಪ್ರಕಾಶ ಸರೂರ, ಚನ್ನಪ್ಪ ವಿಜಯಕರ, ಬಲಭೀಮ ನಾಯಕಮಕ್ಕಳ, ನಾಗೇಶ ಭಜಂತ್ರಿ, ಭಗವಂತ ಕಬಾಡೆ, ಮಲ್ಲು ತಳವಾರ, ಶಿವು ಶಿವಪುರಿ, ಅಶೊಕ ಪಾದಗಟ್ಟಿ, ಸೇರಿದಂತೆ ಹಲವರು ಇದ್ದರು.