ರಾಜಯೋಗಿನಿ ಬಿ.ಕೆ.ಪುಷ್ಪಾ ನೇತೃತ್ವದಲ್ಲಿ ನಿರಾಕಾರ ಶಿವನ ಮಹಾಶಿವರಾತ್ರಿ
Mahashivratri of the formless Shiva led by Rajyogini B.K. Pushpa
ರಾಯಬಾಗ 12 : ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬಿ.ಕೆ.ಪುಷ್ಪಾ ಅಕ್ಕನವರ ನೇತೃತ್ವದಲ್ಲಿ ಫೆ.14 ಮತ್ತು 15 ರಂದು ನಿರಾಕಾರ ಶಿವನ ಅವತರಣ ಮಹೋತ್ಸವದ 90 ನೇ ಮಹಾಶಿವರಾತ್ರಿ ಕಾರ್ಯಕ್ರಮ ಜರುಗಲಿದೆ.ಫೆ.14 ರಂದು ಬೆಳಿಗ್ಗೆ 9 ಗಂಟೆಗೆ ವಿಶ್ವಶಾಂತಿಗಾಗಿ 12 ಕಾರುಗಳ ಮೇಲೆ ದ್ವಾದಶ ಜ್ಯೋತಿರ್ಲಿಂಗಗಳ ಭವ್ಯ ಮೆರವಣಿಗೆ ಜರುಗುವುದು. ಈ ಶಾಂತಿಯಾತ್ರೆಯು ನಂದಿಕುರಳಿ ಪಂಚಲಿಂಗೇಶ್ವರ ಮಠದ ವೀರಭದ್ರೇಶ್ವರ ಸ್ವಾಮಿಜೀಯವರ ಸಾನಿಧ್ಯದಲ್ಲಿ, ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಕೇಂದ್ರದಲ್ಲಿಚಾಲನೆ ನೀಡಲಿದ್ದಾರೆ.
ತಹಸೀಲ್ದಾರ ಮಹಾದೇವ ಸನಮುರಿ, ಸಿಪಿಐ ಎಮ್.ಎಮ್. ಡಪ್ಪಿನ, ತಾ.ಪಂ.ಇಒ ಡಾ.ಸುರೇಶ್ ಕದ್ದು, ಬಿಇಒ ಬಸವರಾಜಪ್ಪ ಆರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಚಂದರಗಿ, ಸಿಡಿಪಿಒ ಭಾರತಿ ಕಾಂಬಳೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕಲ್ಪನಾ ಕಾಂಬಳೆ ಶಾಂತಿಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಫೆ.15 ರಂದು ಸಾಯಂಕಾಲ 05 ಗಂಟೆಗೆ ಪಟ್ಟಣದ ಚಿಂಚಲಿ ರಸ್ತೆಯಲ್ಲಿರುವ ಆವಂತಿಕಾ ಹೋಟೆಲ ಹತ್ತಿರದ ಆವರಣದಲ್ಲಿ ನಡೆಯುವ ಮಹಾಶಿವರಾತ್ರಿಯ ಆಧ್ಯಾತ್ಮಿಕ ರಹಸ್ಯ ಕಾರ್ಯಕ್ರಮವನ್ನು ಲೇಖಕ ಮತ್ತು ಜಿ.ಪಂ.ಮಾಜಿ ಸದಸ್ಯ ಪ್ರಣಯ ಪಾಟೀಲ ಉದ್ಘಾಟಿಸಲಿದ್ದಾರೆ. ಸಾನಿಧ್ಯವನ್ನು ಬಾವನಸೌಂದತ್ತಿ ಓಂಕಾರಾಶ್ರಮದ ಮಾತಾಜೀ ಭ್ರಮರಾಂಬಿಕಾದೇವಿ ವಹಿಸಲಿದ್ದಾರೆ.
ರಾಜಯೋಗಿನಿ ಬಿ.ಕೆ.ಸವಿತಾ ಅಕ್ಕನವರು ಶಿವಸಂದೇಶ ನೀಡುವರು. ಅತಿಥಿಗಳಾಗಿ ವಿಜಯಪುರ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ, ಡಿ.ಎಸ್.ನಾಯಿಕ, ಶಶಿಕಾಂತ ಕುಲಗುಡೆ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಬೆಳಗಾವಿ ಬ್ರಹ್ಮಾಕುಮಾರಿಸ್ ಉಪವಲಯದ ರಾಜಯೋಗಿನಿ ಬಿ.ಕೆ.ಅಂಬಿಕಾ ಅಕ್ಕನವರು ವಹಿಸಲಿದ್ದು, ಎರಡು ದಿನಗಳ ಮಹಾಶಿವರಾತ್ರಿ ಕಾರ್ಯಕ್ರಮಗಳಲ್ಲಿ ರಾಯಬಾಗ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಮಸ್ತ ಮಹಾಜನತೆ ಭಾಗವಹಿಸಿ ಶಿವನ ಕೃಪೆಗೆ ಪಾತ್ರರಾಗಬೇಕೆಂದು ರಾಯಬಾಗ ಬ್ರಹ್ಮಕುಮಾರಿಸ್ ಸೇವಾಕೇಂದ್ರದ ಸಂಚಾಲಕಿ ಬಿ.ಕೆ.ಪುಷ್ಪಾ ಅಕ್ಕನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫೋಟೊ: 12 ರಾಯಬಾಗ 1ಫೋಟೊ ಶೀರ್ಷಿಕೆ: ರಾಯಬಾಗ: ಬ್ರಹ್ಮಕುಮಾರಿಸ್ ಸೇವಾಕೇಂದ್ರದ ಸಂಚಾಲಕಿ ಬಿ.ಕೆ.ಪುಷ್ಪಾ ಅಕ್ಕನವರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 