ವಿಶ್ವ ಹಿಂದು ಪರಿಷತ್, ಭಜರಂಗದಳ ಸಹಯೋಗದಲ್ಲಿ ಮಹಾಸತ್ಸಂಗ ಸಮಾವೇಶ ಕಾರ್ಯಕ್ರಮ
Mahasatsang conference program in collaboration with Vishwa Hindu Parishad and Bajrang Dal
ಜಮಖಂಡಿ 20 : ವಿಶ್ವ ಹಿಂದು ಪರಿಷತ್, ಭಜರಂಗದಳ ಸಹಯೋಗದಲ್ಲಿ ಮಹಾಸತ್ಸಂಗ ಸಮಾವೇಶ ಕಾರ್ಯಕ್ರಮ ಜೂ, 21 ರಂದು ಅದ್ದೂರಿಯಾಗಿ ಜರುಗಿಲಿದೆ ಎಂದು ಜಿಲ್ಲಾ ಉಪಾಧ್ಯಕ್ಷ ಉಮೇಶ ಸಿದ್ದರಡ್ಡಿ ತಿಳಿಸಿದರು.
ಇಲ್ಲಿನ ಚೌಡಯ್ಯ ನಗರದ ನಮಸ್ಕಾರ ಮಂಡಳಿ ಹಾಗೂ ವಿಶ್ವ ಹಿಂದು ಪರಿಷತ್ ಸಭಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 21 ರಂದು ಮುಂಜಾನೆ 10 ಗಂಟೆಗೆ ವಿವಿಧ ಮಠಾಧೀಶರು ಹಾಗೂ ಸಂತರ ಆಗಮನ ಹುಲ್ಯಾಳ ಗುರುದೇವಾಶ್ರಮದಲ್ಲಿ ನಡೆಯುವದು. 10-30 ಕ್ಕೆ ಪೂಜ್ಯರು ಹಾಗೂ ಸಂತರರಿಂದ ಚಿಂತನ ಗೋಷ್ಠಿ ಮತ್ತು 2ನೇ ಗೋಷ್ಠಿ ನಂತರ ಪೂಜ್ಯರ ಪ್ರಸಾದ. ಮಧ್ಯಾಹ್ನ 2 ಗಂಟೆಗೆ ಓಲೇಮಠದಿಂದ ಬಸವ ಭವನದವರಗೆ ಶ್ರೀಗಳ ಪಾದಯಾತ್ರೆ ಹಾಗೂ 1008 ಕುಂಬ ಹೊತ್ತ ಮಹಿಳೆಯರಿಂದ ಮತ್ತು ಸಕಲ ವಾದ್ಯಮೇಳದೊಂದಿಗೆ ನಗರದ ಪ್ರಮುಖ ರಸ್ತೆಯ ಮೂಲಕ ಶೋಭಾಯಾತ್ರೆ ಜರುಗುವದು. ಸಾಯಂಕಾಲ 4 ಗಂಟೆಗೆ ಬಸವ ಭವನದಲ್ಲಿ ಸಾರ್ವಜನಿಕರ ಸಭೆ ಮತ್ತು ಶ್ರೀಗಳ ಆಶೀರ್ವಚನ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ 150 ಕ್ಕೂ ಅಧಿಕ ಜನ ವಿವಿಧ ಮಠಾಧೀಶರು, ಸಂತರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಲಗೂರ ಧರಿದೇವರ ಮಠದ ಲಕ್ಷ್ಮಣ ಮುತ್ಯಾ, ಹಣಮಂತ ಗಿರಡ್ಡಿ ಮಾತನಾಡಿದರು. ಇದೆ ಸಂದರ್ಭದಲ್ಲಿ ಸಾಗರ ಜಂಬಗಿ, ಗೀರೀಶ ಕೆಂಗನಾಳ, ಕರೆಪ್ಪ ಜಂಬಗಿ ಸೇರಿದಂತೆ ವಿಶ್ವ ಹಿಂದು ಪರಿಷತನ ಪದಾಧಿಕಾರಿಗಳು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 