ನಾಳೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನ ಪುರಾಣ ಪ್ರಾರಂಭ
Mahasadvi Hemareddy Mallamma Purana starts tomorrow
ದೇವರಹಿಪ್ಪರಗಿ 03: ತಾಲೂಕಿನ ಡೋಣಿ ಕಡಕೋಳ ಗ್ರಾಮದ ಗುರು ಮಡಿವಾಳೇಶ್ವರ ಗದ್ದುಗೆ ಹಿರೇಮಠದಲ್ಲಿ ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರ ಅಮೃತ ಹಸ್ತದಿಂದ ಅಡಿಗಲ್ಲು ಸಮಾರಂಭ, ಲಿಂ, ಹಾನಗಲ್ ಕುಮಾರ ಶಿವಯೋಗಿಗಳ 158ನೇ ಜಯಂತೋತ್ಸವದ ಪ್ರಯುಕ್ತ ದಿ.5. ರಿಂದ 24ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ದೇವರಹಿಪ್ಪರಗಿ ಪಟ್ಟಣದ ಜಡಿಮಠದ ಜಡೆ ಸಿದ್ದೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನ ಮಹಾಪುರಾಣ ಪ್ರತಿದಿನ ಸಾಯಂಕಾಲ 7ಗೆ ಜರುಗಲಿದೆ ಎಂದು ಗುರು ಮಠದ ಮಡಿವಾಳೇಶ್ವರ ಶ್ರೀಗಳು ತಿಳಿಸಿದ್ದಾರೆ.
ರವಿವಾರ ಸುದ್ದಿಗಾರರ ಜೊತೆ ಮಾತನಾಡಿದ ಶ್ರೀಗಳು ಮೇ. 20ರಂದು ಬುಧವಾರ ಸಾಯಂಕಾಲ 7 ಗಂಟೆಗೆ ಯುವಜನೋತ್ಸವ, ದಿ.21 ಗುರುವಾರ ಸಾಯಂಕಾಲ 7 ಗಂಟೆಗೆ ರೈತರ ಗೋಷ್ಠಿ, ದಿ.22 ಶುಕ್ರವಾರ ಸಾಯಂಕಾಲ 7 ಗಂಟೆಗೆ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಹಿಳಾ ಗೋಷ್ಠಿ, ದಿ.23 ಶನಿವಾರ ಸಾಯಂಕಾಲ 7 ಗಂಟೆಗೆ ತುಲಾಭಾರ, ದಿ.24 ರವಿವಾರ ಬೆಳಿಗ್ಗೆ 9 ಗಂಟೆಗೆ ಜಗದ್ಗುರು ಪಂಚಾಚಾರ್ಯ ಧ್ವಜಾರೋಹಣ, ಅಂದು ಬೆಳಗ್ಗೆ 7 ಗಂಟೆಗೆ ಬಸವೇಶ್ವರ ಕರ್ತೃ ಗದ್ದುಗೆ ಮಹಾ ರುದ್ರಾಭಿಷೇಕ ಬಿಲ್ವಾರ್ಚನೆ ಹಾಗೂ ಸಾಯಂಕಾಲ 4 ಗಂಟೆಗೆ ಧರ್ಮಸಭೆಯಲ್ಲಿ ಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ,
ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಲಿಂಗದಳ್ಳಿ ಚಬನೂರ, ಬಿಜೆಪಿ ಮುಖಂಡರುಗಳಾದ ಬಸನಗೌಡ ಪಾಟೀಲ ಯಡಿಯಾಪೂರ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಭಾಗವಹಿಸುವರು, ಅಂದು ಶ್ರೀಶೈಲ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವದ ಪ್ರಯುಕ್ತ ಆರತಿ, ಕುಂಭ, ಕಳಸ, ಕನ್ನಡಿ, ಡೊಳ್ಳು ಬಾಜಿ ಹಾಗೂ ಭಜಂತ್ರಿ ಯೊಂದಿಗೆ ಅದ್ದೂರಿಯಾಗಿ ದೇವಸ್ಥಾನ ತಲುಪುವುದು ಅಂದು ಗ್ರಾಮಸ್ಥರು, ಶ್ರೀಮಠದ ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಗದ್ಗುರುಗಳ ಆಶೀರ್ವಾದ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 