ಮಹರ್ಶಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುವುದು: ಭಜಂತ್ರಿ

ಲೋಕದರ್ಶನ ವರದಿ

ಬೈಲಹೊಂಗಲ:  ಮಹರ್ಶಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.

    ಪಟ್ಟಣದ ತಹಶೀಲ್ದಾರ ಕಚೇರಿ ಸಭಾ ಭವನದಲ್ಲಿ ಮಹಷರ್ಿ ವಾಲ್ಮೀಕಿ ಜಯಂತಿ ಆಚರಣೆ ಕುರಿತು ಗುರುವಾರ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ವರ್ಷ ಪದ್ಧತಿಯಂತೆ ಈ ವರ್ಷವು ಅ.13ರಂದು ತಾಲ್ಲೂಕು ಆಡಳಿತ, ವಿವಿಧ ಇಲಾಖೆಗಳ ಆಶ್ರಯದಲ್ಲಿ ಮಹಷರ್ಿ ವಾಲ್ಮೀಕಿ ಜಯಂತಿ ಆಚರಿಸಲಾಗುವುದು. ಸಮಾಜ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಯಂತಿ ಆಚರಣೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

   ಸಮಾಜ ಕಲ್ಯಾಣಾಧಿಕಾರಿ ಮಹೇಶ ಉಣ್ಣಿ ಮಾತನಾಡಿ, ಅ.13ರಂದು ತಹಶೀಲ್ದಾರ ಕಚೇರಿ ಸಭಾ ಭವನದಿಂದ ಶಿವಬಸವ ಕಲ್ಯಾಣ ಮಂಟಪದವರಿಗೆ ಸಕಲ ವಾದ್ಯಮೇಳದೊಂದಿಗೆ ಮಹಷರ್ಿ ವಾಲ್ಮೀಕಿ ಭಾವಚಿತ್ರ ಭವ್ಯ ಮೆರವಣಿಗೆ, ಸಮಾರಂಭ ನಡೆಯಲಿದೆ. ವಾಲ್ಮೀಕಿ ಸಮಾಜದ ಬಡ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ, ಸಮುದಾಯ ಭವನ ಉದ್ಘಾಟನೆ ನೆರವೇರಲಿದೆ ಎಂದರು.

ಇದೇ ವೇಳೆ ಸಮಾಜದ ವಿವಿಧ ಮುಖಂಡರು ಮಾತನಾಡಿದರು

    ತಹಶೀಲ್ದಾರ ಡಾ.ಡಿ.ಎಚ್.ಹೂಗಾರ, ಸಿಡಿಪಿಓ ಮಹಾಂತೇಶ ಭಜಂತ್ರಿ, ಹಿಂದುಳಿದ ತಾಲೂಕಾ ವಿಸ್ತಿಣರ್ಾಧಿಕಾರಿ ಶಾಂತಾ ಮರಿಗೌಡರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನೀಲವ್ವ ಫಕ್ಕೀರನವರ, ಜಿಲ್ಲಾ ಪಂಚಾಯ್ತಿ ಸದಸ್ಯ ನಿಂಗಪ್ಪ ಅರಕೇರಿ ವೇದಿಕೆಯಲ್ಲಿ ಇದ್ದರು. 

    ಮನೋಜ ಕೇಳಗೇರಿ, ಮಹಾಂತೇಶ ಯರಗಣವಿ, ಶಂಕರ ಕೊರಿಕೊಪ್ಪ, ಜಗದೀಶ ಅಣ್ಣಿಗೇರಿ, ಸಂಗಮೇಶ ರೊಳ್ಳಿ, ವಿಠ್ಠಲ ನ್ಯಾಮಗೌಡರ, ಮಂಜು ಮಕರವಳ್ಳಿ, ಪಾಂಡು ಲಮಾಣಿ, ಕನಕಪ್ಪ ದೊಡಮನಿ, ಅಶೋಕ ಮಾದರ, ಕಲಾವತಿ ದೇಶನೂರ, ವಿದ್ಯಾ ದೊಡಮನಿ, ಎಸ್.ಎಚ್.ಪಠಾಣ, ರೂಪಾ ಜ್ಯೋತಿ, ಫಕ್ಕೀರಪ್ಪ ದೇವಲಾಪೂರ, ಸಿದ್ದಲಿಂಗ ಸಿದ್ದಯ್ಯನವರ, ಪ್ರಭಾಕರ ಭಜಂತ್ರಿ ಹಾಗೂ ಅನೇಕರು ಇದ್ದರು.