ಕೋವಿಡ್ -19 ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ 98,000 ಸನಿಹದಲ್ಲಿ

ನವದೆಹಲಿ, ಜೂನ್ 12,ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳಂತೆ ಪ್ರಕಾರ ಮಹಾರಾಷ್ಟ್ರದಲ್ಲಿ ಕರೋನ ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆ 97,648 ಕ್ಕೆ ಏರಿದೆ.ರಾಜ್ಯದಲ್ಲಿ ಇದುವರೆಗೆ ಮಾರಕ ಸೋಂಕಿಗೆ 3, 590 ಮಂದಿ ಬಲಿಯಾಗಿದ್ದಾರೆ.  ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 3,607 ಹೊಸ ಪ್ರಕರಣಗಳು ವರದಿಯಾಗಿದ್ದು, 152 ಜನರು ಈ ಅವಧಿಯಲ್ಲಿ ಸೋಂಕಿಗೆ  ಬಲಿಯಾಗಿದ್ದಾರೆ.

ಇದೇ ಅವಧಿಯಲ್ಲಿ  ರಾಜ್ಯದಲ್ಲಿ 1561 ಜನರು ಚೇತರಿಸಿಕೊಂಡಿದ್ದು, ಇದುವರೆಗೆ ಗುಣಮುಖರಾದವರ ಸಂಖ್ಯೆ 46,078ರಷ್ಟಿದೆ.ಮಾರಣಾಂತಿಕ ವೈರಸ್ ಪೀಡಿತ ರಾಜ್ಯಗಳ ಪೈಕಿ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 38,716 ತಲುಪಿದ್ದು ಮತ್ತು 349 ಜನರು ಸಾವನ್ನಪ್ಪಿದ್ದಾರೆ. 20,705 ಜನರನ್ನು ಚಿಕಿತ್ಸೆಯ ನಂತರ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ.ಸೋಂಕಿತರ ಸಂಖ್ಯೆಯಲ್ಲಿ ದೆಹಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ, 34,687 ಜನರು ಸೋಂಕಿಗೆ ಒಳಗಾಗಿದ್ದು, ಸೋಂಕಿನಿಂದ 1,085 ಮಂದಿ ಸಾವನ್ನಪ್ಪಿದ್ದಾರೆ.  12,731 ರೋಗಿಗಳನ್ನು ಚಿಕಿತ್ಸೆಯ ನಂತರ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ.