ಮಹಾರಾಷ್ಟ್ರ ಬಿಕ್ಕಟ್ಟು, ಸುಪ್ರೀಂ ತೀಪು ನಾಳೆಗೆ, ರಾಜ್ಯಪಾಲರ ಆಹ್ವಾನ ಪ್ರತಿ ಸಲ್ಲಿಸಲು ಸೂಚನೆ

ನವದೆಹಲಿ, ನ 24:  ಮಹಾರಾಷ್ಟ್ರದಲ್ಲಿ    ಸರಕಾರ ರಚನೆಗೆ ಅವಕಾಶ ಮಾಡಿಕೊಟ್ಟ ರಾಜ್ಯಪಾಲರ  ಕ್ರಮ ಪ್ರಶ್ನಿಸಿ,    ಸದನದಲ್ಲಿ  ಬಹುಮತ   ಪರೀಕ್ಷೆಯನ್ನು ಭಾನುವಾರವೇ  ನಡೆಸಬೇಕು  ಕೋರಿ  ಎನ್ ಸಿಪಿ  ಮತ್ತು ಶಿವಸೇನಾ  ಕಾಂಗ್ರೆಸ್ ಪಕ್ಷಗಳು ಸಲಿಸಿದ್ದ  ಮನವಿ ವಿಚಾರಣೆ ನಡೆಸಿದ    ಸುಪ್ರೀಂಕೋಟರ್್ ತೀರ್ಪನ್ನೂ ನಾಳೆ  ಪ್ರಕಟಿಸುವುದಾಗಿ,   ವಿಚಾರಣೆ   ಮುಂದೂಡಿದೆ.   

ಇಂದು ಸುಪ್ರೀಂಕೋಟರ್್  ನ್ಯಾಯಮೂತರ್ಿ ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿದ್ದು,  ತೀಮರ್ಾನವನ್ನು ನಾಳೆ ಪ್ರಕಟ ಮಾಡುವುದಾಗಿ ಹೇಳಿದೆ.  

ಶಿವಸೇನೆ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಹಾಗೂ   ಬಿಜೆಪಿ ಪರವಾಗಿ ಮುಕುಲ್ ರೋಹಟಗಿ  ವಾದ ಮಾಡಿದ್ದಾರೆ.  

ರಾಷ್ಟ್ರಪತಿ ಆಡಳಿತ ತೆರವುಗೊಳಿಸಿ ಬಿಜೆಪಿ ಸಕರ್ಾರ ರಚನೆಗೆ ಅವಕಾಶ ಮಾಡಿಕೊಟ್ಟ ಮಹಾರಾಷ್ಟ್ರ ರಾಜ್ಯಪಾಲರ ನಡೆ ಪ್ರಶ್ನಿಸಿ ಮೂರು ಪಕ್ಷಗಳು ಸಲ್ಲಿಸಿದ್ದ  ಅಜರ್ಿ ವಿಚಾರಣೆ ಸುಪ್ರೀಂಕೋಟ್ರ್ನಲ್ಲಿ ನಡೆಯಿತು.  

ನ್ಯಾಯಮೂತರ್ಿ ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ವಕೀಲರ ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋಟರ್್ ಅಂತಿಮ ತೀಪು ನೀಡುವುದಾಗಿ ಹೇಳಿದೆ.  

ರಾಜ್ಯಪಾಲರು ಸರಕಾರ ರಚನೆಗೆ ನೀಡಿದ ಆಹ್ವಾನ ಮತ್ತು  ರಾಷ್ಟ್ರಪತಿ ಆದೇಶ ಹಿಂಪಡೆದ ಪ್ರತಿ ಹಾಗೂ ಫಡ್ನವಿಸ್ ಅವರಿಗೆ ಇರುವ ಶಾಸಕರ  ಬೆಂಬಲ ಪತ್ರಗಳ ಎಲ್ಲ  ವಿವರ ಸಲ್ಲಿಸುವಂತೆಯೂ  ಕೇಂದ್ರಕ್ಕೆ ನ್ಯಾಯಾಲಯ ಸೂಚನೆ ನೀಡಿದೆ.   

ಶಿವಸೇನೆ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಾಡಿ ರಾಜ್ಯಪಾಲರು  ಬಿಜೆಪಿಗೆ 48 ಗಂಟೆಗಳ  ಅವಕಾಶ ನೀಡಿದ್ದರು. ಎನ್ಸಿಪಿ ಮತ್ತು ಶಿವಸೇನೆಗೆ ಹೆಚ್ಚಿನ ಸಮಯಾವಕಾಶ ನೀಡಲಿಲ್ಲ.  

ಮಹಾರಾಷ್ಟ್ರದಲ್ಲಿ ಚುನಾವಣಾಪೂರ್ವ ಮೈತ್ರಿ ಇದ್ದದೇ ಬೇರೆ. ಈಗ ಪರಿಸ್ಥಿತಿ ಬದಲಾಗಿದೆ. ಚುನಾವಣೋತ್ತರ ಮೈತ್ರಿಯಾಗಿದೆ. ಶಿವಸೇನೆ-ಕಾಂಗ್ರೆಸ್ ಮತ್ತು ಎನ್ಸಿಪಿ ಮೈತ್ರಿ ಮಾಡಿಕೊಂಡಿವೆ ಎಂದರು. 

ನಿನ್ನೆ ಬೆಳಗ್ಗೆ 5.47ಕ್ಕೆ ದಿಢೀರನೇ ರಾಷ್ಟ್ರಪತಿ ಆವಳಿತ  ಹಿಂಪಡೆಯಲಾಗಿದೆ  ಕೇಂದ್ರ ಸಚಿವ ಸಂಪುಟ ಸಭೆ ನಡೆಸದೆಯೂ ಇದನ್ನು  ವಾಪಸ್ ಪಡೆಯಲಾಗಿದೆ ಆದರೆ ಇಂತಹ ತುತರ್ು ಅಗತ್ಯ ಏನಿತ್ತು  ತರಾತುರಿಯಲ್ಲಿ ಸಿಎಂ, ಡಿಸಿಎಂ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲರು ದುರುದ್ದೇಶಪೂರಿತವಾಗಿ ನಡೆದುಕೊಂಡಿದ್ದಾರೆ. ಪಕ್ಷದ ಸೂಚನೆಯಂತೆ  ನಡೆದುಕೊಂಡು, ಸಂವಿಧಾನದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದರು.   

ಇಂದೇ ವಿಶ್ವಾಸಮತ ಯಾಚನೆ ಮಾಡುವಂತೆ ಸೂಚನೆ  ಕೊಡಬೇಕು  ಅವರ ಬಳಿ ಶಾಸಕರ ಬಲ ಇದ್ದರೆ ಸಾಬೀತು ಪಡಿಸಲಿ. ರಾಜ್ಯಪಾಲರ ಆಹ್ವಾನವೂ ಅಧಿಕೃತವಾಗಿ ಬಂದಿಲ್ಲ  ಸಿಎಂ-ಡಿಸಿಎಂ ಪ್ರಮಾಣ ವಚನಕ್ಕೆ ನಡೆದ ಪ್ರಕ್ರಿಯೆಗಳೂ  ಸಹ  ಅನುಮಾನಾಸ್ಪದವಾಗಿವೆ ಹೇಗೆ ನಡೆಯಿತು ಎಂಬುದೆ  ಗೊತ್ತಿಲ್ಲ. ಯಾವೂದಕ್ಕೂ ಅಧಿಕೃತ  ದಾಖಲೆಗಳಿಲ್ಲ ಎಂದು ಕಪಿಲ್ ಸಿಬಲ್ ಎಳೆ ಎಳೆಯಾಗಿ ವಾದ ಮಂಡಿಸಿದರು.  

ಇನ್ನು ಬಿಜೆಪಿ ಪರ ವಕೀಲ ಮುಕುಲ್ ರೋಹಟಗಿ ವಾದ ಮಾಡಿ,   ಪ್ರಕರಣವನ್ನು ಸುಪ್ರೀಂ ವಿಚಾರಣೆಗೆ ಕೈಗೆತ್ತಿಕೊಳ್ಳುವುದೆ  ಸಮಂಜಸವಲ್ಲ ಕಾರಣ ರಾಜ್ಯಪಾಲರು  ಸಂವಿಧಾನಬದ್ಧವಾಗಿ ಕೆಲಸ ಮಾಡಿದ್ದಾರೆ ಮೇಲಾಗಿ  ರಾಜ್ಯಪಾಲ ಕ್ರಮ ನ್ಯಾಯಾಂಗದ ಪುನರ್ ವಿಮಶರ್ೆಗೂ   ಮೀರಿದ್ದು ಎಂದರು. 14 ದಿನಗಳ ಅವಕಾಶ  ಕೊಟ್ಟರು ಎನ್ ಸಿಪಿ ಕಾಂಗ್ರೆಸ್  ಶಿವಸೇನೆ  ಸರಕಾರ ರಚನೆಗೆ  ಏಕೆ ಮುಂದೆ ಬರಲಿಲ್ಲ ಎಂದು  ಅವರು ಪ್ರಶ್ನೆ  ಮಾಡಿದರು.