ಮಹಾರಾಣಾ ಶಿಕ್ಷಣ ಸಂಸ್ಥೆಯಲ್ಲಿ ದಿ: ಕೆ.ಎಚ್.ಪಾಟೀಲರ 101 ನೇ ಜಯಂತಿ ಆಚರಣೆ
Maharana Educational Institution: K.H. Patil's 101st birth anniversary celebration
ಲೋಕದರ್ಶನ ವರದಿ
ಬೆಟಗೇರಿ 16: ಇಂದು ನಗರದ ಮಹಾರಾಣಾ ಪ್ರತಾಪಸಿಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಮ್ಮ ಶಿಕ್ಷಣ ಸಂಸ್ಥೆಯ ಸ್ಪೂರ್ತಿಗಳು ಹಾಗೂ ಬೆನ್ನೆಲುಬಾದ ದಿ: ಕೆ.ಎಚ್.ಪಾಟೀಲರ 101 ನೇ ಜಯಂತಿಯನ್ನು ಏರಿ್ಡಸಲಾಗಿತ್ತು. ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಗಣೇಶಸಿಂಗ ಬ್ಯಾಳಿ ಇವರು ಆಗಮಿಸಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಾರೆ್ಪಣ ಮಾಡಿ ಮಾತನಾಡುತ್ತ ದಿ: ಕೆ.ಎಚ್.ಪಾಟೀಲರಲ್ಲಿದ್ದ, ಛಲ,ಧೈರ್ಯ, ಸಾಮಾಜಿಕ ಕಾಳಜಿ, ಬಡವರಲ್ಲಿದ್ದ ಪ್ರೀತಿ ಇವೆಲ್ಲವು ಅವಿಸ್ಮರಣೀಯ. ಧೀಮಂತ ನಾಯಕರಾದ ಇವರು ಹುಲಕೋಟಿ ಹುಲಿ ಎಂದೇ ಪ್ರಸಿದ್ಧರಾಗಿದ್ದರು. ಇವರು ನಮ್ಮ ಶಿಕ್ಷಣ ಸಂಸ್ಥೆಯ ಬೆನ್ನೆಲುಬಾಗಿದ್ದರು. ಇವರು ಸಹಕಾರಿ ಕ್ಷೇತ್ರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ರಾಜಕೀಯ ಕ್ಷೇತ್ರಕ್ಕೆ ದಾರಿ ದೀಪವಾಗಿದೆ. ಇವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರು ಎಲ್ಲರ ಮನಸ್ಸಿನಲ್ಲಿ ಇದ್ದಾರೆಂದು ನುಡಿದರು. ಈ ಸಂದರ್ಭದಲ್ಲಿ ಪ್ರಭಾರ ಮುಖ್ಯಾಧ್ಯಾಪಕರಾದ ಎಚ್.ಎಸ್.ಬ್ಯಾಳಿ, ಸಮಸ್ತ ಸಿಬ್ಬಂದಿ ಹಾಗೂ ವಿದ್ಯಾರ್ಥಿವೃಂದ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 