ಮಹಾಂತೇಶ ಅರ್ಬನ್ ಕೋ-ಆಫ್-ಕ್ರೇಡಿಟ್ ಸೊಸೈಟಿ ಶಾಖೆ ಉದ್ಘಾಟನೆ
Mahantesh Urban Co-op-Credit Society branch inaugurated
ಯರಗಟ್ಟಿ, 13 : ಸಮೀಪದ ಕಟಕೋಳ ಹಾಗೂ ಯರಗಟ್ಟಿ ಪಟ್ಟಣದಲ್ಲಿ ಆರಂಭಗೊಂಡ ನೂತನ ದಿ. ಮಹಾಂತೇಶ ಅರ್ಬನ್ ಕೋ ಆಫ್ ಕ್ರೇಡಿಟ್ ಸೊಸೈಟಿ ಶಾಖೆಗಳನ್ನು ಮಹಾಬಳೇಶ್ವರ ಹಾದಿಮನಿ ಉದ್ಘಾಟಿಸಿದರು.ಸಂಘದ ಅಧ್ಯಕ್ಷರಾದ ಶಶಿಧರ ಮಾಳವಾಡ ಇವರ ಅಧ್ಯಕ್ಷತೆಯಲ್ಲಿ ಹಾಗೂ ಕಟಕೋಳ ಹಾಗು ಯರಗಟ್ಟಿ ಶಾಖೆಗಳ ಸಲಹಾ ಸಮಿತಿಯ ಅಧ್ಯಕ್ಷರಾದ ಮಹಾದೇವ ಆತಾರ ಮತ್ತು ಪರುತಗೌಡ ಪಾಟೀಲ ಅವರ ಮುಂದಾಳತ್ವದಲ್ಲಿ ಮಹಾಲಕ್ಷ್ಮೀ ಪೂಜೆಯೊಂದಿಗೆ ನೇರವೇರಿಸವಾಯಿತು.
ಸಂಸ್ಥೆಯ ಪ್ರಧಾನ ಕಛೇರಿ ಪ್ರಸ್ತುತ ವರ್ಷಕ್ಕೆ 12 ಕೋಟಿಗು ಅಧಿಕ ಠೇವು ಸಂಗ್ರಹ ಮಾಡಿದ್ದು 13 ಕೋಟಿಗೂ ಅಧಿಕ ಸಾಲ ನೀಡಲಾಗಿದೆ. ಮತ್ತು 12 ಕೋಟಿಗೂ ಅಧಿಕ ಸಾಲ ವಸೂಲಿ ಮಾಡಲಾಗಿದೆ. ರೂ. 22.58 ಲಕ್ಷ ಲಾಭದಲ್ಲಿದ್ದು 2500ಕ್ಕೂ ಹೆಚ್ಚಿನ ಶೇರುದಾರರನ್ನು ಹೊಂದಿರುವ ಸಂಘದ ದುಡಿಯುವ ಬಂಡವಾಳ ರೂ. 15 ಕೋಟಿಗಿಂತ ಹೆಚ್ಚಾಗಿದೆ. ಸಂಘವು ಪಗ್ರತಿಯತ್ತ ಮುನ್ನಡೆಯುವಲ್ಲಿ ಆಡಳಿತ ಮಂಡಳಿಯವರು ವಿಶೇಷವಾಗಿ ಪ್ರಯತ್ನಿಸುತ್ತಿದ್ದು ಮತ್ತು ಸಂಘದ ಸದಸ್ಯರಿಗೆ ಹಣಕಾಸು ಬೇಡಿಕೆಯನ್ನು ಸಕಾದಲ್ಲಿ ದೊರೆಯುವಂತೆ ಆಸಕ್ತಿ ವಹಿಸಿದ್ದಾರೆಂದು ತಿಳಿಸಿದರು.
ಈ ಸಹಕಾರಿ ಸಂಘಗಳು ಉತ್ತಮ ಬೆಳವಣಿಗೆ ಹೊಂದಬೇಕಾದರೆ ಸಾಲಗಾರರು ಸರಿಯಾದ ಸಮಯಕ್ಕೆ ತಾವು ಪಡೆದ ಸಾಲವನ್ನು ಮರುಪಾವತಿ ಮಾಡಬೇಕು . ಸಾಲಗಾರರಷ್ಟೆ ಠೇವುದಾರರು ಸಂಘಕ್ಕೆ ಪ್ರಮುಖವಾಗಿ ಬೇಕು ಮತ್ತು ಸಿಬ್ಬಂದಿ ಹಾಗು ಆಡಳಿತಮಂಡಳಿ ಸದಸ್ಯರು ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಉತ್ತಮ ಬೆಳವಣಿಗೆ ಹೊಂದಲು ಸಾಧ್ಯ ಎಂದು ತಿಳಿಸಿದರು.ಈ ವೇಳೆ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಬಸವರಾಜ ಯಾದವಾಡ, ನಿರ್ದೇಶಕರಾದ ಮಹಾದೇವಪ್ಪ ಕಲಹಾಳ, ಶಶಿಕಾಂತ ಧಡೇದ, ಶಿವಾನಂದ ಅಂಗಡಿ, ಜಗದೀಶ ಲಾಹೋಟಿ, ಗೋವಿಂದ ಮಡ್ಡಿ, ಶಂಕರ ಸೂಳಿಬಾವಿ,
ಶರಣಪ್ಪ ಸಕ್ತಿ, ಅರುಣಕುಮಾರ ಶಿದ್ದಿಬಾವಿ, ಬಾಲಮುಕುಂದ ಮಹಾಲಿಂಗಪೂರಕರ, ಮನೋಹರ ಹೊನ್ನುಂಗರ ಪುಷ್ಪಾ ಇಟ್ಟಂಗಿಹಾಳ, ಮಧು ಜಂಬಗಿ, ದೀಪಕ ಅರಿಬೆಂಚಿ, ಕೃಷ್ಣ ಮೇದಾರ, ಪುಂಡಲೀಕ ಚನ್ನದಾಸರ ಹಾಗೂ ಕಟಕೋಳ ಶಾಖೆಯ ಸಲಹಾ ಸಮಿತಿಯ ಸದಸ್ಯರಾದ ಸಂಗಮೆಶ ಶೆಟ್ಟಿಸದಾವರ್ತಿ, ಸಂಗಮೇಶ ಅಡ್ಡಣಗಿ, ಬಾಳನಗೌಡ ಹೊಸಮನಿ, ನಾಗೇಂದ್ರ ತೋಡಕರ, ಬಸವರಾಜ ದಿವಟಗಿ, ವೇಂಕಟೇಶ ಜಾಧವ, ಶಂಕರಗೌಡ ಪಾಟೀಲ, ಮಹಾಂತೇಶ ತುಪ್ಪದ, ಗಜಾನನ ಪಾರಶೆಟ್ಟಿ ಮತ್ತು ಯರಗಟ್ಟಿ ಶಾಖೆಯ ಸಲಹಾ ಸಮಿತಿಯ ಸದಸ್ಯರಾದ ಶಿವಣ್ಣ ಹಂಜಿ, ಈರ್ಪ ಬೆಣ್ಣಿ, ಧರ್ಮಣ್ಣ ಪಡಸಲಗಿ, ದುಂಡಪ್ಪ ದೇವರಡ್ಡಿ, ಭಿಮಪ್ಪ ತಡಸಲೂರ, ಉಮೆಶ ಮಾಗುಂಡನವರ, ಮಹಾಂತೇಶ ಜಕಾತಿ, ಮೋಹನ ಹಾದಿಮನಿ ಹಾಜರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 