ನೇಸರಗಿ 06: ಶುಕ್ರವಾರದಂದು ಬಿಜೆಪಿ ಬೆಂಬಲಿತ ಮದನಬಾವಿ ಗ್ರಾಮದ ಚಾಂದಬಿ ನದಾಫ ಇವರು ಮುರಕೀಭಾವಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಪ್ರಯುಕ್ತ ಮಾಜಿ ಶಾಸಕ, ಬಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಅವರ ಗ್ರಹ ಕಚೇರಿಯಲ್ಲಿ ಬೆಟ್ಟಿಯಾಗಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಾಂತೇಶ ದೊಡ್ಡಗೌಡರ ಮಾತನಾಡಿ ಪಂಚಾಯತ ಮಟ್ಟದಲ್ಲಿ ಸಾರ್ವಜನಿಕರ ಹೆಚ್ಚಿನ ಕೆಲಸ ಕಾರ್ಯ ಮಾಡಿ ಗ್ರಾಮದ ಸರ್ವಾಂಗೀನ ಅಭಿವೃದ್ಧಿಗೆ ಶ್ರಮಿಸಲು ಹೇಳಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಗ್ರಾ ಪಂ. ಸದಸ್ಯರಾದ ರಾಮನಗೌಡ ದೊಡ್ಡಗೌಡರ, ಯಲ್ಲನಗೌಡ ದೊಡ್ಡಗೌಡರ, ಶಿವಾನಂದ ಪಾಟೀಲ, ಆಡಿವಪ್ಪ ಮೋದಗಿ, ಗಂಗಪ್ಪ ಸಂಗಮ್ಮನವರ, ಕಸ್ತೂರಿ ಕುರಬರ, ಅನಸೂಯಾ ತಳವಾರ, ಪಿಡಿಓ ಶಕುಂತಲಾ ಮರಕುಂಬಿ, ಗಣ್ಯರಾದ ಈರನಗೌಡ ದೊಡಗೌಡರ, ಪ್ರಕಾಶ ಹೊಸಮನಿ, ಬಾಬುಗೌಡ ದೊಡ್ಡಗೌಡರ, ರುದ್ರ್ಪ ಕೊಳದೂರ ಶಿವಪ್ಪ ಗುಜನಾಳ, ನಭಿ ನದಾಫ್, ಅಣ್ಣಯ್ಯ ನಂಜರಗಿ, ಕೆಂಚಪ್ಪ ಕುರಬರ, ಗಂಗಪ್ಪ , ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಮುರಕೀಬಾವಿ, ಮದನಬಾವಿ ಗ್ರಾಮಗಳ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.