ಛಾಯಾಚಿತ್ರ ಸ್ಪರ್ಧೆ ಮಹಲ್ ಮುಂದಿನ ಗಾರೆ ಚಿತ್ರಕ್ಕೆ ಪ್ರಥಮ ಬಹುಮಾನ

ಕೊಪ್ಪಳ 05: ಕೊಪ್ಪಳ ಜಿಲ್ಲೆ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿ ನಡೆಯಲಿರುವ ``ಆನೆಗೊಂದಿ ಉತ್ಸವ-2020''ರ ಅಂಗವಾಗಿ ಇಂದು (ಜ.5) ಆನೆಗೊಂದಿಯ ಸಕರ್ಾರಿ ಪ್ರೌಢ ಶಾಲೆಯಲ್ಲಿ ಜರುಗಿದ ಛಾಯಾಚಿತ್ರ ಸ್ಪಧರ್ೆಯಲ್ಲಿ ಆನೆಗೊಂದಿಯ ಮಹಲ್ ಮುಂದಿನ ಗಾರೆ ಚಿತ್ರಕ್ಕೆ ಪ್ರಥಮ ಬಹುಮಾನ ದೊರೆತಿದೆ.

ಈ ಛಾಯಾ ಚಿತ್ರ ಸ್ಪರ್ಧೆಯಲ್ಲಿ ಒಟ್ಟು 59 ಚಿತ್ರಗಳು ನೋಂದಾಯಿಸಿಕೊಂಡಿದ್ದವು.  ಎಲ್ಲಾ 59 ಚಿತ್ರಗಳ ಪೈಕಿ 17 ಮೆಚ್ಚುಗೆ ಪಡೆದ ಚಿತ್ರಗಳಾಗಿದ್ದರೆ, ಅಂತಿಮವಾಗಿ 3 ಚಿತ್ರಗಳು ಆಯ್ಕೆಯಾದವು.  ಮೊದಲ ಬಹುಮಾನಕ್ಕೆ ಹನಮಂತಪ್ಪ ಬಂಡಿಹಲರ್ಾಪುರ ಅವರ ``ಮಹಲ್ ಮುಂದಿನ ಗಾರೆ'' ಛಾಯಾಚಿತ್ರ ಆಯ್ಕೆಯಾಗಿದೆ.  ದ್ವಿತೀಯ ಬಹುಮಾನ ಶ್ರೀನಿವಾಸ ಎಣ್ಣೆ ಅವರ ``ಮೊಡಗಳ ಅಡಿಯಲ್ಲಿ ಅಂಜನಾದ್ರಿ ಬೆಟ್ಟ'' ಛಾಯಾಚಿತ್ರ ಮತ್ತು ಮೂರನೆ ಬಹುಮಾನ ಇಂದ್ರಕುಮಾರ ಬಿ ದಸ್ತೆನವರ ಅವರ ``ಚಿಂತಾಮಣಿ ಮಠದ ಮುಂದಿನ ನೀರಿನ ಛಾಯಾಚಿತ್ರ' ಪಡೆದಿದೆ.  ಛಾಯಾಚಿತ್ರ ಸ್ಪರ್ಧೆಯ ನಿಣರ್ಾಯಕರಾಗಿ ಹೊಸಪೇಟೆಯ ಶಿವಶಂಕರ ಬಣಗಾರ ಹಾಗೂ ರಾಯಚೂರಿನ ಮಲ್ಲಿಕಾರ್ಜುನ ಸ್ವಾಮಿ ಅವರು ಭಾಗವಹಿಸಿದ್ದು, ಇವರ ಮೂಲಕವೆ ಛಾಯಾಚಿತ್ರಗಳ ಆಯ್ಕೆ ನಡೆಯಿತು.

ಈ ಛಾಯಾಚಿತ್ರ ಸ್ಪರ್ಧಾ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವಿಶ್ವನಾಥ ರೆಡ್ಡಿ, ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ನೇಹಾ ಜೈನ್, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಜಿ.ಸುರೇಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಹಲವು ಗಣ್ಯರು ಭೇಟಿ ನೀಡಿ, ಛಾಯಾಚಿತ್ರಗಳ ವೀಕ್ಷಣೆ ಮಡಿದರು.