ವಿಜ್ರಂಭಣೆಯ ಖಾಸ್ಗತ ಶಿವಯೋಗಿಗಳ ಮಹಾ ರಥೋತ್ಸವ
Maha Rathotsava of Khasgat Shiva Yog Shree
ತಾಳಿಕೋಟಿ 09: ಪಟ್ಟಣದ ಐತಿಹಾಸಿಕ ಖಾಸ್ಗತೇಶ್ವರ ಮಹಾಮಠದ ಖಾಸ್ಗತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಮಹಾ ರಥೋತ್ಸವ ಲಕ್ಷಾಂತರ ಭಕ್ತ ಸಮೂಹದ ಮಧ್ಯೆ ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ಜರುಗಿತು.
ಜಾತ್ರಾ ಮಹಾ ರಥೋತ್ಸವದ ಅಂಗವಾಗಿ ಬೆಳಗ್ಗೆ 5 ಘಂಟೆಯಿಂದ ಖಾಸ್ಗತೇಶ್ವರ ಮಠದ ಕರ್ತೃ ಗದ್ದುಗೆಗೆ ಮಹಾಭಿಷೇಕ, ಪುಷ್ಪಾರ್ಚನೆ ಹಾಗೂ ನಾನಾ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಹಾಗೂ ಮಹಾ ಮಂಗಳಾರತಿ ಕಾರ್ಯಕ್ರಮವನ್ನು ಮಠದ ವಿಶ್ವನಾಥ ವಿರಕ್ತಮಠ ಶಾಸ್ತ್ರೋಕ್ತವಾಗಿ ನೆರವೇರಿಸಿದರು.
ಮಹಾ ರಥೋತ್ಸವದ ಪೂರ್ವ ಮುಂಜಾನೆ ಎಂಟು ಗಂಟೆಗೆ ಐತಿಹಾಸಿಕ ಪಾರಂಪರಿಕ ಹಿನ್ನೆಲೆ ಹೊಂದಿದ ಖಾಸ್ಗತ ಮಹಾಶಿವಯೋಗಿಗಳ ಗಂಗಸ್ಥಳ ಹಾಗೂ ಲಿಂಗೈಕ್ಯ ಶ್ರೀಗಳ ಮೂರ್ತಿ ಹಾಗೂ ಭಾವಚಿತ್ರದ ಭವ್ಯ ಮೆರವಣಿಗೆ ಕಾರ್ಯಕ್ರಮ ಮಠದ ಸಿದ್ದಲಿಂಗ ದೇವರ ದಿವ್ಯ ಸಾನಿಧ್ಯದಲ್ಲಿ ಜರುಗಿತು.
ಮೆರುಗು ತಂದ ಆನೆ ಅಂಬಾರಿ ಕಾರ್ಯಕ್ರಮ: ಆನೆ ಅಂಬಾರಿ ಮೆರವಣಿಗೆ ಉದ್ದಕ್ಕೂ ವಿವಿಧ ವಾದ್ಯ ಮೇಳಗಳು, ಕರಡಿಮಜಲು, ಗೊಂಬೆ ಕುಣಿತ, ಸನಾದಿಯನಾದ, ಹನುಮಾನ ವೇಷದಾರಿ ಕುಣಿತ ಸಹಿತ ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ಮೆರವಣಿಗೆಯಲ್ಲಿ ಅನೇಕ ಜನರು ಮನೆ ಹಾಗೂ ಅಂಗಡಿಗಳ ಮೇಲಿಂದ ಖಾಸ್ಗತರ ಬೆಳ್ಳಿ ಮೂರ್ತಿ ಹಾಗೂ ವಿರಕ್ತ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಅನ್ನಪ್ರಸಾದ ವ್ಯವಸ್ಥೆ: ಮಹಾ ರಥೋತ್ಸವ ಹಾಗೂ ಮೆರವಣಿಗೆಯಲ್ಲಿ ಪಟ್ಟಣದ ರಾಜವಾಡೆ ಕಿಂಗ್ಸ್ ಗೆಳೆಯರ ಬಳಗ, ಅನುಗ್ರಹ ಕಣ್ಣಿನ ಆಸ್ಪತ್ರೆ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಅಭಿಮಾನಿ ಬಳಗ, ಭಗತ್ ಸಿಂಗ್ ಗೆಳೆಯರ ಬಳಗ, ನಮ್ಮ ಗೆಳೆಯರ ಬಳಗ, ಸಜ್ಜನ ಸಹೃದಯ ಗೆಳೆಯರ ಬಳಗ, ಶ್ರೀಮಲ್ಲಿಕಾರ್ಜುನ ಯುವಕ ಹಾಗೂ ಹಲವಾರು ಯುವಕರ ಸಂಘದವರು ದಾರಿ ಉದ್ದಕ್ಕೂ ಪೂರಿ ಭಾಜಿ, ಮಾದಲಿ ಪಲಾವ್, ರೈಸ್ ಬಾತ್, ಶೀರಾ, ಕೇಸರಿಬಾತ್, ಬಜ್ಜಿ ಚಟ್ನಿ ಹೀಗೆ ಹತ್ತು ಹಲವು ಬಗೆಯ ಖಾದ್ಯ ಪದಾರ್ಥಗಳನ್ನು ಸಿದ್ಧಪಡಿಸಿ ಭಕ್ತಿ ಭಾವದಿಂದ ಪ್ರಸಾದ ಸೇವೆಯನ್ನು ಮಾಡಿದರು. ಮಹಾ ರಥೋತ್ಸವದಲ್ಲಿ ಮುಂಬೈ ಪುಣೆ ಹೈದರಾಬಾದ್ ಹುಬ್ಬಳ್ಳಿ ಧಾರವಾಡ ಬೆಂಗಳೂರು ಕಲಬುರಗಿ ಸೇರಿದಂತೆ ವಿವಿಧ ನಗರಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಸದ್ಭಕ್ತ ಸಮೂಹ ಭಾಗವಹಿಸಿತ್ತು.
ಮೆರವಣಿಗೆಯಲ್ಲಿ ಖಾಸ್ಗತೇಶ್ವರ ಮಠದ ಉಸ್ತುವಾರಿ ಮುರುಗೇಶ ವಿರಕ್ತಮಠ, ವಿಶ್ವನಾಥ ವಿರಕ್ತಮಠ ಹಾಗೂ ಹಲವಾರು ಗಣ್ಯಮಾನ್ಯರು ಪಾಲ್ಗೊಂಡಿದ್ದರು. ಪೊಲೀಸ್ ಬಂದೋಬಸ್ತ್: ಬೃಹತ್ ಮೆರವಣಿಗೆ ಹಾಗೂ ಮಹಾರಥೋತ್ಸವದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್‌ಐ ರಾಮನಗೌಡ ಸಂಕನಾಳ, ಆರ್.ಎಸ್.ಭಂಗಿ ತಮ್ಮ ಸಿಬ್ಬಂದಿಯೊಂದಿಗೆ ಸೂಕ್ತ ಬಂದೋಬಸ್ತ್ ಏರಿ್ಡಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 