ಸಿದ್ದರಾಮೇಶ್ವರ ಗಜಾನನ ಯುವಕ ಸಂಘದ ವತಿಯಿಂದ 30 ನೇ ವಾರ್ಡಿನಲ್ಲಿ ಮಹಾ ಅನ್ನಸಂತರೆ​‍್ಣ

ಸಿದ್ದರಾಮೇಶ್ವರ ಗಜಾನನ ಯುವಕ ಸಂಘದ ವತಿಯಿಂದ 30 ನೇ ವಾರ್ಡಿನಲ್ಲಿ ಮಹಾ ಅನ್ನಸಂತರೆ​‍್ಣ Maha Annasantharana organized by Siddaramaeshwar Gajanana Yuvaka Sangha in Ward 30

ಸಿದ್ದರಾಮೇಶ್ವರ ಗಜಾನನ ಯುವಕ ಸಂಘದ ವತಿಯಿಂದ 30 ನೇ ವಾರ್ಡಿನಲ್ಲಿ ಮಹಾ ಅನ್ನಸಂತರೆ​‍್ಣ 

ಗದಗ 04: ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 30 ನೇ ವಾರ್ಡಿನಲ್ಲಿರುವ ಸಿದ್ದರಾಮೇಶ್ವರ ಗಜಾನನ ಯುವಕ ಸಂಘದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವು ಗಜಾನನೋತ್ಸವದ ಅಂಗವಾಗಿ ಮಹಾ ಅನ್ನಸಂತರೆ​‍್ಣ ಕಾರ್ಯಕ್ರಮವನ್ನು ಇದೇ ದಿನಾಂಕ 03/09/2025 ರಂದು ಹಮ್ಮಿಕೊಳ್ಳಲಾಗಿತ್ತು. 

ಈ ಒಂದು ವೈವಿಧ್ಯಮಯ ಕಾರ್ಯಕ್ರಮದ ಉದ್ಘಾಟನೆಯನ್ನು ಸಿದ್ದರಾಮೇಶ್ವರ ಗಜಾನನ ಯುವಕ ಸಂಘದ ಅಧ್ಯಕ್ಷರಾದ ಜಗದೀಶ ಕಟ್ಟಿಮನಿ ಹಾಗೂ ಸಮಿತಿಯ ಸದಸ್ಯರಾದ  ದೇವು ಕಟಗಿ, ಈರಣ್ಣ ಗಾಲೆಪ್ಪ ಸೊರಟೂರ್, ಮಾನ್ವಿ ರವಿ ನಾಗರೆಡ್ಡಿ ಹನಮಂತಪ್ಪ ನಾಗಪ್ಪ ಹಾಗೂ ಸಮಸ್ತ ಬಡಾವಣೆಯ ನಾಗರಿಕರ ಉಪಸ್ಥಿತಿಯಲ್ಲಿ ಯುವ ಮುಖಂಡರಾದ ಆಂಜನೇಯ ಕಟಗಿ ಯವರು ಮಹಾ ಅನ್ನ ಸಂತರೆ​‍್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಈ ಒಂದು ಧಾರ್ಮಿಕ  ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಬಿ ಬಿ ಅಸೂಟಿ,  ಗದಗ ಬೆಟಗೇರಿ ನಗರಸಭೆ ಸದಸ್ಯರಾದ ಶ್ರೀಮತಿ ಪದ್ಮಾವತಿ ಕಟಗಿ, ಬರಕತ್ ಅಲಿ ಮುಲ್ಲಾ, ಮಾಜೀ ನಗರಸಭಾ ಸದಸ್ಯರಾದ ಗಿರಿಧರ್ ಸಿಂಗ್ ಬ್ಯಾಳಿ, ಮಾಜೀ ನಾಮ ನಿರ್ದೇಶಿತ ಸದಸ್ಯರಾದ ಚಾಂದಸಾಬ್ ಕೊಟ್ಟೂರ್,ಕಾಂಗ್ರೇಸ್ ಮುಖಂಡರಾದ ಶಾಂತಣ್ಣ ಮುಳವಾಡ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ, ಗಣೇಶ ಕಟಗಿ, ಹಾಗೂ ಸಮಸ್ತ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.