ಅಧ್ಯಕ್ಷರಾಗಿ ಮಡಿವಾಳಪ್ಪ ಉಪಾಧ್ಯಕ್ಷರಾಗಿ ಶಂಕ್ರಪ್ಪ ಅವಿರೋಧ ಆಯ್ಕೆ

ಅಧ್ಯಕ್ಷರಾಗಿ ಮಡಿವಾಳಪ್ಪ ಉಪಾಧ್ಯಕ್ಷರಾಗಿ ಶಂಕ್ರಪ್ಪ ಅವಿರೋಧ ಆಯ್ಕೆ  Madivalappa elected unopposed as President, Shankarappa as Vice President

ತಾಳಿಕೋಟೆ, ತಾಲೂಕಿನ ಅಸ್ಕಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ,ದ ಮುಂದಿನ 5 ವರ್ಷದ ಅವದಿಗಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಕುರಿತು ಮಂಗಳವಾರರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಡಿವಾಳಪ್ಪ ಚೌದ್ರಿ, ಉಪಾಧ್ಯಕ್ಷರಾಗಿ ಶಂಕ್ರಪ್ಪ ಕೆಳಗಿನಮನಿ ಅವರು ಅವಿರೋಧವಾಗಿ ಆಯ್ಕೆಗೊಂಡರು.  

ಒಟ್ಟು 12 ಜನ ಸದಸ್ಯರ ಭಲ ಹೊಂದಿರುವ ಅಸ್ಕಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಡಿವಾಳಪ್ಪ ಚೌದ್ರಿ, ಉಪಾಧ್ಯಕ್ಷ ಸ್ಥಾನಕ್ಕೆ ಶಂಕ್ರ​‍್ಪ ಕೆಳಗಿನಮನಿ ಅವರು ನಾಮಪತ್ರ ಸಲ್ಲಿಸಿದ್ದರು. ಈ ಎರಡೂ ಸ್ಥಾನಗಳಿಗೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷರಾಗಿ ಮಡಿವಾಳಪ್ಪ ಚೌದ್ರಿ, ಉಪಾಧ್ಯಕ್ಷರಾಗಿ ಶಂಕ್ರ​‍್ಪ ಕೆಳಗಿನಮನಿ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಚುನಾವಣಾಧಿಕಾರಿ ಸಹಕಾರ ಅಭಿವೃದ್ದಿ ಅಧಿಕಾರಿ ಲೀಲಾವತಿಗೌಡ ಅವರು ಘೋಷಿಸಿದರು.  

ಈ ಅವಿರೋಧ ಆಯ್ಕೆ ಪ್ರಕ್ರೀಯೇಯಲ್ಲಿ ಸದಸ್ಯರುಗಳಾದ ಹಣಮಗೌಡ ಬಿರಾದಾರ, ಮಲ್ಲನಗೌಡ ಕರಿಗೌಡರ, ವಿಶ್ವನಾಥರಡ್ಡಿ ಬಿರಾದಾರ, ಶಿವರುದ್ರ​‍್ಪ ಮಗದಾಳ, ಬಸವರಾಜ ಬ್ಯಾಕೊಡ, ಹೇಮಾ ಯಾಳಗಿ, ನಾಗಮ್ಮ ಬಿರಾದಾರ, ಈರಗಂಟೆಪ್ಪ ದೊಡಮನಿ, ಸಿದ್ರಾಮಪ್ಪ ವಡಗೇರಿ, ರುದ್ರಗೌಡ ಬಿರಾದಾರ, ಅವರು ಉಪಸ್ಥಿತರಿದ್ದು ಅವಿರೋಧ ಆಯ್ಕೆಗೆ ಬೆಂಬಲ ಸೂಚಿಸಿದರು.  

ಅವಿರೋಧ ಆಯ್ಕೆ ಪ್ರಕ್ರೀಯೇ ನಂತರ ನಡೆದ ಸನ್ಮಾನ ಸಮಾರಂಭದಲ್ಲಿ ಗ್ರಾಮದ ಮುಖಂಡರಾದ ಪ್ರಭುಗೌಡ ಬಿರಾದಾರ ಅವರು ಮಾತನಾಡಿ ರೈತರ ಅನುಕೂಲ ಕೋಸ್ಕರ ಹುಟ್ಟುಕೊಂಡಿರುವ ಪಿಕೆಪಿಎಸ್ ಬ್ಯಾಂಕಿನಲ್ಲಿ ಕೇವಲ ಸಾಲ ಸೌಲಭ್ಯಗಳು ಅಷ್ಟೇ ಅಲ್ಲದೇ ರೈತರಿಗೆ ಉಪಯುಕ್ತವಾದ ಸಲಕರಣೆಗಳನ್ನು ಹಾಗೂ ಬೀಜ ಗೊಬ್ಬರ ಅಲ್ಲದೇ ಎಲ್ಲ ರೀತಿಯಿಂದಲೂ ರೈತರಿಗೆ ಸಹಾಯ ಹಸ್ತ ಕಲ್ಪಿಸಬಹುದಾಗಿದೆ ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಸರ್ವ ಸದಸ್ಯರ ಒಮ್ಮತದೊಂದಿಗೆ ಬ್ಯಾಂಕಿನ ಶ್ರೇಯೋಭಿವೃದ್ದಿಯ ಜೊತೆಗೆ ರೈತರ ಏಳಿಗೆಯ ಹಿತದೃಷ್ಠಿ ಇಟ್ಟುಕೊಂಡು ತಾಲೂಕಿನಲ್ಲಿಯೇ ಮಾದರಿಯ ಬ್ಯಾಂಕನ್ನಾಗಿ ಪರಿವರ್ತನೆ ಮಾಡುವಲ್ಲಿ ಮುಂದಾಗಬೇಕೆಂದರು.  

ಚುನಾವಣಾ ಸಹಾಯಕರಾಗಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಎಂ.ಎಂ.ತಳವಾರ ಅವರು ಕಾರ್ಯನಿರ್ವಹಿಸಿದರು.  

ನಂತರ ನೂತನ ಅಧ್ಯಕ್ಷ-ಉಪಾಧ್ಯಕ್ಷರು ತಮ್ಮ ಬೆಂಬಲಿಗರೊಂದಿಗೆ ಗ್ರಾಮದಲ್ಲಿ ವಿಜಯೋತ್ಸವ ಆಚರಿಸಿದರು.  

ಈ ಸಮಯದಲ್ಲಿ ಮುಖಂಡರುಗಳಾದ ಆರಿ​‍್ಸ.ಪಾಟೀಲ, ಗುರನಗೌಡ ಬಿರಾದಾರ, ಶರಣಗೌಡ ಕೊಣ್ಯಾಳ, ಶಂಕರಗೌಡ ನಾಗರಡ್ಡಿ, ಮಲ್ಲನಗೌಡ ಹಳಿಮನಿ, ಸೋಮನಗೌಡ ಬಿರಾದಾರ, ಬಸನಗೌಡ ಚೌದ್ರಿ, ಶಿವನಗೌಡ ಬಿರಾದಾರ(ಅಸ್ಕಿ), ಎಂ.ಪಿ.ಪಾಟೀಲ(ನೀರಲಗಿ), ವಿಜಯರಡ್ಡಿ ಟಕ್ಕಳಕಿ, ಕಿರಣಗೌಡ ಹಳಿಮನಿ, ದೇವೆಂದ್ರ ಹೊಸಗೌಡರ, ಗುರಲಿಂಗ ನೀರಲಗಿ, ಶಿವಶಂಕರ ಹಂಡಿ, ಈರಗಂಟೆಪ್ಪ ಬ್ಯಾಕೋಡ, ಬಸನಗೌಡ ಕೊಣ್ಯಾಳ, ಮಲ್ಲು ಹಿಟ್ನಳ್ಳಿ, ಬಸವರಾಜ ಹೊಸಮನಿ, ಅಪ್ಪು ಬಿರಾದಾರ, ಬಾಲಪ್ಪಗೌಡ ಬಿರಾದಾರ, ಒಳಗೊಂಡು ಅಸ್ಕಿ, ಜಲಪೂರ, ನೀರಲಗಿ ಗ್ರಾಮದ ಮುಖಂಡರುಗಳು ಇದ್ದರು.