ಮದಿಹಾಳ ಸಿದ್ಧಾರೂಢಮಠದ ಜಾತ್ರಾಮಹೋತ್ಸವ
Madihal Siddharudhamath's fair
ಧಾರವಾಡ 24 : ನಗರದ ಮದಿಹಾಳ ಸಿದ್ಧಾರೂಢ ಕಾಲೋನಿಯ ಸಿದ್ಧಾರೂಢಮಠದ 2ನೆಯ ವರ್ಷದ ವಾರ್ಷಿಕ ಜಾತ್ರಾಮಹೋತ್ಸವ ಜ.30 ರಂದು (ಶುಕ್ರವಾರ) ಜರುಗುವುದು. ಜಾತ್ರೆಯ ದಿನ ಪ್ರಾತಃಕಾಲದಲ್ಲಿ ಶ್ರೀಸಿದ್ಧಾರೂಢರ ಹಾಗೂ ಗುರುನಾಥಾರೂಢರ ವಿಗ್ರಹಗಳಿಗೆ ಏಕಾದಶ ಮಹಾರುದ್ರಾಭಿಷೇಕ ನಂತರ ವಿಶೇಷ ಹೋಮ ನಡೆಯಲಿದೆ.
ನೂತನ ರಥ ನಿರ್ಮಾಣ : ಆಧ್ಯಾತ್ಮವಾದಿ, ಅನುಭಾವಿ ನಿವೃತ್ತ ಅಧ್ಯಾಪಕಿ ದಾಕ್ಷಾಯಣಮ್ಮ ಹೂಗಾರ ಅವರು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಿರುವ ನೂತನ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ವಿಜಯನಗರ ಜಿಲ್ಲೆ ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಶುಕ್ರವಾರ ಸಂಜೆ 4-30 ಗಂಟೆಗೆ ರಥೋತ್ಸವವನ್ನು ಉದ್ಘಾಟಿಸುವರು.
ಆಧ್ಯಾತ್ಮ ಪ್ರವಚನ : ರಥೋತ್ಸವದ ನಂತರ ಸಂಜೆ 7 ಗಂಟೆಗೆ ಮಠದ ಆವರಣದಲ್ಲಿ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಧರ್ಮಸಮಾರಂಭದಲ್ಲಿ ಹಂಪಸಾಗರ ನವಲಿಹಿರೇಮಠದ ಶ್ರೀಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಆಧ್ಯಾತ್ಮ ಪ್ರವಚನ ನೀಡುವರು. ವಿಜಯಪುರದ ಹಿರಿಯ ಅನುಭಾವಿ ಸಿದ್ಧಪ್ಪ ಬಿದರಿ ಮಾತನಾಡುವರು. ಜಾತ್ರೆಯ ಅಂಗವಾಗಿ ದಾಸೋಹ ಸೇವೆಯಲ್ಲಿ ಅನ್ನಸಂತರೆ್ಣ ನಡೆಯುವುದು.
ಜ.31 ರಂದು ಮುಂಜಾನೆ 8-30 ಗಂಟೆಗೆ ಶ್ರೀಸಿದ್ಧಾರೂಢರ ಪಲ್ಲಕ್ಕಿ ಉತ್ಸವ, ಸಂಜೆ 5 ಗಂಟೆಗೆ ಮಹಿಳೆಯರ ಸಾಂಸ್ಕೃತಿಕ ಕಾರ್ಯಕ್ರಮಗಳು, 7 ಗಂಟೆಗೆ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರದ ಕಲಾತಂಡದಿಂದ ಜಾನಪದ ಸಂಜೆ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 