ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನ

ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನ  Madhya Ratna Award

ಗುರ್ಲಾಪುರ 03:  ಇಮಾಮ್ ಸಾಬ್ ಸಿದ್ಧಿ ಮೇಳ ಕಲಾವಿದರ ಸಂಘ ಮೂಡಲಗಿ ವತಿಯಿಂದ ಪತ್ರಕರ್ತ ಶಿವಾನಂದ ಹಿರೇಮಠ ಹಾಗೂ ಶಿವಾನಂದ ಮರಾಠೆ ಇವರಿಗೆ ಮಾಧ್ಯಮ ರತ್ನ ಪ್ರಶಸ್ತಿ ನೀಡಿ ಶನಿವಾರರಂದು ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಗೌರವಿಸಲಾಯಿತು.  

ಶಿವಾನಂದ ಹಿರೇಮಠ ಸಾನಿಧ್ಯ ವಹಿಸಿ ಮತ್ತು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಈ ಪ್ರಶಸ್ತಿಯಿಂದ ನಮಗೆ ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿದರು. ರಾಮಪ್ಪ ನೇಮಗೌಡರ, ರೇವಪ್ಪ ಸತ್ತಿಗೇರಿ, ರಾಮಪ್ಪ ಹಳ್ಳೂರ, ಮಹದೇವ ರಂಗಾಪುರ, ಈಶ್ವರ ಮುಗಳಖೋಡ, ಪತ್ರ​‍್ಪ ಕೌಜಲಗಿ, ಚುಟುಕುಸಾಬ ಮಂಟೂರ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು. ನಿರೂಪಣೆ ವಂದನಾರೆ​‍್ಣ ಶಿವಾನಂದ ಮರಾಠೆ ನೆರವೇರಿಸಿದರು.