ಕಟ್ನಿ, ಮಧ್ಯಪ್ರದೇಶ, ನ 5: ಮಧ್ಯಪ್ರದೇಶದ ಕಟ್ನಿ-ಜಬಾಲ್ ಪುರ ವಲಯದಲ್ಲಿ ರೈಲ್ವೆ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ರೈಲು ದುರಂತವನ್ನು ಕೊನೆ ಕ್ಷಣದಲ್ಲಿ ತಪ್ಪಿಹೋಗಿದೆ. ಜಬಾಲ್ ಪುರ-ರೇವಾ ಪ್ರಯಾಣಿಕರ ರೈಲು ಆ ಮಾರ್ಗದಲ್ಲಿ ಸಾಗುತ್ತಿದ್ದಾಗ, ಏಕಾಏಕಿ ರೈಲು ಮುಂದಕ್ಕೆ ಮುಗ್ಗರಿಸಿದಂತಾದಾಗ ಚಾಲಕ ತುರ್ತು ಬ್ರೇಕ್ ಅಳವಡಿಸಿದ್ದಾರೆ. ನಂತರ, ಸ್ಥಳೀಯ ರೈಲ್ವೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಇಂಜಿನಿಯರ್ ಗಳು ಬಿರುಕುಗೊಂಡ ರೈಲ್ವೆ ಹಳಿಯನ್ನು ದುರಸ್ತಿಗೊಳಿಸಿದ್ದು, ಒಂದು ಗಂಟೆಯ ವಿಳಂಬದ ನಂತರ ರೈಲು ರೇವಾದತ್ತ ಪಯಣ ಬೆಳೆಸಿತು.