‘ನಾನೊಂಥರ’ 7ರಂದು ಧ್ವನಿಸುರುಳಿ ಬಿಡುಗಡೆ

ಬೆಂಗಳೂರು, ಮಾ 05, ತಂದೆ ಮಗನ ಪ್ರೀತಿಯನ್ನು ಸಾರುವುದರ ಜತೆಗೆ ಕುಡುಕನೊಬ್ಬ ಲವ್ವಲ್ಲಿ ಬಿದ್ದಾಗ ಏನಾಗುತ್ತೆ ಎಂಬ ಕಥಾಹಂದರವಿರುವ ‘ನಾನೊಂಥರ’ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೇ 7ರಂದು ಧ್ವನಿಸುರುಳಿ ಬಿಡುಗಡೆಗೊಳಿಸಲು ಚಿತ್ರತಂಡ ಸಿದ್ಧಗೊಂಡಿದೆ  ನಿರ್ಮಾಪಕ ಜಾಕ್ಲಿನ್ ಫ್ರಾನ್ಸೀಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ರಮೇಶ್ ಕಗ್ಗಲ್ ನಿರ್ದೇಶನವಿದೆ  ಮೂಲತಃ ವೈದ್ಯ ರಾದ ತಾರಕ್ ಶೇಖರಪ್ಪ ನಾಯಕ ನಟನಾಗಿದ್ದು, ಇದು ಅವರಿಗೆ ಮೂರನೇ ಸಿನಿಮಾ  ಮದ್ಯಪಾನದ ಅಭ್ಯಾಸ ಮಾಡಿಕೊಂಡಿರೋ ನಾಯಕ ಪ್ರೀತಿಯ ಬಲೆಯಲ್ಲಿ ಸಿಲುಕೋದು ಹೇಗೆ, ಆತ ಒಳ್ಳೆಯವನೋ, ಕೆಟ್ಟವನೋ ಅನ್ನೋದನ್ನ ಚಿತ್ರದಲ್ಲೇ ನೋಡಬೇಕು ‘ನಾನೊಂಥರ’ ಶೀರ್ಷಿಕೆಯೇ ಹೇಳೋ ಹಾಗೆ ವಿಭಿನ್ನವಾಗಿದೆ ಎಂದು ತಾರಕ್ ಹೇಳಿಕೊಂಡರು  ಹಿರಿಯ ನಟ ದೇವರಾಜ್ ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ನಾಯಕನ ಸೋದರನ ಪಾತ್ರದಲ್ಲಿ ನಿರ್ಮಾಪಕರ ಪುತ್ರ ಜಾಯ್ ಸನ್ ಅಭಿನಯಿಸಿದ್ದಾರೆ  ನಾಯಕಿಯಾಗಿ ರಕ್ಷಿಕ ಪಾತ್ರ ಕೂಡ ಉತ್ತಮವಾಗಿದೆ ಎಂದಿರುವ ಚಿತ್ರತಂಡ, ಸದ್ಯದಲ್ಲೇ ಟೀಸರ್ ಹಾಗೂ ಟ್ರೇಲರ್ ಅನ್ನು ಬಿಡುಗಡೆ ಮಾಡಲಿದೆಯಂತೆ.