ಇಂದು ಮಣ್ಣು ಆರೋಗ್ಯ ಕಾಡರ್್ ದಿನ: ಐದು ವರ್ಷ ತುಂಬಿದ ಯೋಜನೆ -ದೇಶಾದ್ಯಂತ ರೈತ ಜಾಗೃತಿ ಕಾರ್ಯಕ್ರಮ

ನವದೆಹಲಿ, ಫೆ, 19  ಮಣ್ಣು ಆರೋಗ್ಯ ಯೋಜನೆಯ ಮಹತ್ವ , ಮೌಲ್ಯ,  ಲಾಭದ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ  ಉದ್ದೇಶದಿಂದ ದೇಶಾದ್ಯಂತ ಇಂದು ಮಣ್ಣು ಆರೋಗ್ಯ ಕಾಡರ್್ ದಿನ ಆಚರಿಸಲಾಗುತ್ತಿದೆ.  ಕೃಷಿ ಇಳುವರಿ ಹೆಚ್ಚಿಸಲು ಮತ್ತು ಕೃಷಿ ಕ್ಷೇತ್ರದ ಬೆಳವಣಿಗೆಗೆ ಮಣ್ಣಿನ ಫಲವತ್ತತೆ ಅತ್ಯಂತ ಪ್ರಮುಖವಾಗಿದ್ದು, ಈ ಹಿನ್ನೆಲೆಯಲ್ಲಿ ರೈತರಿಗೆ ಫಲವತ್ತತೆ ಬಗ್ಗೆ ಅರಿವು ಮೂಡಿಸುವ ಹಲವು ಕಾಯರ್ಾಗಾರಗಳು, ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 2015ರ ಫೆಬ್ರವರಿ 19 ರಂದು ರಾಜಸ್ತಾನದ ಸೂರತ್ಘರ್ನಲ್ಲಿ ಮೊದಲ ಬಾರಿಗೆ ಮಣ್ಣು ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿದ್ದರು. ಈ ಯೋಜನೆಗೆ ಐದು ವರ್ಷ ತುಂಬಿದೆ. ಮಣ್ಣಿನಲ್ಲಿರುವ ಪೌಷ್ಠಿಕಾಂಶ ಕೊರತೆಯನ್ನು ನಿವಾರಿಸುವ ಉದ್ದೇಶದಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ರೈತರಿಗೆ ಮಣ್ಣು ಆರೋಗ್ಯ ಕಾಡರ್್ಗಳನ್ನು ಒದಗಿಸುವ ಯೋಜನೆಯನ್ನು ಉದ್ಘಾಟಿಸಿದ್ದರು.

   ಸುಸ್ಥಿರ ಕೃಷಿಯಿಂದ ಹೆಚ್ಚುವರಿ ಆದಾಯ ಗಳಿಸಬಹುದು ಎಂಬ ಕಾರಣದಿಂದ ಮಣ್ಣಿನ ಸತ್ವ ಪರೀಕ್ಷೆಗೆ ಕೇಂದ್ರ ಸಕರ್ಾರ ಆದ್ಯತೆ ನೀಡಿದೆ.  ಮಣ್ಣಿನಲ್ಲಿ ಸತ್ವ ಇಲ್ಲದಿದ್ದರೆ ಉತ್ತಮ ಇಳುವರಿ  ಪಡೆಯಲು ಸಾಧ್ಯವಿಲ್ಲ ಎಂಬುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ.     ಕೇಂದ್ರದ ಮಹತ್ವಾಕಾಂಕ್ಷಿ ಮಣ್ಣು ಆರೋಗ್ಯ ಪರೀಕ್ಷೆ ಯೋಜನೆಯಿಂದ ಕಳೆದ ಐದು ವರ್ಷಗಳಲ್ಲಿ ಇಳುವರಿ ನಿರಂತರವಾಗಿ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರತಿರೈತರಿಗೂ ಮಣ್ಣಿನ ಆರೋಗ್ಯ ಕಾಡರ್್ ವಿತರಿಸುವ ನಿಟ್ಟಿನಲ್ಲಿ ರಾಜ್ಯ ಸಕರ್ಾರಗಳು ಸಹ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.  ಮಣ್ಣಿನಲ್ಲಿರುವ ಪೌಷ್ಟಿಕತೆ ಕುರಿತಂತೆ ರೈತರಿಗೆ ಸೂಕ್ತ ಮಾಹಿತಿ ನೀಡುತ್ತಿದ್ದು, ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಒದಗಿಸಿ ಉತ್ತಮ ಫಸಲು ತೆಗೆಯಲು ಅನುಕೂಲ ಮಾಡಿಕೊಡಲಾಗುತ್ತಿದೆ.  ಮೊದಲ ಹಂತದಲ್ಲಿ 2015ರಿಂದ 17ರ ಅವಧಿಯಲ್ಲಿ  10ಕೋಟಿ 74 ಲಕ್ಷ ಮಣ್ಣಿನ ಆರೋಗ್ಯ ಕಾಡರ್್ಗಳನ್ನು  ವಿತರಿಸಿದ್ದು,  2017-19ರ ಅವಧಿಯ 2ನೇ ಹಂತದಲ್ಲಿ 11 ಕೋಟಿ  74 ಲಕ್ಷ ಮಣ್ಣಿನ ಕಾಡರ್್ಗಳನ್ನು ವಿತರಣೆ ಮಾಡಲಾಗಿದೆ.  ಈ ಯೋಜನೆಗಾಗಿ  ಕೇಂದ್ರ ಸಕರ್ಾರ 700 ಕೋಟಿ ರೂಪಾಯಿಗೂ ಹೆಚ್ಚು ಹಣ ವೆಚ್ಚ ಮಾಡಲಾಗಿದೆ.