ಹೊಸಕೋಟೆ,ನ 11: ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಸಂಸದ ಬಿ.ಎನ್.ಬಚ್ಚೇ ಗೌಡರು ಒಪ್ಪಿಗೆಪಡೆದುಕೊಂಡ ನಂತರವೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.ಬಿಜೆಪಿ ಸೇರಲು ಅಂದು ಒಪ್ಪಿಗೆ ನೀಡಿದ್ದ ಬಚ್ಚೇಗೌಡರು ಈಗ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಕಿಡಿಕಾರಿದ್ಧಾರೆ.
ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದ ಅವರು,ತಾನು ಪಕ್ಷಕ್ಕೆ ರಾಜೀನಾ ಮೆ ನೀಡುವ ಮುನ್ನ ಸಂಸದ ಬಿ.ಎನ್.ಬಚ್ಚೇಗೌಡ ಒಪ್ಪಿಗೆ ಪಡೆದುಕೊಂಡಿ ದ್ದೇನೆ ಆದರೆ ಈಗ ತದ್ವಿರುದ್ಧವಾಗಿ ಮಾತನಾಡುತ್ತಿ ದ್ದಾರೆ.ಶರತ್ ಬಚ್ಚೇಗೌಡರು ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ.ತನ್ನನ್ನು ಸೋಲಿಸಲು ಒಳ ಸಂಚು ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಬಚ್ಚೇಗೌಡ ಮತ್ತು ಶರತ್ ಹಾಗು ನಾನೂ ಮೂವರು ಸೇರಿಕೊಂಡು ಹೊಸಕೋಟೆ ತಾಲೂಕ ನ್ನುಅಭಿವೃದ್ಧಿ ಪಡಿಸಬೇಕೆಂದು ಒಪ್ಪಂದ ಮಾಡಿಕೊಂಡಿದ್ದೆವು.ಈಗ ಕೊಟ್ಟ ಮಾತನ್ನು ಬಚ್ಚೇಗೌಡ ಹಾಗೂ ಅವರ ಮಗ ತಪ್ಪುದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿ ದರು.
ಇದೇ ವೇಳೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೇಳಿಕೆಯನ್ನು ನಿರಾಕರಿಸಿದ ಸಂಸದ ಬಚ್ಚೇಗೌಡ, ತಮ್ಮ ಒಪ್ಪಿಗೆ ಪಡೆದು ಎಂಟಿಬಿ ನಾಗರಾಜ್ ರಾಜೀನಾಮೆ ನೀಡಿಲ್ಲ.ಎಂಟಿಬಿ ನಾಗರಾಜ್ ಓರ್ವ ಮಹಾನ್ ಸುಳ್ಳುಗಾರ.ಆತನು ರಾಜೀನಾಮೆ ನೀಡುವಾಗ ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿಸಿರಲಿಲ್ಲ.ಆತ ಬೇರೆ ಪಕ್ಷದಲ್ಲಿದ್ದು ಸಚಿವನಾಗಿದ್ದವನು ಆತನು ನಮಗೆ ಹೇಗೆ ಹೇಳುತ್ತಾನೆ ? ನಮ್ಮೊಂದಿಗೆ ಅವರು ಚರ್ಚೆ ಮಾಡಿರುವ ವಿಚಾರ ಸುಳ್ಳು.ನಾವೆಂದಿಗೂ ಅವರೊಂದಿಗೆ ಗುರುತಿಸಿಕೊಂಡಿಲ್ಲ.ಯಡಿಯೂರಪ್ಪ ಜೊತೆ ಚರ್ಚೆ ಮಾಡಿ ರಾಜೀನಾಮೆ ಕೊಟ್ಟಿರಬಹುದು.ಆದರೆ ತನ್ನೊಂದಿಗೆ ಅವರು ಮಾತನಾಡಿಲ್ಲ ಎಂದು ಅವರು ಸ್ಪಷ್ಟಪಡಿ ಸಿದರು.
ಎಂಟಿಬಿ ನಾಗರಾಜ್ ಆರೋಪಿಸಿದಂತೆ ನಾವು ಕಾಂಗ್ರೆಸ್ ಜೊತೆ ಯಾವುದೇ ಒಳ ಒಪ್ಪಂದ ಮಾಡಿಕೊಂಡಿಲ್ಲ. ನಮಗೂ ಭೈರತಿ ಸುರೇಶ್ ಅವರಿಗೂ ಯಾವುದೇ ಸಂಬಂಧವಿಲ್ಲ.ಇದೂ ವರೆಗೆ ಅವರ ನ್ನು ನಾನಾಗಲೀ ಅಥವಾ ತಮ್ಮ ಮಗನಾಗಲೀ ಮಾತನಾಡಿಸಿಲ್ಲ ಎನ್ನುವ ಮೂಲಕ ಎಂಟಿಬಿ ನಾಗರಾಜ್ ವಿರುದ್ಧ ತಮ್ಮ ಪುತ್ರ ಶರತ್ ಬಚ್ಚೇಗೌಡ ಚುನಾವಣೆಯಲ್ಲಿ ಸೆಣಸಾಡಲು ಸಜ್ಜಾಗಿದ್ದೇವೆ ಎಂದು ಸಂದೇಶ ನೀಡಿದರು.