ಸಂಸದರಿಂದ ರಸ್ತೆ ಕಾಮಗಾರಿಗೆ ಚಾಲನೆ
MP launches road development work
ಯಮಕನಮರಡಿ 30: ಹತ್ತರಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಇಂದಿರಾನಗರ ಗ್ರಾಮದಲ್ಲಿ ಮಂಗಳವಾರ ದಿ 28 ರಂದು ಲೋಕೋಪಯೋಗಿ ಇಲಾಖೆ ಲೆಕ್ಕ ಶಿರ್ಷಿಕೆ 50:54 ಜಿಲ್ಲಾ ಮತ್ತು ಇತರ ರಸ್ತೆಗಳ ಸುಧಾರಣೆ ಯೋಜನೆ ಅಡಿಯಲ್ಲಿ ಮಂಜೂರಾದ 4 ಕೋಟಿ ರೂ.ಗಳ ವೆಚ್ಚದಲ್ಲಿ ರಾ.ಹೆ 4 ರಿಂದ ಇಂದಿರಾನಗರ ಹಾಗೂ ರಾ.ಹೆ 78 ರ 400 ನಾಗನೂರ ಕೆ.ಎಂ ವರೆಗೆ ಕೊಡುವ ರಸ್ತೆ ಕೀ. ಮೀ 0.00 ರಿಂದ 4.00 ವರೆಗೆ ಖಡೀಕರಣ ಹಾಗೂ ಡಾಂಬರೀಕರಣ 1 ಸಿ.ಡಿ ನಿರ್ಮಾಣ ಕಾಮಗಾರಿಗೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಾಲನೆ ನೀಡಿದರು.
150 ಲಕ್ಷ ರೂಗಳ ವೆಚ್ಚದಲ್ಲಿ ಹಳೆ ವಂತಮುರಿ ಕೂಡುವ ಯಮಕನಮರಡಿ ದಾದಬಾನಹಟ್ಟಿ ಇಂದಿರಾನಗರದಿಂದ ತೋರಣಿ ಮಹಾರಾಷ್ಟ್ರ ಗಡಿಯವರಿಗೆ ರಸ್ತೆ ಕಿಮೀ 4.06 ರಿಂದ 7.07 ರವರೆಗೆ ರಸ್ತೆ ಅಗಲೀಕರಣ ಹಾಗೂ ಸುಧಾರಣೆ ಕಾಮಗಾರಿಗೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಯುವದುರಿನ ರವೀಂದ್ರ ಜಿಂಡ್ರಾಳಿ, ಹತ್ತರಗಿ ಗ್ರಾಮ ಅಧ್ಯಕ್ಷ ಸಮೀರ ಬೇಪಾರಿ, ದಸ್ತಗೀರ ಬಸ್ಸಾಪುರಿ, ಮಾಜಿ ತಾಪಂ ಅಧ್ಯಕ್ಷರು ಬಸವರಾಜ ಕೆಸೂರ, ಹಿರಿಯ ಕಾಂಗ್ರೆಸ್ ಮುಖಂಡರಾದ ಹನುಮಂತ ಗಾಡೀವಡ್ಡರ, ಪಾಂಡು ಗಾಡಿವಡ್ಡರ, ಶ್ರೀಶೈಲ ಸಾರಪುರೆ, ಮಲ್ಲೇಶ ಕಾಂಬಳೆ, ಸಂತೋಷ ನಾಯಕ, ಲಕ್ಷ್ಮಣ ಹೊಳಿದೋಳಿ, ರವಿ ಘಸ್ತಿ, ಗಣಪತಿ ಘಸ್ತಿ, ಲಗಾಮಾ ಜಿಂಡ್ರಾಳಿ, ಮಂಜು ಗೊಂದಳಿ, ಆನಂದ ಹುಕ್ಕೇರಿ, ಲಗಮವ್ವ ಹುಗಾಯಿ, ಮೀನಾಕ್ಷಿ ದೊಳಿ, ಹಾಗೂ ಗ್ರಾಮಸ್ಥರು ಪಿಡಬ್ಲೂಡಿ ಸ.ಕಾ.ನಿ ಅಭಿಯಂತ ಪ್ರವೀನ ಮಾಡ್ಯಾಳ, ಸಹಾಯಕ ಅಭಿಯಂತ ಸಂದೀಪ ಬಿ.ಆರ್, ಪ್ರಥಮ ದರ್ಜೆ ಗುತ್ತಿಗೆದಾರ ಎಸ್ ಬಿ ಸುತ್ತಗಟ್ಟಿ ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 