ಕಾಳಿ ನದಿಯ ಹೊಸ ಬ್ರಿಜ್‌ಗೆ ಸಂಸದ ವಿಶ್ವೇಶ್ವರ ಕಾಗೇರಿ ಭೂಮಿ ಪೂಜೆ
MP Vishweshwar Kageri performs Bhoomi Puja for the new bridge over the Kali River
ಕಾಳಿ ನದಿಯ ಹೊಸ ಬ್ರಿಜ್‌ಗೆ ಸಂಸದ ವಿಶ್ವೇಶ್ವರ ಕಾಗೇರಿ ಭೂಮಿ ಪೂಜೆ
ಕಾರವಾರ 14 : ಕಾಳಿ ನದಿಯ ಹೊಸ ಬ್ರಿಜ್ ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ಅಡಿಗಲ್ಲು ಹಾಕಿ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾಳಿ ನದಿ ಹತ್ತಿರ 122 ಮೀಟರ್ ಉದ್ದದ150 ಕೋಟಿ ವೆಚ್ಚದ ಹೊಸ ಸೇತುವೆ ನಿರ್ಮಾಣ ಆಗಲಿದ್ದು, 40 ಅಡಿ ಅಗಲದ ಆರು ಕಂಬಗಳ ಬ್ರಿಜ್ ನಿರ್ಮಾಣ ಆಗಲಿದೆ ಎಂದರು . ಪೌದ್ದಾರ ಇನಪ್ರಾಸ್ಟ್ರಕ್ಚರ್ ಕಂಪನಿ ಸೇತುವೆ ನಿರ್ಮಾಣ ಮಾಡುತ್ತಾರೆ. ಐ ಆರ್ ಬಿ ಇದರ ನಿರ್ವಹಣೆ ಮೇಲುಸ್ತುವಾರಿ ಹೊಣೆ ಇದೆ ಎಂದರು. 55 ವರ್ಷ ಹಳೆಯದಾದ ಕಾಳಿ ನದಿಯ ಸೇತುವೆ ಕಳೆದ ವರ್ಷ ಅಗಸ್ಟ7 ರಂದು ಕುಸಿದು ಬಿದ್ದಿತ್ತು. ಅದರ ಅವಶೇಷಗಳನ್ನು ಇದೇ ಮೇ ತಿಂಗಳಿನಲ್ಲಿ ತೆಗೆಯಲಾಗಿದೆ.ಈಗ ವೇಗವಾಗಿ ಹೊಸ ಸೇತುವೆಗೆ ಅಡಿಗಲ್ಲು ಹಾಕಿ ಪೂಜೆ ಮಾಡಲಾಗಿದೆ ಎಂದ ಸಂಸದ ಕಾಗೇರಿ , ಮುಂದಿನ ಮೂರು ವರ್ಷಗಳಲ್ಲಿ ಈ ಬ್ರಿಜ್ ನಿರ್ಮಾಣ ಮುಗಿಯಲಿದೆ ಎಂದು ನುಡಿದರು. ಈ ಸೇತುವೆಗೆ ಅನುದಾನ ನೂರಕ್ಕೆ ನೂರರಷ್ಟು ಕೇಂದ್ರ ಸರ್ಕಾರದ್ದು. ಕೇಂದ್ರ ಹೆದ್ದಾರಿ ಸಚಿವರು, ರಾಜ್ಯ ಲೋಕೋಪಯೋಗಿ ಸಚಿವರನ್ನು ಕರೆಯಿಸಿ ಅಧಿಕೃತ ಶಂಕುಸ್ಥಾಪನೆ ಮಾಡುವುದಾಗಿ ಸಂಸದ ಕಾಗೇರಿ ಒತ್ತಿ ಹೇಳಿದರು. ಶರಾವತಿ ನದಿಗೆ ಸಹ ಮತ್ತೊಂದು ಹೊಸ ಸೇತುವೆ ನಿರ್ಮಾಣ ಆಗಲಿದೆ. ಭಟ್ಕಳದ ಮೂಢಭಟ್ಕಳ, ಕಾಯ್ಕಿಣಿ ಹತ್ರ ಎರಡು, ಅಂಕೋಲಾ ದಲ್ಲಿ ಒಂದು ಕಡೆ ಅಂಡರ್ ಪಾಸ್ ನಿರ್ಮಾಣ ಆಗಲಿದೆ.45 ಕೋಟಿ ಹಣ ಮಂಜೂರಾಗಿದೆ ಎಂದು ಸಂಸದ ಕಾಗೇರಿ ನುಡಿದರು. ಕುಮಟಾದಲ್ಲಿ ಎರಡು ಸೇತುವೆ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ. ತಾಂತ್ರಿಕ ಪರೀಕ್ಷೆ ನಡೆದಿವೆ. ಮಾದನಗೇರಿ ಬಳಿ ಚಿಕ್ಕ ಪ್ಲೈಓವರ್, ಅಥವಾ ಅಂಡರ್ ಪಾಸ್ ನಿರ್ಮಾಣ ಸಹ ಆಗಲಿದೆ. ಜಿಲ್ಲಾಡಳಿತ ಎಷ್ಟು ಬೇಗ ಸ್ಥಳವನ್ನು ಐ ಆರ್ ಬಿ ಗೆ ಹಸ್ತಾಂತರ ಮಾಡಿಕೊಡಬೇಕು. ರಾಜ್ಯ ಸರ್ಕಾರ ಸಹಕಾರ ಕೊಡಬೇಕು. ರಾಜ್ಯ ಸರ್ಕಾರ ಭೂಮಿ ಕೊಟ್ಟರೆ ಕೆಲಸ ಬೇಗ ಆಗಲಿದೆ ಎಂದು ಸಂಸದ ಕಾಗೇರಿ ನುಡಿದರು. ಮೂಲಭೂತ ಸೌಕರ್ಯಗಳು ಹೆಚ್ಚಿದರೆ ಪ್ರವಾಸೋದ್ಯಮ ಬೆಳೆಯುತ್ತದೆ. ಆರ್ಥಿಕ ಚಟುವಟಿಕೆ ಹೆಚ್ಚಲಿವೆ ಎಂದರು. ಪೌದ್ದಾರ ಇನ್ಪ್ರಾಸ್ಟಕ್ಚರ್ ನ ವಿಜಯ್ ಮದನಕರ್ ಮಾತನಾಡಿ ಸೇತುವೆ ಸ್ಟೀಲ್ ಸ್ಟ್ರಕ್ಚರ್ ಕಮಾನಿ ನಿಂದ ಕೂಡಿದೆ. ಸೇತುವೆ ಸುಂದರವಾಗಿ ಕಾಣಲಿದೆ ಎಂದರು. ಮಾಜಿ ಶಾಸಕಿ ರೂಪಾಲಿ ನಾಯ್ಕ, ನಗರಸಭೆಯ ಅಧ್ಯಕ್ಷ ರವಿರಾಜ ಅಂಕೋಲೆಕರ್ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 