ಸಂಸದ ಶ್ರೀನಿವಾಸ ಪ್ರಸಾದ್ ಹೇಳಿಕೆ ವೈಯಕ್ತಿಕ ಅಭಿಪ್ರಾಯ; ಜೆ ಸಿ ಮಾಧುಸ್ವಾಮಿ

ಮಂಡ್ಯ, ಆಗಸ್ಟ್ 31:    ಮುಖ್ಯಮಂತ್ರಿ  ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸಕರ್ಾರದಲ್ಲಿ  ಮೂವರು    ಮೂವರು ಉಪ ಮುಖ್ಯಮಂತ್ರಿಗಳ ಹುದ್ದೆ   ಸೃಷ್ಟಿಸಿರುವುದು   ಪಕ್ಷದ  ವರಿಷ್ಠರ ನಿರ್ಧಾರ .   ಬಿಜೆಪಿ  ವರಿಷ್ಠರು  ಎಲ್ಲ  ಅಂಶಗಳನ್ನು  ಪರಿಗಣಿಸಿ ಈ ನಿರ್ಣಯ ಕೈಗೊಂಡಿದ್ದು, ರಾಜ್ಯ ರಾಜಕಾರಣ ಬಗ್ಗೆ  ವರಿಷ್ಠರಿಗೆ  ಹೆಚ್ಚಿನ ತಿಳುವಳಿಕೆಯಿದ್ದು, ನಿರ್ಧಾರ ಸಮಂಜಸವಾಗಿದೆ ಎಂದು  ಕಾನೂನು ಮತ್ತು ಸಂಸದೀಯ ವ್ಯವಹಾರಗಳು  ಹಾಗೂ  ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ. 

ಸುದ್ದಿಗಾರೊಂದಿಗೆ ಮಾತನಾಡಿದ ಸಚಿವರು, ಪಕ್ಷದ ರಾಷ್ಟ್ರೀಯ  ಅಧ್ಯಕ್ಷರೂ ಆಗಿರುವ,    ಕೇಂದ್ರ ಗೃಹ ಸಚಿವ  ಅಮಿತ್ ಶಾ ಅವರ ತಿಳುವಳಿಕೆಯನ್ನು ಯಾರು  ಪ್ರಶ್ನಿಸುವಂತಿಲ್ಲ,  ಅವರ  ತೀಮರ್ಾನ  ಪಕ್ಷಕ್ಕೆ ಒಳಿತಾಗಲಿದೆ   ಎಂಬುದು  ತಮ್ಮ ಅಭಿಮತ. ಎಂದು ಹೇಳಿದರು. 

ಇದೇ ವೇಳೆ ಮೂವರು  ಉಪಮುಖ್ಯಮಂತ್ರಿಗಳ  ನೇಮಕ   ವಿಷಯದಲ್ಲಿ   ರಾಜ್ಯ ಬಿಜೆಪಿ ನಾಯಕರಲ್ಲಿ  ಉಂಟಾಗಿರುವ    ಭಿನ್ನಬಿಪ್ರಾಯ    ಕುರಿತು  ಪ್ರಶ್ನೆಗೆ ಉತ್ತರಿಸಿದ  ಸಚಿವರು,  ಪ್ರತಿಯೊಬ್ಬರಿಗೂ  ತಮಗಿಂತ  ಮೇಲಿನ  ಹುದ್ದೆ  ಅಲಂಕರಿಸಬೇಕು  ಎಂಬ ಆಸೆ  ಸಹಜ, ಪಂಚಾಯ್ತಿ ಸದಸ್ಯನಿಗೆ ಅಧ್ಯಕ್ಷನಾಗಬೇಕು ಎಂದು ಇರುತ್ತದೆ. ಹಾಗೆಯೇ  ವಿಧಾನಸಭಾ ಸದಸ್ಯನಿಗೆ   ಸಚಿವನಾಗಬೇಕು ಆಗಬೇಕು ಎಂಬ ಆಸೆ ಸಹಜ ಎಂದು  ತಿಳಿಸಿದರು. 

 ಉಪ ಮುಖ್ಯಮಂತ್ರಿ ಹುದ್ದೆಗಳ  ಸೃಷ್ಟಿ ಕುರಿತು   ಚಾಮರಾಜನಗರ  ಪಕ್ಷದ  ಸಂಸದ ಶ್ರೀನಿವಾಸ್ ಪ್ರಸಾದ್  ಅವರ ಹೇಳಿಕೆ    ವೈಯಕ್ತಿಕ ಅಭಿಪ್ರಾಯ.  ಒಬ್ಬೊಬ್ಬರ ಅಭಿಪ್ರಾಯಗಳು ಒಂದೊಂದು  ರೀತಿ ಇರುತ್ತವೆ.  ಆದರೆ  ದೆಹಲಿಯಲ್ಲಿರುವ  ವರಿಷ್ಠರು   ನಿರ್ಧಾರವೇ ಅಂತಿಮ  ಅವರು ತೀಮರ್ಾನ  ಕೈಗೊಂಡಾಗ  ನಾವೆಲ್ಲರೂ  ಒಪ್ಪಲೇ ಬೇಕಾಗುತ್ತದೆ ಎಂದರು. 

ಪ್ರವಾಹ ಪೀಡಿತರಿಗೆ ನೆರವು ಕಲ್ಪಿಸಲು    ಸಮಿತಿ  ರಚನೆ ಮಾಡಲಾಗಿದೆ. 32 ಸಾವಿರ ಕೋಟಿ ನಷ್ಟ ಆಗಿದೆ ಎಂದು ಸಮೀಕ್ಷೆ ನಡೆಸಲಾಗಿದೆ.   ಸೆಪ್ಟೆಂಬರ್  7 ರಂದು ನರೇಂದ್ರ ಮೋದಿ ಅವರು  ರಾಜ್ಯಕ್ಕೆ ಬರಲಿದ್ದಾರೆ. ಅಂದು  ರಾಜ್ಯ ಸಕರ್ಾರ  ಈ ಬಗ್ಗೆ ಪ್ರಸ್ತಾಪ ಮಾಡಲಿದೆ   ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.