ಸಂಸದ ರಮೇಶ ಜಿಗಜಿಣಗಿ ಅವರಿಂದ ಕೇಂದ್ರ ಸರ್ಕಾರಕ್ಕೆ 4800 ಲಕ್ಷದ ಪ್ರಸ್ತಾವನೆ
MP Ramesh Jigajinagi proposes Rs 4800 lakh to the Central Government
ಲೋಕದರ್ಶನ ವರದಿ
ವಿಜಯಪುರ 16 : ವಿಜಯಪುರ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ರಾಜ್ಯ ಜಿಲ್ಲೆಯ ರಸ್ತೆಗಳು ಮಳೆಯಿಂದ ಹಾಗೂ ಕಬ್ಬಿನ ವಾಹನಗಳ ಸಂಚಾರದಿಂದ ದುರಸ್ತಿಗೆ ಬಂದಿರುವ ರಸ್ತೆಗಳ ಅಗಲೀಕರಣ ಹಾಗೂ ಮರು ನಿರ್ಮಾಣಕ್ಕಾಗಿ 4800 ಲಕ್ಷದ ಸಿ.ಆರ್.ಐ.ಎಫ್ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರದಲ್ಲಿ ಕಾಮಗಾರಿ ಚಾಲನೆಯ ಪೂಜೆಯನ್ನು ನೆರವೇರಿಸಲಾಗುವುದು ಎಂದು ರಮೇಶ ಜಿಗಜಿಣಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿದ ಅವರು, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಡಿ-ಲಚ್ಯಾಣ-ಪಡನೂರ-ಶಿರಗೂರ-ಗುಬ್ಬೇವಾಡ ರಸ್ತೆ ಕಿ.ಮಿ. 3.00 ರಿಂದ 8.5 ಕಿ.ಮಿ ವರೆಗೆ (ಆಯ್ದ ಭಾಗಗಳಲ್ಲಿ) ಅಂದಾಜು ರೂ. 600.00 ಲಕ್ಷಗಳಲ್ಲಿ ರಸ್ತೆ ಅಗಲೀಕರಣ ಕಾಮಗಾರಿ. - (ರಸ್ತೆಯ ಉದ್ದ 10.00 ಕಿಮಿ), ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಡಂಬಳ-ಕಲಕೇರಿ ಜಿಲ್ಲೆಯ ರಸ್ತೆ ಕಿ.ಮಿ. 8.38 ರಿಂದ 12.65 ಮತ್ತು 17.50 (ಆಯ್ದ ಭಾಗಗಳಲ್ಲಿ) ಮರು ಡಾಂಬರೀಕರಣ ರೂ. 6.00 ಲಕ್ಷಗಳ ಕಾಮಗಾರಿ (ರಸ್ತೆಯ ಉದ್ದ- 10.00 ಕಿ.ಮಿ) ಕಾಮಗಾರಿ, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ರಾಜ್ಯ ಹೆದ್ದಾರಿ-34 ಓರಾದ-ಸದಾಶಿವಗಢ ರಸ್ತೆ 357.00 ರಿಂದ 367.80 ಕಿ.ಮಿ ( ಹಲಗಣಿ ಕೂಡರಸ್ತೆಯಿಂದ ಅರ್ಜುಣಗಿ) (ರಸ್ತೆ ಉದ್ದ-10.8 ಕಿ.ಮಿ) ರೂ. 500.00 ಲಕ್ಷಗಳ ರಸ್ತೆ ಕಾಮಗಾರಿ ಸುಧಾರಣೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 