ಎಂಪಿ-ಕಿಸಾನ್ ಯೋಜನೆ: ನೋಂದಣಿ ಪ್ರಕ್ರಿಯೆ ಚುರುಕಿಗೆ ಡಿಸಿ ಸೂಚನೆ

ಬಾಗಲಕೋಟೆ24: ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಮಂತ್ರಿ ಸಮ್ಮಾನ್ ನಿಧಿ ಯೋಜನೆಯಡಿ ರೈತರ ನೋಂದಣಿ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಎಂಪಿ-ಕಿಸಾನ್ ಯೋಜನೆಯ ನೋಂದಣಿ ಪ್ರಕ್ರಿಯೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜೂನ್ ಅಂತ್ಯಕ್ಕೆ ಈ ಯೋಜನೆಯಡಿ ವ್ಯಾಪ್ತಿಯಲ್ಲಿ ಬರುವ ಎಲ್ಲ ರೈತರಿಂದ ಸ್ವಯಂ ಘೋಷಣೆಯ ಅಜರ್ಿಗಳು ಪಡೆಯುವ ಕೆಲಸವಾಗಬೇಕು.

      ಅದರ ಜೊತೆಗೆ ಬಂದಂತ ಅಜರ್ಿಗಳನ್ನು ಆನ್ಲೈನ್ನಲ್ಲಿ ಎಂಟ್ರಿ ಆಗಬೇಕು. ಪ್ರತಿದಿನ ಕನಿಷ್ಠ 25 ಸಾವಿರ ರೈತರ ನೊಂದಣಿಯಾಗಬೇಕು. 

    ಈ ಕುರಿತು ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ನೋಡಲ್ ಅಧಿಕಾರಿಗಳು ನಿಗಾವಹಿಸಿ ನೊಂದಣಿಗೆ ಕ್ರಮಜರುಗಿಸಲು ತಿಳಿಸಿದರು.

ಈಗಾಗಲೇ ಜಿಲ್ಲೆಯ ಒಟ್ಟು 2,50,009 ರೈತರ ಪೈಕಿ 94334 ಜನ ರೈತರಿಂದ ಸ್ವಯಂ ಘೋಷಣಾ ಅಜರ್ಿ ನಮೂನೆಗಳು ಬಂದಿದ್ದು, ಈ ಪೈಕಿ 52395 ಆನ್ಲೈನ್ನಲ್ಲಿ ಜನರೇಟ ಆಗಿದ್ದು, 23731 ಆನ್ಲೈನ್ ಜನರೇಟಗೆ ಬಾಕಿ ಉಳಿದಿವೆ. ಇಲ್ಲಿಯವರೆಗೆ ಹಣ್ಣು ಬೆಳೆಗಾರರ ಸಂಘದಲ್ಲಿ 60727, ನಾಡ ಕಚೇರಿಯಲ್ಲಿ 3732, ಗ್ರಾಮ ಪಂಚಾಯತಿಯಲ್ಲಿ 13465, ಗ್ರಾಮಲೆಕ್ಕಾಧಿಕಾರಿಗಳಲ್ಲಿ 15979 ಹಾಗೂ ನಾಗರಿಕ ಸೇವಾ ಕೇಂದ್ರದಲ್ಲಿ 523 ರೈತರಿಂದ ನೋಂದಣಿಗೆ ಸ್ವಯಂ ಘೋಷಣಾ ಅಜರ್ಿಗಳು ಬಂದಿರುವುದಾಗಿ ಸಭೆಯಲ್ಲಿ ತಿಳಿಸಲಾಯಿತು.

ಸಭೆಯಲ್ಲಿ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ದುಗರ್ೇಶ ರುದ್ರಾಕ್ಷಿ, ಉಪವಿಭಗಾಧಿಕಾರಿಗಳಾದ ಎಚ್.ಜಯಾ, ಮೊಹಮ್ಮದ ಇಕ್ರಮ, ಕೃಷಿ ಇಲಾಖೆಯ ಉಪನಿದರ್ೇಶಕ ಎಸ್.ಬಿ.ಕೊಂಗವಾಡ, ತೋಟಗಾರಿಕೆ ಉಪನಿದರ್ೇಶಕ ಪ್ರಭುರಾಜ ಹಿರೇಮಠ ಸೇರಿದಂತೆ ಆಯಾ ತಾಲೂಕಿನ  ತಹಶೀಲ್ದಾರರು ಉಪಸ್ಥಿತರಿದ್ದರು.