ಪೆಟ್ರೋಲ್, ಅಡುಗೆ ಎಣ್ಣೆ ಮಿತವಾಗಿ ಬಳಸಿ ಪ್ರಧಾನಿ ಮೋದಿ ಹೇಳಿಕೆ ಸ್ವಾಗತಿಸಿದ ಸಂಸದ ಕಾಗೇರಿ
MP Kageri welcomes PM Modi's statement on using petrol and cooking oil in moderation
ಕಾರವಾರ 11: ಪೆಟ್ರೋಲ್ , ಡಿಸೆಲ್, ಅಡುಗೆ ಎಣ್ಣೆ ಮಿತವಾಗಿ ಬಳಸಿ ಎಂಬ ಪ್ರಧಾನಿ ಮೋದಿ ಹೇಳಿಕೆಯನ್ನು ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಾಗತಿಸಿದರು. ಕಾರವಾರದಲ್ಲಿ ಸುದ್ದಿಗಾರರ ಜೊತೆ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರು ಮಾತನಾಡಿದರು. ಪ್ರಧಾನಿ ಹೇಳಿದ್ದನ್ನು ಜನ ಸ್ವಾಗತಿಸಬೇಕು. ದೇಶದ ಹಿತ ದಿಂದ ಪ್ರಧಾನಿ ಮೋದಿ ಅವರು ಒಂದು ವರ್ಷ ಕಾಲ ಬಂಗಾರ ಖರೀದಿಸದಂತೆ ಹೇಳಿದ್ದಾರೆ. ಗ್ಯಾಸ್, ಕ್ರೂಡ್ ಆಯಿಲ್, ರಸಗೊಬ್ಬರ ಗಳಿಗೆ ನಾವು ವಿದೇಶಗಳನ್ನು ಅವಲಂಬಿತರಾಗಿದ್ದೇವೆ. ಈ ಅವಲಂಬನೆಯನ್ನು ಕಡಿಮೆ ಮಾಡಬೇಕೆಂದು ಮೋದಿ ಅವರು ಜನರಿಗೆ ಕರೆ ಕೊಟ್ಟಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನರೇಂದ್ರ ಮೋದಿ ವಿಶ್ವನಾಯಕರಾಗಿರುವ ಕಾರಣ, ದೇಶದಲ್ಲಿ ಪೆಟ್ರೋಲ್, ಡಿಸೆಲ್, ಗ್ಯಾಸ್ ಸಿಗುತ್ತಿದೆ. ವಾಣಿಜ್ಯ ಸಿಲೆಂಡರ್ ದರ ಹೆಚ್ಚಾಗಿದೆ. ಆದರೂ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ. ಇಸ್ರೆಲ್ ಇರಾನ್ ಯುದ್ಧದ ಕಾರಣ ಸನ್ನಿವೇಶ ಗಂಭೀರ ವಾಗಿದೆ. ಬೇರೆ ದೇಶಗಳು ಲಾಕ್ ಡೌನ್ ಆಗಿದ್ದರೂ, ನಮ್ಮಲ್ಲಿ ಅಂತಹ ಸ್ಥಿತಿ ಇನ್ನೂ ಇಲ್ಲ ಎಂದು ಸಂಸದ ಕಾಗೇರಿ ಸಮರ್ಥನೆ ಮಾಡಿ ಕೊಂಡರು. ಪ್ರಧಾನ ಮಂತ್ರಿ ಮೋದಿ ಕರೋನ ಸಂದರ್ಭವನ್ನು ಹೇಗೆ ಎದುರಿಸಿದ್ದಾರೆ ಎನ್ನುವುದು ನಮ್ಮ ಮುಂದೆ ಇದೆ ಎಂದ ಸಂಸದ ಕಾಗೇರಿ, ಜಗತ್ತಿನ ಚಿತ್ರಣ ನಮ್ಮ ಕಣ್ಣ ಮುಂದೆ ಇದೆ. ಜಗತ್ತಿನ ಎದುರುಗಡೆ ಸವಾಲಿನ ಸಂದರ್ಭ ಉಂಟಾಗಿದೆ. ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಆಗಿದೆ.
ಆದರೂ ದೇಶದಲ್ಲಿ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರ. ದೇಶಕ್ಕೆ ಗ್ಯಾಸ್, ಕ್ರೂಡ್ ಆಯಿಲ್ ಬರುವುದು ನಿಂತಿಲ್ಲ. ಈ ಸನ್ನಿವೇಶದಲ್ಲಿ ಪ್ರಧಾನಿ ಅವರು ನಿಯಂತ್ರಣ ಮಿತಿಯ ಮಾತು ಹೇಳಿದ್ದಾರೆಂದರೆ, ಅದನ್ನ ನಾವು ಪಾಲಿಸಬೇಕಾಗಿದೆ. ನಾವು ಕ್ರೂಡ್ ಆಯಿಲ್, ಪೆಟ್ರೋಲ್, ರಸಗೊಬ್ಬರ ಸೇರಿದಂತೆ ಅನೇಕ ವಸ್ತು ವಿದೇಶಕ್ಕೆ ಅವಲಂಬಿತರಾಗಿದ್ದೇವೆ. ಇದರ ಮಿತ ಬಳಕೆಯಿಂದ ಮುಂದೆ ಆಗುಬಹುದಾದ ಸಮಸ್ಯೆ ತಡೆಯಲು ಪ್ರಧಾನಿ ಹೇಳಿದನ್ನ ನಾವು ಪಾಲಿಸಬೇಕಾಗಿದೆ ಎಂದು ಸಂಸದ ಕಾಗೇರಿ ನುಡಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 