ಸಮಾಜ ಸೇವೆ ಗುಣ ಎಲ್ಲರಲ್ಲೂ ಬರಬೇಕು : ಮಾಕಪ್ಪನವರ

ಸಮಾಜ ಸೇವೆ ಗುಣ ಎಲ್ಲರಲ್ಲೂ ಬರಬೇಕು :  ಮಾಕಪ್ಪನವರ The quality of social service should be instilled in everyone: Makappa

  ಶಿಗ್ಗಾವಿ   21:  ಸಮಾಜ ಸೇವೆ ಮಾಡಬೇಕು ಎನ್ನುವ ಮನಸು ಕೆಲವೇ ಕೆಲವು ಜನರಲ್ಲಿ ಇರುತ್ತದೆ ಅದು ಎಲ್ಲರಿಗೂ ಬರುವುದಿಲ್ಲ ಎಂದು ಡಾ. ಶರೀಫ ಮಾಕಪ್ಪನವರ ಹೇಳಿದರು.         ತಾಲೂಕಿನ ಹುಲಗೂರ ಗ್ರಾಮದಲ್ಲಿ ಯುವ ಮುಖಂಡರಾದ ಹನಮಂತಪ್ಪ ಕಾಳಿ ವತಿಯಿಂದ ಖಾದರಲಿಂಗ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಾಲ್ಯದ ದಿನಗಳಲ್ಲಿ ಕಷ್ಟು ಪಟ್ಟು ವಿದ್ಯಾಭ್ಯಾಸ ಮಾಡಿ ಸಾಧನೆ ಮಾಡಿದರು. ಅವರ ಸಾಧನೆಯ ಹಾದಿ ಮತ್ತು ಆದರ್ಶ ಗುಣಗಳನ್ನು ಇಂದಿನ ಮಕ್ಕಳು ಹಾಗೂ ಯುವಕರು ಅಳವಡಿಸಿಕೊಳ್ಳಬೇಕು.

ಚಲವಾದಿ ಮಹಾಸಭಾ ತಾಲೂಕ ಅಧ್ಯಕ್ಷ ಪ್ರಮೋದ್ ಚಲವಾದಿ ಮಾತನಾಡಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ  ಹೆಸರಿನಲ್ಲಿ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ ಮಾಡುವುದರ ಮೂಲಕ ಹನಮಂತಪ್ಪ ಕಾಳೆ ಅವರು ಮಹನೀಯರನ್ನು ನೆನೆಯುವ ಕೆಲಸ ಮಾಡುತ್ತಿರುವದು ಶ್ಲಾಘನೀಯ ಎಂದರು. ಶಾಲೆಯ ನಿರ್ದೇಶಕ ಚಂದ್ರು ಆಚೆಬಣ್ಣದ, ಮುಖ್ಯೋಪಾಧ್ಯಾಯ ವಿ. ಬಿ ಕುರುಬರ ಮಾತನಾಡಿದರು. ಈ ಸಂದರ್ಭದಲ್ಲಿ ಗೊಯ್ಯಪ್ಪ ಚಲವಾದಿ, ಪ್ರೀತಮ್ ಅರಳಿಕಟ್ಟಿ, ಶ್ರೀಕಾಂತ್ ಹೊನ್ನಳ್ಳಿ, ಲಿಂಗರಾಜ್ ಬೋರಣ್ಣವರ, ಲಕ್ಷ್ಮಣ ಬಾಲಪ್ಪನವರ, ಗೀರೀಶ ಮರಿಯಮ್ಮನವರ, ಕರೆಪ್ಪ ಬಾಲಪ್ಪನವರ ಸೇರಿದಂತೆ ಶಾಲೆಯ ಶಿಕ್ಷಕರು ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.