ಲಕ್ನೋ, ಫೆ 18, ತವರು ಲೋಕಸಭಾ ಕ್ಷೇತ್ರ ವಾರಣಾಸಿಗೆ ಒಂದು ದಿನದ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕೈಗಾಡಿ ಎಳೆಯುವ ವ್ಯಕ್ತಿ ಮಂಗಲ್ ಕೇವಾಟ್ ಅವರನ್ನು ಭೇಟಿಯಾಗಿ ಮಗಳ ಮದುವೆ, ಕುಟುಂಬದ ಆರೋಗ್ಯದ ಬಗ್ಗೆ ಉಭಯ ಕುಶಲೋಪರಿ ನಡೆಸಿದ್ದಾರೆ. ಕೇವಾಟ್ ತಮ್ಮ ಮಗಳ ಮದುವೆಯ ಆಹ್ವಾನ ಪತ್ರಿಕೆಯನ್ನು ಪ್ರಧಾನಿಗೆ ಕಳುಹಿಸಿಕೊಟ್ಟಿದ್ದ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗಿ, ಕುಟುಂಬದ ಕುಶಲೋಪರಿ ವಿಚಾರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿವೆ.
ಮಂಗಲ್ ಕೇವಾಟ್ ಅವರ ಆರೋಗ್ಯ ಹಾಗೂ ಕುಟುಂಬದ ಬಗ್ಗೆ ಕುಶಲೋಪರಿ ವಿಚಾರಿಸಿದ ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ್ ಅಭಿಯಾನಕ್ಕೆ ಕೇವಾಟ್ ನೀಡಿದ ಕೊಡುಗೆ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿಯೂ ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಅಭಿಯಾನದಿಂದ ಪ್ರೇರಣೆಗೊಂಡು ತನ್ನ ಗ್ರಾಮದಲ್ಲಿ ಹರಿಯುವ ಗಂಗಾನದಿ ದಡವನ್ನು ಕೇವಾಟ್ ಸ್ವಚ್ಛಗೊಳಿಸಿದ್ದರು. ನಾವು ಮಗಳ ಆಹ್ವಾನ ಪತ್ರಿಕೆಯನ್ನು ಮೊದಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದರು. ಕೇವಾಟ್ ಖುದ್ದು ದಿಲ್ಲಿಯ ಪ್ರಧಾನಮಂತ್ರಿ ಕಚೇರಿಗೂ ತೆರಳಿ ಮಗಳ ಮದುವೆಯ ಆಹ್ವಾನ ಪತ್ರಿಕೆ ಕೊಟ್ಟಿದ್ದರು ಇದೆ .8ರಂದು ಪ್ರಧಾನಿ ಮೋದಿ ಅವರಿಂದ ಅಭಿನಂದನಾ ಪತ್ರ ಬಂದಿದ್ದು, ಇದರಿಂದ ನಮಗೆ ತುಂಬಾ ಸಂತಸವಾಗಿದೆ ಎಂದು ಮಂಗಲ್ ಕೇವಾಟ್ ಸುದ್ದಿಗಾರರಿಗೆ ತಿಳಿಸಿದ್ದರು. ಕಳೆದ ಭಾನುವಾರ ವಾರಣಾಸಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನ್ನು ಖುದ್ದಾಗಿ ಮಾತನಾಡಿಸಿರುವುದು ಜೀವನದಲ್ಲಿ ಎಂದೂ ಮರೆಯಲಾರದ ಘಟನೆ ಎಂದೂ ಮಂಗಲ್ ಕೇವಾಟ್ ಪತ್ನಿ ರೇಣು ದೇವಿ ಬಹಳ ಖಷಿಯಿಂದಲೇ ಹೇಳಿಕೊಂಡಿದ್ದಾರೆ .