ಲೋಕದರ್ಶನ ವರದಿ
ಸಂಬರಗಿ 26: ರಾಜ್ಯದಲ್ಲಿ ಬಿ.ಜೆ.ಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ದಿ ಕಾಮಗಾರಿಗೆ ಹೆಚ್ಚು ಒತ್ತು ನೀಡಿದ್ದು, ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ನೆನೆಗುದ್ದಿಗೆ ಬಿದ್ದಿರುವ ನೀರಾವರಿ ಯೋಜನೆ ಕಾಮಗಾರಿಗಳಿಗೆ ಹೆಚ್ಚು ಪ್ರಾತಿನಿತ್ಯ ನೀಡಲಾಗುವುದೆಂದು ಶಾಸಕರಾದ ಮಹೇಶ ಕುಮಠಳ್ಳಿ ಹೇಳಿದರು. ತಂಗಡಿ ಗ್ರಾಮದಲ್ಲಿ ತಂಗಡಿಯಿಂದ ಬಾರಿಗಡ್ಡೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಕ್ಷೇತ್ರದಲ್ಲಿ ತೋಟದ ರಸ್ತೆ, ಸಮುಧಾಯ ಭವನ, ಶಾಲಾ ಕೊಠಡಿ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಗ್ರಾಮದಲ್ಲಿ ಅವಶ್ಯಕವಿರುವ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಬಾರಿಗಡ್ಡೆ ರಸ್ತೆ ಕಾಮಗಾರಿಗೆ 18 ಲಕ್ಷ ರೂಪಾಯಿ ಅನುದಾನ ಮಂಜೂರಾತಿಯಾಗಿದ್ದು, ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಕೆಲಸವನ್ನು ಪೂರ್ಣಗೊಳಿಸಬೇಕೆಂದು ಸಲಹೆ ನೀಡಿದರು.
ಈ ವೇಳೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷರಾದ ಚಿದಾನಂದ ಸವದಿ, ರಮೇಶ ಪಾಟೀಲ, ಶ್ರೀಶೈಲ ನಾಯಿಕ, ಕಾಂತ ಪಾಟೀಲ, ರಾಜಾರಾಮ ಪಾಟೀಲ, ರಾಮಚಂದ್ರ ಪಾಟೀಲ, ಪಾಂಡುರಂಗ ಪಾಟೀಲ, ಪೋಪಟ ಮೋರೆ, ಶಂಕರ ಮೋರೆ, ಎಮ್.ವಾಯ್. ಹಳ್ಳಿ, ವಿಜಯ ಲಕ್ಕೆಗೌಡರ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ದೇವರಡ್ಡಿ ಗ್ರಾಮದಲ್ಲಿ 20 ಲಕ್ಷ ರೂಪಾಯಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಮಹೇಶ ಕುಮಠಳ್ಳಿ ಚಾಲನೆ ನೀಡಿದರು. ಈ ವೇಳೆ ಚಿದಾನಂದ ಸವದಿ, ಶ್ರೀಶೈಲ ನಾಯಿಕ, ಪ್ರಭಾಕರ ಹಂಜಿ, ಶೀಪು ನಾಯಿಕ, ಸುನೀಲ ಚವ್ಹಾಣ, ಬಾಹುಸಾಹೇಬ ಜಾಧವ, ಬಸವರಾಜ ಕನಕರಡ್ಡಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.