ಚೆಕ್ ಡ್ಯಾಮ ನಿರ್ಮಾಣ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿ ಪೂಜೆ
MLA Vishwas Vaidya Bhumi Pooja for check dam construction work
ಯರಗಟ್ಟಿ 19: ಸಮೀಪದ ಮೆಳ್ಳಿಕೇರಿ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿ ಮೆಳ್ಳಿಕೇರಿ ಗ್ರಾಮ ಹತ್ತಿರದ ಹಳ್ಳಕ್ಕೆ "ಚೆಕ್ ಡ್ಯಾಮ" (ಸೈಟ-1, 2 ್ಘ 3) ಅಂದಾಜು ಮೊತ್ತ ರೂ.65 ಲಕ್ಷ ಮತ್ತು ರೂ.70 ಲಕ್ಷ. ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಶಾಸಕ ವಿಶ್ವಾಸ ವೈದ್ಯ. ಮಳ್ಳಿಕೇರಿ ವ್ಯಾಪ್ತಿ ಪ್ರದೇಶಗಳಲ್ಲಿ ಹಳ್ಳಕ್ಕೆ ಚೆಕ್ ಡ್ಯಾಂಗಳನ್ನು ನಿರ್ಮಿಸುವುದರಿಂದ ಮಳೆಗಾಲದಲ್ಲಿ ನೀರು ನಿಂತ ಅಂತರ್ಜಲ ಹೆಚ್ಚಾಗುತ್ತದೆ.
ಕಳೆದ ಬಾರಿಯ ಪ್ರವಾಹದಲ್ಲಿ ನೀರು ನಿಲ್ಲದೇ ರಸ್ತೆಯಲ್ಲಿ ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮುಂದೆ ಅಂತಹ ಸಮಸ್ಯೆ ಬಾರದಂತೆ ಈಗ ಸರ್ಕಾರದಿಂದ ಅನುದಾನ ತಂದು ಚೆಕ್ ಡ್ಯಾಂಗಳನ್ನು ಪುನಶ್ಚೇತನ ಗೊಳಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಮಳೆ ನೀರು ನಿಂತ ಪರಿಣಾಮ ರೈತರು ವ್ಯವಸಾಯ ಮಾಡಲು ಅನುಕೂಲವಾಗುತ್ತದೆ’ ಎಂದು ತಿಳಿಸಿದರು. ಈ ವೇಳೆ ಬೆಮೂಲ ನಿರ್ದೇಶಕ ಶಂಕರ ಇಟ್ನಾಳ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನ್ನವರ , ಆರ್ ಕೆ ಪಟಾತ್, ಪಡೆಪ್ಪ ನರಿ, ಎಪಿಎಂಸಿ ಸದಸ್ಯ ಲಕ್ಷ್ಮಣ ದಳವಾಯಿ, ನಾಗರಾಜ ದೇಸಾಯಿ , ಬಸವರಾಜ ಪೂಜೇರಿ, ಭೀಮಶಿ ಕುಲಗೋಡ,ವಿಠ್ಠಲ ದಳವಾಯಿ, ಪಕೀರ್ಪ ಕುರಬೇಟ, ಹಣಮಂತ ಇಟ್ನಾಳ, ಗೂಳಪ್ಪ ಭಾವಿಕಟ್ಟಿ, ಮಾರುತಿ ಉಪ್ಪಾರ, ಗ್ರಾಮದ ಗುರು ಹಿರಿಯರು, ಸ್ಥಳೀಯ ಮುಖಂಡರು, ರೈತಬಾಂಧವರು, ಯುವ ಮಿತ್ರರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 